ಪ್ರತಿಭಾವಂತ 'ನಾಯಕಿ'ಯರಿಗೆ 'ಕನ್ನಡ ಚಿತ್ರರಂಗ'ದಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ ; ಸಿಂಹಿಣಿ ಸಂಗೀತಾ ಬೇಸರ..!
ಹೇಳಿ..ಕೇಳಿ.. ಇದು ''ಬಣ್ಣ''ದ ಲೋಕ. ಇಲ್ಲಿ ''ಪ್ರತಿಭೆ'' ಇದ್ದೋರಿಗೆ ''ಪ್ರತಿಫಲ'' ಕಟ್ಟಿಟ್ಟಬುತ್ತಿ ಅನ್ನುವ ಮಾತು ಹಿಂದೆ ಎಲ್ಲ ಕೇಳಿ ಬರ್ತಾ ಇತ್ತು.ಆದರೆ ಈಗ ಕಾಲ ಬದಲಾಗಿದೆ. ಬದಲಾದ ಕಾಲಘಟ್ಟದಲ್ಲಿ ಪ್ರತಿಭೆಗೆ ''ಕವಡೆ ಕಾಸಿನ ಕಿಮ್ಮತ್ತಿಲ್ಲ''. ''ಭಾವನೆ''ಗಳಿಗೆ ''ಬೆಲೆ'' ಇಲ್ಲ. ಎಲ್ಲವೂ ಈಗ ''ಹಣ'' ನಿರ್ಧಾರ ಮಾಡುತ್ತೆ. ಈ ಕಾರಣಕ್ಕಾಗಿಯೇ ''ಹಿತ್ತಲ ಗಿಡ ಮದ್ದಲ್ಲ'' ಅನ್ನೋ ಹಂಗೆ ''ನಮ್ಮ ನಟಿ''ಯರನ್ನ ಬಿಟ್ಟು ''ಎಲ್ಲೆಲ್ಲಿಂದಲೋ ನಾಯಕಿ''ಯರನ್ನ ಹುಡುಕಿಕೊಂಡು ಕರೆದುಕೊಂಡು ಬರುತ್ತಾರೆ. ಅವರಲ್ಲಿ ''ಪ್ರತಿಭೆ'' ಇದೆಯೋ ಇಲ್ಲವೋ .. ಒಟ್ನಲ್ಲಿ ಆ ಸಿನಿಮಾದ ''ಭವಿಷ್ಯ'' ಏನಾದರೂ ಆಗಲಿ ಕೊಟ್ಟಷ್ಟು ''ಹಣ'' ತಗೊಂಡು ಮುಖಕ್ಕೆ ''ಬಣ್ಣ'' ಹಚ್ಕೊಂಡು ಕ್ಯಾಮರಾ ಮುಂದೆ ನಿಂತರೆ ಸಾಕು ಎಂಬ ''ಮನಸ್ಥಿತಿ'' ಈಗೀಗ ''ಕನ್ನಡ ಚಿತ್ರರಂಗ''ದಲ್ಲಿ ಹೆಚ್ಚಾಗ್ತಾನೇ ಇದೆ. ಬಿಗ್ ಬಾಸ್ ನ ''ಸಿಂಹಿಣಿ ಸಂಗೀತಾ ಶೃಂಗೇರಿ'' ಇತ್ತೀಚೆಗೆ ಹೇಳಿದ್ದು ಇದನ್ನೇ.
ಹೌದು, ಕನ್ನಡ ಚಿತ್ರರಂಗದಲ್ಲಿ, ''ಕನ್ನಡದ ಪ್ರತಿಭಾವಂತ ನಟಿ''ಯರಿಗೆ ಬೆಲೆ ಇಲ್ಲ ಅನ್ನುವ ಮಾತು ಇಂದು ನಿನ್ನೆಯದಲ್ಲ ಅನಾದಿಕಾಲದಿಂದ ಈ ಮಾತು ಕೇಳಿ ಬರುತ್ತಾನೆ ಇದೆ. ನಾಯಕರಿಗೆ ಕೊಡುವ ''ಸಂಭಾವನೆ''ಯಲ್ಲಿ ಕಾಲು ಭಾಗದಷ್ಟು ''ಸಂಭಾವನೆ'' ಕೂಡ ನಾಯಕಿಯರಿಗೆ ಸಿಗಲ್ಲ ಅನ್ನುವ ''ನೋವು'' ಅನೇಕ ಚೆಲುವೆಯರಲ್ಲಿದೆ. ''ಸಂಗೀತಾ ಶೃಂಗೇರಿ'' ಅವರಲ್ಲಿಯೂ ಕೂಡ ಇದೇ ನೋವು ಇದೆ. ಹೀಗಾಗಿಯೇ ತಮ್ಮ ಮುಂಬರುವ ''ಮಾರಿ ಗೋಲ್ಡ್'' ಚಿತ್ರದ ''ಪ್ರಚಾರ''ದ ಸಮಯದಲ್ಲಿ ''ಸಂಗೀತಾ ಶೃಂಗೇರಿ'' ತಮ್ಮ ''ಮನದ ನೋವ''ನ್ನ ಹೊರ ಹಾಕಿದ್ದಾರೆ. ''ನಮ್ಮಲ್ಲಿ ಜೇಬಿಂದ ದುಡ್ಡು ತೆಗೆಯೋಕೆ ಅನೇಕರು ಹಿಂಜರಿಯುತ್ತಾರೆ'' ಎಂದಿದ್ದಾರೆ.

