For Quick Alerts
  ALLOW NOTIFICATIONS  
  For Daily Alerts

  "ಕನ್ನಡ ತುಂಬ ಕಷ್ಟ, ಸರಿಯಾಗಿ ಮಾತನಾಡಲು ಬರಲ್ಲ" ಎಂದ ರಶ್ಮಿಕಾ

  |
  ಸಂದರ್ಶನದಲ್ಲಿ ರಶ್ಮಿಕಾ ಹೇಳಿದ ಸತ್ಯವೇನು?

  ಸ್ಯಾಂಡಲ್ ವುಡ್ ನಟಿ ರಶ್ಮಿಕಾ ಮಂದಣ್ಣ ಸದ್ಯ ಡಿಯರ್ ಕಾಮ್ರೇಡ್ ಸಿನಿಮಾದ ಪ್ರಮೋಶನ್ ನಲ್ಲಿ ಬ್ಯುಸಿಯಾಗಿದ್ದಾರೆ. ಐದು ಭಾಷೆಯಲ್ಲಿ ಡಿಯರ್ ಕಾಮ್ರೇಡ್ ಸಿನಿಮಾ ತೆರೆಗೆ ಬರುತ್ತಿದೆ. ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಇಬ್ಬರು ದಕ್ಷಿಣ ಭಾರತದದ ರಾಜ್ಯಗಳನ್ನು ಸುತ್ತಾಡಿ ಇಬ್ಬರು ಸಿನಿಮಾ ಪ್ರಮೋಷನ್ ಮಾಡುತ್ತಿದ್ದಾರೆ.

  ಪ್ರಮೋಷನ್ ಸಮಯದಲ್ಲಿ ರಶ್ಮಿಕಾ ನೀಡಿದ ತಮಿಳು ಸಂದರ್ಶನವೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಸಂದರ್ಶನದಲ್ಲಿ ಮಾಡನಾಡಿರುವ ರಶ್ಮಿಕಾ "ನನಗೆ ಸರಿಯಾಗಿ ಕನ್ನಡ ಮಾತನಾಡಲು ಬರಲ್ಲ" ಎಂದಿದ್ದಾರೆ. ರಶ್ಮಿಕಾ ಅವರ ಈ ಮಾತು ಈಗ ಕನ್ನಡಾಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.

  ಸಾಯಿ ಪಲ್ಲವಿ 'ಡಿಯರ್ ಕಾಮ್ರೇಡ್' ಸಿನಿಮಾ ರಿಜೆಕ್ಟ್ ಮಾಡಲು ಇದೇ ಕಾರಣ ಸಾಯಿ ಪಲ್ಲವಿ 'ಡಿಯರ್ ಕಾಮ್ರೇಡ್' ಸಿನಿಮಾ ರಿಜೆಕ್ಟ್ ಮಾಡಲು ಇದೇ ಕಾರಣ

  ರಶ್ಮಿಕಾ ಕನ್ನಡ ವಿರೋದಿ ಎನ್ನುವ ಮಾತುಗಳು ಆಗಾಗ ಕೇಳಿ ಬರುತ್ತನೆ ಇರುತ್ತೆ. ಇದಕ್ಕೆ ಕಾರಣ ರಶ್ಮಿಕಾ ಕನ್ನಡ ಮಾತನಾಡುವುದೆ ಇಲ್ಲ. ಕರ್ನಾಟಕದಲ್ಲಿ ಕನ್ನಡಕ್ಕಿಂತ ಹೆಚ್ಚಾಗಿ ಇಂಗ್ಲೀಷ್ ನಲ್ಲಿಯೆ ಮಾತನಾಡುತ್ತಾರೆ ಎನ್ನುವ ದೂರು ರಶ್ಮಿಕ ವಿರುದ್ದ ಕೇಳಿ ಬರುತ್ತಲೆ ಇದೆ. ಮುಂದೆ ಓದಿ..

  ರಶ್ಮಿಕಾಗೆ ಕನ್ನಡ ಬರಲ್ವಾ?

  ರಶ್ಮಿಕಾಗೆ ಕನ್ನಡ ಬರಲ್ವಾ?

  ರಶ್ಮಿಕಾ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಸಂದರ್ಶಕ "ಕನ್ನಡ ತುಂಬ ಸುಲಭ ಅಲ್ಲವಾ ನಿಮಗೆ" ಎಂದು ಕೇಳಿದಕ್ಕೆ ರಶ್ಮಿಕಾ "ಕನ್ನಡ ತುಂಬ ಕಷ್ಟ, ಮಾತನಾಡಲು ಸರಿಯಾಗಿ ಬರಲ್ಲ" ಎಂದು ಹೇಳಿದ್ದಾರೆ. "ಕನ್ನಡ ಮಾತ್ರವಲ್ಲ ಯಾವ ಭಾಷೆಯನ್ನು ಸರಿಯಾಗಿ ಮಾತನಾಡಲು ಬರಲ್ಲ" ಎಂದು ತಮಿಳಿನಲ್ಲಿ ಹೇಳಿದ್ದಾರೆ. ವರ್ಷದಲ್ಲೆ ತೆಲುಗು ಮತ್ತು ತಮಿಳು ಮಾತನಾಡಲು ಕಲಿತ ರಶ್ಮಿಕಾ ಕರ್ನಾಟಕದಲ್ಲೆ ಹುಟ್ಟಿಬೆಳೆದರು ಕನ್ನಡ ಬರಲ್ವಾ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  'ಡಿಯರ್ ಕಾಮ್ರೇಡ್'ನಲ್ಲಿ ರಶ್ಮಿಕಾಗೆ ಕಷ್ಟ ಆಗಿದ್ದು 5 ರಿಂದ 10 ನಿಮಿಷದ ಈ ದೃಶ್ಯ'ಡಿಯರ್ ಕಾಮ್ರೇಡ್'ನಲ್ಲಿ ರಶ್ಮಿಕಾಗೆ ಕಷ್ಟ ಆಗಿದ್ದು 5 ರಿಂದ 10 ನಿಮಿಷದ ಈ ದೃಶ್ಯ

