ಕನ್ನಡದ ಹೀರೋಯಿನ್ ಗಳಾದ್ರು ಐಟಂ ಬ್ಯೂಟೀಸ್

By ಜೀವನರಸಿಕ

ಕನ್ನಡದಲ್ಲಿ ಒಂದು ಸಿನಿಮಾ ಮಾಡೋ ಹೀರೋಯಿನ್ ಗಳಿಗೆ ಎಷ್ಟು ಸಂಭಾವನೆ ಸಿಗಬಹುದು. ರಮ್ಯಾ, ರಾಧಿಕಾ, ರಾಗಿಣಿ, ಐಂದ್ರಿತಾರಂತಹವರಿಗಾದರೆ 20-25 ಲಕ್ಷ ಎಣಿಸಬಹುದು. ಇನ್ನು ಮೂರ್ನಾಲ್ಕು ಸಿನಿಮಾ ಮಾಡಿರೋ ನಟಿಯರಿಗೆ ನಾಕೈದು ಲಕ್ಷ ಸಿಗಬಹುದು. ಆದರೆ ಒಂದು ಐಟಂ ಸಾಂಗ್ ಮಾಡಿದರೆ ಎಷ್ಟು ಕೊಡ್ತಾರೆ ಗೊತ್ತಾ? ಮಿನಿಮಮ್ ಅಂದ್ರೆ ಐದು ಲಕ್ಷ ಗ್ಯಾರಂಟಿ.

ಐಟಂ ಸಾಂಗ್ ಶೂಟಿಂಗ್ ನಾಲ್ಕು ದಿನ. ನೋ ಡಬ್ಬಿಂಗ್, ನೋ ಪ್ರೊಮೋಷನ್. ಅದೇ ಸಿನಿಮಾ ಮಾಡಿದರೆ ನೂರಾರು ದಿನ ಶೂಟಿಂಗ್, ಡಬ್ಬಿಂಗ್, ಪ್ರೊಮೋಷನ್, ತಲೆನೋವು. ನೀವೇ ಹೇಳಿ ಐಟಂ ಸಾಂಗ್ ಬೆಸ್ಟಾ, ಸಿನಿಮಾನಾ? ಇನ್ನು ಹೀರೋಯಿನ್ ಗಳಿಗೆ ಐಟಂ ಸಾಂಗ್ ಅಂದರೆ ಅಲರ್ಜಿಯಾಗ್ತಿದ್ದ ಕಾಲವೊಂದಿತ್ತು. ಹೀರೋಯಿನ್ ಐಟಂ ಸಾಂಗ್ ಮಾಡೋದಾ? ಹೀರೋಯಿನ್ ಗೂ ಐಟಂ ಡಾನ್ಸರ್ಸ್ ಗೂ ವ್ಯತ್ಯಾಸಾನೇ ಇಲ್ವಾ ಅಂತ ಗಾಂಧಿನಗರದ ಪಂಡಿತರು ವಾದಿಸ್ತಿದ್ರು.

ಈಗ ಸ್ಯಾಂಡಲ್ವುಡ್ ನಲ್ಲೂ ಬದಲಾದ ಟ್ರೆಂಡ್ ನ ಗಾಳಿ ಬೀಸಿದೆ. ಇದಕ್ಕೆಲ್ಲಾ ಮೇಲೆ ಹೇಳಿದ ಸಿಂಪಲ್ ಲಾಜಿಕ್ಕೇ ಕಾರಣ. ಕನ್ನಡದ ಹೀರೋಯಿನ್ ಗಳೂ ನಾವ್ಯಾರಿಗೆ ಕಮ್ಮಿ ಅಂತ ಸೊಂಟ ಬಳುಕಿಸ್ತಿದ್ದಾರೆ. ತಮ್ಮ ಚಿತ್ರದಲ್ಲಿ ತಾವೇ ಐಟಂ ಸಾಂಗ್ ಗೆ ಸ್ಟೆಪ್ಸ್ ಹಾಕೋದರಿಂದ ಶುರುವಾದ ಈ ಐಟಂ ಸಾಂಗ್ ಜಮಾನಾ ಈಗ ಮತ್ತೊಂದು ಸಿನಿಮಾದಲ್ಲಿ ಸೊಂಟ ಬಳುಕಿಸೋವರೆಗೂ ಮುಂದುವರೆದಿದೆ. ಅಂದಹಾಗೆ ಈ ಮಾಡರ್ನ್ ಟ್ರೆಂಡ್ ನಲ್ಲಿ ಐಟಂ ಬ್ಯೂಟಿಗಳಾಗಿ ಮಿಂಚಿದ ಕನ್ನಡದ ನಾಯಕಿಯರ ಒಂದು ಝಲಕ್ ಇಲ್ಲಿದೆ. ಸ್ಲೈಡ್ ನಲ್ಲಿ ನೋಡಿ ಆನಂದಿಸಿ.