ಕನ್ನಡ ಚಿತ್ರರಂಗದ ಹಿರಿಯ ಪತ್ರಕರ್ತರಾದ ''ಬಿ.ಗಣಪತಿ'' ಅವರ ಯುಟ್ಯೂಬ್ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಸಂಗೀತಾ, ಕನ್ನಡ ಚಿತ್ರರಂಗದ ''ಕಥೆ'' ಹಾಗೂ ''ವ್ಯಥೆ'' ಹೇಳಿದ್ದಾರೆ. ''ಕಥೆ'' ಹೇಳುವ ಮುನ್ನವೇ ''ಸಂಭಾವನೆ'' ವಿಚಾರ ಮಾತನಾಡಲು ಇಲ್ಲಿ ಅನೇಕರು ಪ್ರಯತ್ನವನ್ನ ಪಡ್ತಾರೆ ಎಂದಿರುವ ಸಂಗೀತಾ, ಒಂದು ವೇಳೆ ನಾವು ಅವರ ''ವ್ಯಾಪ್ತಿ ಪ್ರದೇಶ''ದಿಂದ ಆಚೆ ಇದ್ದರೆ , ಯಾರು ''ಕಡಿಮೆ ಹಣ'' ಕೇಳುತ್ತಾರೆ ಅವರನ್ನೇ ತಮ್ಮ ''ಚಿತ್ರ''ಕ್ಕೆ ''ನಾಯಕಿ''ಯನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ ಎಂದಿದ್ದಾರೆ.

ಮುಂದುವರೆದು ಇಲ್ಲಿ ''ಟ್ಯಾಲೆಂಟ್'' ವಿಷಯನೇ ಬರಲ್ಲ, ಟ್ಯಾಲೆಂಟ್ ಯಾರಿಗೂ ಬೇಕಾಗಿಯೂ ಇಲ್ಲ ಎಂದಿರುವ ಸಂಗೀತಾ ನಮ್ಮಲ್ಲಿ ನಮ್ಮ ಚಿತ್ರಕ್ಕೆ ಇವರೇ ನಾಯಕಿಯಾಗಬೇಕೆಂದು ''ಪಟ್ಟು'' ಹಿಡಿದು ''ನಿರ್ದೇಶಕ''ರು ಯಾಕೆ ಕುಳಿತುಕೊಳ್ಳಲ್ಲ ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ನನಗೆ ಇನ್ನೂ ಉತ್ತರ ಸಿಕ್ಕಿಲ್ಲ ಅಂದಿದ್ದಾರೆ. ನಿರ್ದೇಶಕರು ನಿರ್ಮಾಪಕರ ಬಳಿ ನನ್ನ ಚಿತ್ರಕ್ಕೆ ಇವರೇ ನಾಯಕ ಅಥವಾ ನಾಯಕಿಯಾಗಬೇಕೆಂದು ಪಟ್ಟು ಹಿಡಿದಾಗ ಆ ಚಿತ್ರಕ್ಕೆ ಹಾಗೂ ''ಪಾತ್ರ''ಕ್ಕೆ ''ನ್ಯಾಯ'' ಸಿಗುತ್ತೆ ಎಂದಿದ್ದಾರೆ. ಹೀಗಾದಾಗ ಸಿನಿಮಾ ಕೂಡ ಗೆಲ್ಲುತ್ತೆ ಯಾಕೆ ಗೆಲ್ಲಲ್ಲ ಎಂಬ ಪ್ರಶ್ನೆಯನ್ನೂ ಕೇಳಿದ್ದಾರೆ ಸಂಗೀತಾ ಶೃಂಗೇರಿ.
ಇನ್ನೂ ಚಿತ್ರರಂಗಕ್ಕೆ ಕನಸನ್ನೊತ್ತು ಬರುವವರ ಸಂಖ್ಯೆ ಈಗ ಸಿಕ್ಕಾಪಟ್ಟೆ ಕಡಿಮೆಯಾಗಿದೆ. ''ದುಡ್ಡು'' ಮಾಡಲೆಂದೆ ಚಿತ್ರರಂಗಕ್ಕೆ ಬರುವವರ ಸಂಖ್ಯೆ ಹೆಚ್ಚಾಗಿದೆ ಅನ್ನುವುದು ಸಂಗೀತಾ ಅವರಿಗೆ ಕಾಡುತ್ತಿರುವ ಇನ್ನೊಂದು ನೋವು.

ಒಟ್ನಲ್ಲಿ ಸಂಗೀತಾ ಶೃಂಗೇರಿ ಅವರ ಈ ಮನದ ಮಾತುಗಳ ಬಗ್ಗೆ ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. 2006ರ ಆಚೀಚೆ ಬಂದ ರಿಯಲ್ ಎಸ್ಟೇಟ್ ಕುಳಗಳಿಂದ ಕನ್ನಡ ಚಿತ್ರರಂಗ ಹಾಳಾಯಿತು, ಅದರ ಫಲಿತಾಂಶವೇ ಇದೆಲ್ಲ ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗುತ್ತಿದೆ


Click it and Unblock the Notifications