  ಕರ್ನಾಟಕದಲ್ಲಿ ಕನ್ನಡ ಮಾತನಾಡಲ್ಲ ರಶ್ಮಿಕಾ

  ಕರ್ನಾಟಕದಲ್ಲಿ ಕನ್ನಡ ಮಾತನಾಡಲ್ಲ ರಶ್ಮಿಕಾ

  ಅಲ್ಲದೆ ತಮಿಳು ಮತ್ತು ತೆಲುಗು ಜನರ ಮುಂದೆ ರಶ್ಮಿಕಾ ಅದೇ ಭಾಷೆಯಲ್ಲಿ ಮಾತನಾಡುತ್ತಾರೆ. ಆದ್ರೆ ಕರ್ನಾಟಕದಲ್ಲಿ ಮಾತ್ರ ಕನ್ನಡಗಿಂತ ಹೆಚ್ಚಾಗಿ ಇಂಗ್ಲೀಷ್ ನಲ್ಲಿಯೆ ಮಾತನಾಡುತ್ತಾರೆ. ಈಗಾಗಲೆ ಕನ್ನಡ ಚಿತ್ರಾಭಿಮಾನಿಗಳು ರಶ್ಮಿಕಾ ಅಂದ್ರೆ ಕೆಂಡಕಾರುತ್ತಾರೆ. ಇದರ ನಡುವೆ ಈಗ ಕನ್ನಡ ಮಾತನಾಡಲು ಸರಿಯಾಗಿ ಬರಲ್ಲ ಎಂದಿರುವುದು ಅಭಿಮಾನಿಗಳನ್ನು ಮತ್ತಷ್ಟು ಕೆರಳಿಸಿದೆ.

  ಡವ್ ರಾಣಿ ರಶ್ಮಿಕಾ

  ಡವ್ ರಾಣಿ ರಶ್ಮಿಕಾ

  ಇತ್ತೀಚಿಗೆ ತಮಿಳಿನ ವೆಬ್ ಪೋರ್ಟಲ್ ಒಂದಕ್ಕೆ ನೀಡಿದ ರಶ್ಮಿಕಾ ಸಂದರ್ಶನ ನೋಡಿದ ನೆಟ್ಟಿಗರು ರಶ್ಮಿಕಾ ಸಖತ್ ಆಗಿ ಡವ್ ಮಾಡುತ್ತಿದ್ದರೆ. ಡವ್ ರಾಣಿ ಎಂದು ಹೇಳುತ್ತಿದ್ದಾರೆ. ತಮಿಳು ಮತ್ತು ತೆಲುಗು ಮಾತನಾಡಿದಷ್ಟು ಚೆನ್ನಾಗಿ ಕಿರಿಕ್ ಸುಂದರಿ ಕನ್ನಡ ಮಾತನಾಡುವುದಿಲ್ಲ ಎನ್ನುವುದು ಅಭಿಮಾನಿಗಳ ಆಕ್ರೋಶ.

  ಡಿಯರ್ ಕಾಮ್ರೇಡ್ ನಲ್ಲಿ ಬ್ಯುಸಿ

  ಡಿಯರ್ ಕಾಮ್ರೇಡ್ ನಲ್ಲಿ ಬ್ಯುಸಿ

  ಸದ್ಯ ರಶ್ಮಿಕಾ ಡಿಯರ್ ಕಾಮ್ರೇಡ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಇದೆ ತಿಂಗಳು 26ಕ್ಕೆ ತೆರೆಗೆ ಬರುತ್ತಿರುವ ಡಿಯರ್ ಕಾಮ್ರೇಡ್ ಐದು ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಟಾಲಿವುಡ್ ನ ಹಿಟ್ ಪೇರ್, ಸೆನ್ಸೇಷನ್ ಜೋಡಿ ಅಂತಾನೆ ಖ್ಯಾತಿ ಗಳಿಸಿರುವ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅಭಿನಯದ ಡಿಯರ್ ಕಾಮ್ರೇಡ್ ಹೇಗಿರಲಿದೆ ಎನ್ನುವುದು ಅಭಿಮಾನಿಗಳ ಕುತೂಹಲ.

  English summary
  Kannada is very difficult to speak Kannada actress Rashmika Mandanna said. She said in Tamil interview.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X