twitter
    For Quick Alerts
    ALLOW NOTIFICATIONS  
    For Daily Alerts

    ಜೈಲಿನಿಂದ 62 ಖೈದಿಗಳನ್ನ ಬಿಡಿಸಿದ ದುನಿಯಾ ವಿಜಿಯ ಕಥೆ ಬಿಚ್ಚಿಟ್ಟ ಮಹದೇವಸ್ವಾಮಿ

    By Bharath Kumar
    |

    ದುನಿಯಾ ಸಿನಿಮಾಗಳನ್ನ ನೋಡಿ ಮೆಚ್ಚಿಕೊಂಡಿರುವ ಅದೇಷ್ಟೋ ಜನಕ್ಕೆ ವಿಜಿ ಅವರ ವ್ಯಕ್ತಿತ್ವದ ಬಗ್ಗೆ ಅಷ್ಟಾಗಿ ಪರಿಚಯವಾಗಿರುವುದಿಲ್ಲ. ಸದಾ ಸಿನಿಮಾ ಅಂತ ಗುರುತಿಸಿಕೊಳ್ಳುವ ಈ ನಟ ಯಾರಿಗೂ ಕಾಣದಂತೆ ಅನೇಕ ಒಳ್ಳೆಯ ಕೆಲಸಗಳನ್ನ ಮಾಡಿದ್ದಾರೆ ಅಂದ್ರೆ ನಂಬಲೇಬೇಕು.

    ಈ ಹಿಂದೆ ಜೈಲಿನಲ್ಲಿದ್ದ ಮಹಿಳೆಯೊಬ್ಬರಿಗೆ ದಂಡ ಕಟ್ಟಲು ಹಣವಿಲ್ಲದಿದ್ದಾಗ ತಾವೇ ಹಣ ಪಾವತಿ ಮಾಡಿ ಅವರನ್ನ ಬಿಡಿಸಿದ್ದರು. ಅದೇ ರೀತಿ ಮೈಸೂರಿನ ಜೈಲಿನಲ್ಲಿ ಒಮ್ಮೆ ಶೂಟಿಂಗ್ ಗಾಗಿ ತೆರೆಳಿದ್ದ ನಟ ದುನಿಯಾ ವಿಜಯ್, 62 ಖೈದಿಗಳನ್ನ ಬಿಡಿಸಿದ್ದರಂತೆ. ವಿಜಿ ಅವರ ಬಗ್ಗೆ ಯಾರಿಗೂ ಗೊತ್ತಿಲ್ಲದ ಇಂತಹದ್ದೇ ರೋಚಕ ಕಥೆಯೊಂದನ್ನ ಈಗ ಮಹದೇವಸ್ವಾಮಿ ಬಿಚ್ಚಿಟ್ಟಿದ್ದಾರೆ.

    ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುವ ಕನ್ನಡ ಕೋಗಿಲೆ ಕಾರ್ಯಕ್ರಮದ ಸ್ಪರ್ಧಿಯಾಗಿರುವ ಮಹಾದೇವಸ್ವಾಮಿ ಅವರು ದುನಿಯಾ ವಿಜಯ್ ಮೈಸೂರಿನ ಜೈಲಿನಲ್ಲಿ ಮಾಡಿದ್ದ ಮಹಾನ್ ಕೆಲಸವೊಂದನ್ನ ಬಹಿರಂಗಪಡಿಸಿದ್ದಾರೆ. ಅದು ಏನು ಎಂಬುದನ್ನ ಖುದ್ದು ಮಹಾದೇವಸ್ವಾಮಿ ಅವರೇ ಹೇಳಿರುವು ಮಾತುಗಳನ್ನ ಓದಿ.....