ಪದ್ಮಾವತಿಯ ಪವರ್ ಗೆ ಪಡ್ಡೆಗಳು ಫಿದಾ

ಪದ್ಮಾವತಿಯ ಪವರ್ ಗೆ ಪಡ್ಡೆಗಳು ಫಿದಾ

ಮೋಹಕತಾರೆ ರಮ್ಯಾ 'ಜಾನಿಮೇರಾ ನಾಮ್ ಪ್ರೀತಿ ಮೇರಾ ಕಾಮ್' ಸಿನಿಮಾದಲ್ಲಿ "ಕೈಯ್ಯಿದೆ ಕಾಲಿದೆ ಡಾನ್ಸು ಮಾಡು ಅಂದ್ರು..." ಊರಿಗೊಬ್ಳೆ ಪದ್ಮಾವತಿಯ ಪವರ್ ಗೆ ಪಡ್ಡೆಗಳು ಫಿದಾ ಆದರು.

ರಮ್ಯಾಗಿಂತ ನಾನೇನು ಕಮ್ಮಿ ಎಂದ ರಾಗಿಣಿ

ರಮ್ಯಾಗಿಂತ ನಾನೇನು ಕಮ್ಮಿ ಎಂದ ರಾಗಿಣಿ

ರಮ್ಯಾಗಿಂತ ನಾನೇನು ಕಮ್ಮಿ ಅಂತ ಬೆಣ್ಣೆ ರಾಗಿಣಿ 'ಕಳ್ಳಮಳ್ಳಸುಳ್ಳ' ಸಿನಿಮಾದಲ್ಲಿ "ತುಪ್ಪ ಬೇಕಾ ತುಪ್ಪ..." ಅಂತ ಚಿತ್ರರಸಿಕರ ಹೃದಯಕ್ಕೆ ಲಗ್ಗೆ ಇಟ್ರು.

ದಂಡುಪಾಳ್ಯ ಬೆಡಗಿ ಪೂಜಾಗಾಂಧಿ ಐಟಂ

ದಂಡುಪಾಳ್ಯ ಬೆಡಗಿ ಪೂಜಾಗಾಂಧಿ ಐಟಂ

'ದಂಡುಪಾಳ್ಯ'ದಲ್ಲಿ ಬೆನ್ನು ತೋರಿಸಿ ಪಡ್ಡೆಗಳ ಎದೆ ಬೆಚ್ಚಗಾಗಿಸಿದ್ದ ಪೂಜಾಗಾಂಧಿ ಕೂಡ ಐಟಂ ಬ್ಯೂಟಿಯಾದರು. 'ಡೈರೆಕ್ಟರ್ಸ್ ಸ್ಪೆಷಲ್' ಸಿನಿಮಾದಲ್ಲಿ ಪೂಜಾ ಐಟಂ ಗರ್ಲ್ ಆಗಿ "ಕಣ್ಣಲೆ ಯಾಕೆ ನೆಕ್ತೀಯಾ..." ಎಂದು ಮೋಡಿ ಮಾಡಿದರು.

ನೀತೂ ಎರ್ರಾ ಬಿರ್ರಿ ಸ್ಟೆಪ್ಸ್ ಹಾಕಿದ್ದು

ನೀತೂ ಎರ್ರಾ ಬಿರ್ರಿ ಸ್ಟೆಪ್ಸ್ ಹಾಕಿದ್ದು

ಅಷ್ಟಾಗಿ ಸಿನಿಮಾಗಳಿಲ್ಲದೆ ಸೈಲೆಂಟಾಗಿದ್ದ 'ಗಾಳಿಪಟ'ದ ಬೆಡಗಿ ನೀತೂ ಹೊಸಬರ 'ಜೀತು' ಸಿನಿಮಾದಲ್ಲಿ ಯರ್ರಾಬಿರ್ರಿ ಸ್ಟೆಪ್ಸ್ ಹಾಕಿದರು. ಇದಕ್ಕಿಂತ ಹಿಂದೆ ನೀತು 'ಬೆಂಗಳೂರು ಮೆಟ್ರೋ' ಸಿನಿಮಾಗೂ ಐಟಂ ಗರ್ಲ್ ಆದ್ರು. ಆದ್ರೆ ಸಿನಿಮಾ ಇನ್ನೂ ರೆಡಿಯಾಗಿಲ್ಲ.

