ಆಗಸ್ಟ್ ನಲ್ಲಿ ಬೆಳ್ಳಿತೆರೆ ಮೇಲೆ ಪ್ರಣಮ್ ಪ್ರೇಮಕಥೆ
ಪ್ರಣಮ್ ದೇವರಾಜ್... ಸಹೋದರ ಹಾಗೂ ಅಪ್ಪನಂತೆ ಕನ್ನಡ ಸಿನಿಮಾರಂಗದಲ್ಲಿ ಮಿಂಚಬೇಕು ಎನ್ನುವ ಆಸೆ ಹೊತ್ತು ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಪ್ರಣಮ್ ದೇವರಾಜ್ 'ಕುಮಾರಿ 21ಎಫ್' ಸಿನಿಮಾದಲ್ಲಿ ನಾಯಕನಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಡಲಿದ್ದಾರೆ.
ಈಗಾಗಲೇ ಚಿತ್ರೀಕರಣ ಮುಗಿಸಿರುವ 'ಕುಮಾರಿ 21ಎಫ್' ಚಿತ್ರ ತೆರೆಗೆ ಬರಲು ಸಿದ್ದವಾಗಿದ್ದು ಆಗಸ್ಟ್ ಮೊದಲ ವಾರ ಅಂದರೆ 3 ನೇ ತಾರೀಖು ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಪ್ರಣಮ್ ನಾಯಕನಾಗಿರುವ ಸಿನಿಮಾಗೆ ನಿಧಿ ಕುಶಾಲಪ್ಪ ನಾಯಕಿ.

ಶ್ರೀಮನ್ ವೇಮುಲ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ಸಂಪತ್ ಕುಮಾರ್ ಈ ಸಿನಿಮಾಕ್ಕೆ ಹಣ ಹೂಡಿದ್ದಾರೆ. 'ಕುಮಾರಿ 21ಎಫ್' ರಿಮೇಕ್ ಸಿನಿಮಾವಾದರೂ ಇಲ್ಲಿಯ ನೇಟಿವಿಟಿಗೆ ತಕ್ಕಂತೆ ಕಥೆಯನ್ನು ಬದಲಾವಣೆ ಮಾಡಿಕೊಳ್ಳಲಾಗಿದ್ಯಂತೆ. ಟ್ರೇಲರ್ ಹಾಗೂ ಹಾಡುಗಳು ಹಿಟ್ ಆಗಿದ್ದು ಪ್ರೇಕ್ಷಕರ ಗಮನ ಸೆಳೆದಿವೆ.

ಗೋಲ್ಡನ್ ಸ್ಟಾರ್ ಗಣೇಶ್, ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಕುಮಾರಿ 21ಎಫ್' ಸಿನಿಮಾದ ಟ್ರೇಲರ್ ನೋಡಿ ಪ್ರಣಮ್ ದೇವರಾಜ್ ಅವರಿಗೆ ಶುಭಾಶಯ ಕೋರಿದ್ದಾರೆ, ಚಿತ್ರದ ಒಂದು ಹಾಡನ್ನು ಪುನೀತ್ ರಾಜ್ ಕುಮಾರ್ ಹಾಡಿದ್ದಾರೆ.


Click it and Unblock the Notifications