    'ದೇವ್ರು' ಶೂಟಿಂಗ್ ವೇಳೆ

    'ದೇವ್ರು' ಶೂಟಿಂಗ್ ವೇಳೆ

    ''2013 ರಲ್ಲಿ ಮೈಸೂರು ಜೈಲಿಗೆ ದುನಿಯಾ ವಿಜಯ್ ಅವರು ಶೂಟಿಂಗ್ ಗೆ ಅಂತ ಬಂದಿದ್ರು. ಸಾಧುಕೋಕಿಲಾ ನಿರ್ದೇಶನದ 'ದೇವ್ರು' ಸಿನಿಮಾ ಚಿತ್ರೀಕರಣ ಮಾಡಬೇಕಾದರೇ ನಾನು ಕವನ ಬರೆಯುತ್ತಾ ಕೂತಿದೆ. ಆಗ ದುನಿಯಾ ವಿಜಯ್ ಅವರು ಬಂದು ನನ್ನ ಬರವಣಿಗೆ ನೋಡ್ತಿದ್ರು. ಆದ್ರೆ, ಅದು ನನ್ನ ಗಮನಕ್ಕೆ ಬಂದಿರಲಿಲ್ಲ''

    'ಕನ್ನಡ ಕೋಗಿಲೆ' ಸ್ಪರ್ಧಿಯ ಮೊದಲ ಹಾಡು ಕೇಳಿ ಅಡ್ವಾನ್ಸ್ ಕೊಟ್ಟ ನಿರ್ದೇಶಕ 'ಕನ್ನಡ ಕೋಗಿಲೆ' ಸ್ಪರ್ಧಿಯ ಮೊದಲ ಹಾಡು ಕೇಳಿ ಅಡ್ವಾನ್ಸ್ ಕೊಟ್ಟ ನಿರ್ದೇಶಕ

    ನಮ್ಮ ತಟ್ಟೆಯಲ್ಲಿ ಊಟ ಮಾಡಿದ ವಿಜಿ

    ನಮ್ಮ ತಟ್ಟೆಯಲ್ಲಿ ಊಟ ಮಾಡಿದ ವಿಜಿ

    ''ಆಮೇಲೆ ನಾನು ಬರೆಯುತ್ತಿದ್ದ ಪುಸ್ತುಕವನ್ನ ಪಕ್ಕಕ್ಕಿಟ್ಟು ಊಟ ಮಾಡ್ತಿದ್ದೆ. ಅಲ್ಲಿ ಜನ ಗುಂಪು ಕಟ್ಕೊಂಡು ಇದ್ರು. ಯಾರೋ ಬಂದಿರಬಹುದು ಅಂತ ಅಂದುಕೊಂಡು ಊಟ ಮಾಡ್ತಿದ್ದೆ. ಆಮೇಲೆ ಒಂದು ಸುತ್ತು ಸುತ್ತಿಕೊಂಡು ಬಂದು ವಿಜಿ ಅವರು ನನ್ನ ತಟ್ಟೆಯಲ್ಲಿ ಬಂದು ಊಟ ಎತ್ಕೊಂಡು ತಿಂದ್ರು. ಯಾರೂ ಅಂತ ಮೇಲೆ ನೋಡಿದ್ರೆ ವಿಜಿ ಅವರು. ತುಂಬಾ ಆಶ್ಚರ್ಯವಾಯಿತು''