ಭರ್ಜರಿ ಸ್ಪೆಪ್ಸ್ ಹಾಕಿದ ಭಾವನಾ ರಾವ್

ಭರ್ಜರಿ ಸ್ಪೆಪ್ಸ್ ಹಾಕಿದ ಭಾವನಾ ರಾವ್

'ಗಾಳಿಪಟ'ದ ಮತ್ತೊಬ್ಬಳು ಚೆಲುವೆ ಭಾವನಾ ರಾವ್ ಕೂಡ ಐಟಂ ಬ್ಯೂಟಿಯಾಗಿ ಮಿಂಚ್ತಿದ್ದಾರೆ. ಇತ್ತೀಚೆಗೆ 'ಬಹುಪರಾಕ್' ಸಿನಿಮಾಗೆ ಕಾಕ್ಸ್ ಟೌನ್ ಸ್ಮಶಾನದಲ್ಲಿ ಭರ್ಜರಿ ಸ್ಟೆಪ್ಸ್ ಹಾಕಿದರು.

ಇನ್ನೊಂದು ಐಟಂ ಡಾಲ್ ರಮ್ಯಾ ಬಾರ್ನಾ

ಇನ್ನೊಂದು ಐಟಂ ಡಾಲ್ ರಮ್ಯಾ ಬಾರ್ನಾ

ಒಂದಷ್ಟು ಸಿನಿಮಾ ಆದರೂ ಕೂಡ ಸ್ಯಾಂಡಲ್ ವುಡಲ್ಲಿ ಗಟ್ಟಿಯಾಗಿ ನೆಲೆ ನಿಲ್ಲೋಕೆ ಒದ್ದಾಡ್ತಾ ಇರೋ ರಮ್ಯಾ ಬಾರ್ನಾ ಇತ್ತೀಚೆಗೆ ಐಟಂ ಡಾಲ್ ಆಗಿ ಕಾಣಿಸಿಕೊಂಡಿದ್ದಾರೆ.

ಹರ್ಷಿಕಾ ಪೂಣಚ್ಚ ಕೂಡ ಯರಿಗೂ ಕಮ್ಮಿಯಿಲ್ಲ

ಹರ್ಷಿಕಾ ಪೂಣಚ್ಚ ಕೂಡ ಯರಿಗೂ ಕಮ್ಮಿಯಿಲ್ಲ

ಕೊಡಗಿನ ಬ್ಯೂಟಿ ಹರ್ಷಿಕಾ ಪೂಣಚ್ಚ ಕೂಡ ಈ ಲಾಜಿಕ್ಕಿಂದ ಹೊರತಲ್ಲ. 'ಕೇಸ್ ನಂ 18/9' ಸಿನಿಮಾದಲ್ಲಿ ಹರ್ಷಿಕಾ ಹಾಟ್ ಡಾಲ್ ಆಗಿ ಮಿಂಚಿದರು.

ಖಾಲಿ ಉಳಿದಿರೋರಿಗೆ ಐಟಂ ಬೆಸ್ಟ್ ಆಪ್ಷನ್

ಖಾಲಿ ಉಳಿದಿರೋರಿಗೆ ಐಟಂ ಬೆಸ್ಟ್ ಆಪ್ಷನ್

ಈ ಬ್ಯೂಟಿಗಳು ಐಟಂ ಡಾಲ್ ಗಳಾಗೋಕೆ ಮತ್ತೊಂದು ಕಾರಣವೂ ಇದೆ. ಒಂದೆರೆಡು ಸಿನಿಮಾ ಮಾಡಿ ಅವಕಾಶ ಇಲ್ಲದೇ ಖಾಲಿ ಉಳಿದಿರೋರಿಗೆ ಈಗ ಇದೊಂದು ಬೆಸ್ಟ್ ಆಪ್ಷನ್ ಆಗ್ತಿದೆ.

More from Filmibeat

English summary
Here is the list of Kannada heroines who become item beauties. Lucky star Ramya, Pooja Gandhi, Ragini Dwivedi and many more actresses done special numbers in Kannada. No dubbing, no promotion for item numbers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X