    ಊಟ ಕೊಡಿಸುವ ನಿರ್ಧಾರ ಮಾಡಿದ್ರು

    ಊಟ ಕೊಡಿಸುವ ನಿರ್ಧಾರ ಮಾಡಿದ್ರು

    ''ಪಕ್ಕದಲ್ಲಿ ಹಾಸಿಗೆ ಇತ್ತು ಅದರ ಮೇಲೆ ಕೂತ್ಕೊಂಡ್ರು. ಆಗಲೇ ನೀನು ಬರೆಯುತ್ತಿದ್ದೆ ಅಲ್ವಾ ಆ ಬುಕ್ ಕೊಡು ಅಂದ್ರು. ಕೊಟ್ಟೆ, ಅದರಲ್ಲಿ ಅವರು ಬರೆದು ಒಂದು ಸಹಿ ಮಾಡಿದ್ರು. ಆಗ ಒಂದು ಮಾತು ಹೇಳಿದ್ರು. ನಿಮ್ಮನ್ನೆಲ್ಲ ನೋಡಿದ್ರೆ ನಿಮಗೆ ಊಟ ಕೊಡಿಸಬೇಕು ಎನಿಸ್ತಿದೆ ಅಂದ್ರು. ಆದ್ರೆ, ನಾವು ಬೇರೆನೇ ನಿರ್ಧಾರ ಮಾಡಿದ್ವಿ''

    ಖೈದಿಗಳಿಗೆ ದಂಡ ಕಟ್ಟಿ ಎಂದು ಕೇಳಿಕೊಂಡೆವು

    ಖೈದಿಗಳಿಗೆ ದಂಡ ಕಟ್ಟಿ ಎಂದು ಕೇಳಿಕೊಂಡೆವು

    ''ಜೈಲಿನಲ್ಲಿ ಹಿರಿಯರು ಸ್ವಲ್ಪ ಜನ ಇದ್ರು. ಅವರೆಲ್ಲ ಚರ್ಚೆ ಮಾಡಿದ್ವಿ. ಊಟ ಕೊಡಿಸಿದ್ರೆ ತಿಂದು ಮರೆತುಹೋಗ್ತೀವಿ. ಅದಕ್ಕೆ ಖೈದಿಗಳ ಪರವಾಗಿ ದಂಡ ಕಟ್ಟಿದ್ರೆ ಕೆಲವರು ಬಿಡುಗಡೆಯಾಗಬಹುದು ಅಲ್ವಾ ಅಂತ ಯೋಚನೆ ಮಾಡಿ ವಿಜಿ ಅವರಿಗೆ ಹೇಳಿದ್ವಿ. ಅದಕ್ಕೆ ಅವರು ಖುಷಿಯಿಂದ ಒಪ್ಪಿಕೊಂಡು ಒಂದು ಷರತ್ತು ಹಾಕಿದ್ರು''

    62 ಖೈದಿಗಳು ರಿಲೀಸ್

    62 ಖೈದಿಗಳು ರಿಲೀಸ್

    ''ಯಾವುದೇ ಪೇಪರ್ ಹಾಗೂ ನ್ಯೂಸ್ ಚಾನಲ್ ಗಳಿಗೂ ಹೇಳಲ್ಲ ಅಂದ್ರೆ ನಾನು ಕಟ್ತೀನಿ ಅಂತ ಹೇಳಿ ಸುಮಾರು 3 ಲಕ್ಷ ದಂಡ ಕಟ್ಟಿದ್ರು. ಅದರ ಪರಿಣಾಮ ಸುಮಾರು 62 ಜನ ಜೈಲಿನಿಂದ ಬಿಡುಗಡೆಯಾದ್ರು''

    ಯಾರು ಈ ಮಹದೇವಸ್ವಾಮಿ

    ಯಾರು ಈ ಮಹದೇವಸ್ವಾಮಿ

    ಕನ್ನಡ ಕೋಗಿಲೆಯ ಸ್ಪರ್ಧಿ ಮಹದೇವಸ್ವಾಮಿ ಅಚಾನಕ್ ಆಗಿ ಮಾಡಿದ ಒಂದು ತಪ್ಪಿಗೆ 11 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದಾರೆ. ಜೀವಾವದಿ ಶಿಕ್ಷೆ ಅನುಭವಿಸಿದ್ದ ಮಹದೇವಸ್ವಾಮಿ ಸನ್ನಡತೆಯ ಆಧಾರದ ಮೇಲೆ ಬಿಡುಗಡೆ ಮಾಡಿದ್ದಾರೆ.

    English summary
    Kannada kogile contestant mahadevaswamy has shared interesting fact about kannada actor duniya vijay in tv show.
    Saturday, August 11, 2018, 14:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X