»   » 'ಫೇಸ್ ಬುಕ್ ಲೈವ್'ನಲ್ಲಿ ನರಹೇಡಿ ಕಟ್ಟಪ್ಪನ ವಿರುದ್ಧ ಪ್ರವೀಣ್ ಶೆಟ್ಟಿ ರಣಕಹಳೆ

'ಫೇಸ್ ಬುಕ್ ಲೈವ್'ನಲ್ಲಿ ನರಹೇಡಿ ಕಟ್ಟಪ್ಪನ ವಿರುದ್ಧ ಪ್ರವೀಣ್ ಶೆಟ್ಟಿ ರಣಕಹಳೆ

Posted By:
Subscribe to Filmibeat Kannada

''ಇದು ತೆಲುಗು ಜನರ ವಿರುದ್ಧದ ಹೋರಾಟವಲ್ಲ, ಆಂಧ್ರದವರ ವಿರುದ್ಧದ ಹೋರಾಟವಲ್ಲ. ಇದು 'ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ಉಂಟು ಮಾಡಿರುವ ನರಹೇಡಿ ಕಟ್ಟಪ್ಪನ ವಿರುದ್ಧದ ಹೋರಾಟ'' ಎಂಬುದು ಕನ್ನಡ ಪರ ಹೋರಾಟಗಾರ ಬಾಯಲ್ಲಿ ಬರುತ್ತಿರುವ ಒಮ್ಮತದ ನುಡಿ.

ಇದರ ಮಧ್ಯೆಯೂ ಕೆಲವರು 'ಬಾಹುಬಲಿ-2' ಕರ್ನಾಟಕದಲ್ಲಿ ತೆರೆಕಾಣುತ್ತೆ ಎಂಬ ವಿಶ್ವಾಸದಲ್ಲಿದ್ದಾರೆ. ಇಂತವರಿಗೆ ಕನ್ನಡ ಪರ ಹೋರಾಟಗಾರರು ಮತ್ತೊಮ್ಮೆ ಖಡಕ್ ಎಚ್ಚರಿಕೆ ನೀಡಿದ್ದಾರೆ.[ಕಟ್ಟಪ್ಪ ಕ್ಷಮೆ ಕೇಳುವವರೆಗೂ 'ಬಾಹುಬಲಿ-2' ಬಿಡುಗಡೆ ಇಲ್ಲ.! ಇದು ಕನ್ನಡಿಗರ ಕಟ್ಟಪ್ಪಣೆ.! ]

''ಸತ್ಯರಾಜ್ ಕನ್ನಡಿಗರನ್ನ ಕ್ಷಮೆ ಕೇಳುವವರೆಗೂ 'ಬಾಹುಬಲಿ-2' ಚಿತ್ರ ಕರ್ನಾಟದಲ್ಲಿ ಬಿಡುಗಡೆ ಆಗಲ್ಲ. ಒಂದು ಪಕ್ಷ ಯಾರಾದ್ರೂ ಬಿಡುಗಡೆ ಮಾಡಲು ಮುಂದಾದ್ರೆ, ರಾಜ್ಯ ಬಂದ್ ಮಾಡಬೇಕಾಗುತ್ತೆ ಎನ್ನುತ್ತಿದ್ದಾರೆ ಕನ್ನಡ ರಕ್ಷಣ ವೇದಿಕೆಯ ಅಧ್ಯಕ್ಷ ಪ್ರವೀಣ್ ಶೆಟ್ಟಿ. ಮುಂದೆ ಓದಿ......

ಕ್ಷಮಾಪಣೆ ಕೇಳಿಲ್ಲ ಅಂದ್ರೆ 'ಬಾಹುಬಲಿ-2' ರಿಲೀಸ್ ಆಗಲ್ಲ!

''ಬಾಹುಬಲಿ' ಚಿತ್ರವನ್ನ ಬಿಡುಗಡೆ ಮಾಡುವುದಕ್ಕೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಒಪ್ಪಿಕೊಂಡಿದೆ. ಅಂಬರೀಶ್ ಅವರು ಮಧ್ಯಸ್ಥಿಕೆ ವಹಿಸಿಕೊಂಡಿದ್ದಾರೆ. ಕನ್ನಡ ಪರ ಹೋರಾಟಗಾರರು ಸಿನಿಮಾ ಬಿಡುಗಡೆ ಮಾಡೋಕೆ ಅನುವು ಮಾಡಿಕೊಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಅದೆಲ್ಲ ಊಹಾಪೂಹಗಳು ಅಷ್ಟೇ. ಯಾವುದೇ ಕಾರಣಕ್ಕೂ 'ಬಾಹುಬಲ-2' ಬಿಡುಗಡೆ ಮಾಡಲ್ಲ'' - ಪ್ರವೀಣ್ ಶೆಟ್ಟಿ, ಕನ್ನಡ ರಕ್ಷಣ ವೇದಿಕೆ [ಸುದೀಪ್ ಚಿತ್ರಗಳನ್ನ ಬ್ಯಾನ್ ಮಾಡಿ: ಕನ್ನಡಿಗರಿಗೆ 'ಟ್ರೋಲ್ ಟಾಲಿವುಡ್' ಲೇವಡಿ.!]

ನಿರ್ಮಾಪಕರ ಕ್ಷಮೆ ಬೇಕಾಗಿಲ್ಲ!

'ಬಾಹುಬಲಿ' ಚಿತ್ರದ ನಿರ್ಮಾಪಕರು ಕ್ಷಮಾಪಣೆ ಕೇಳ್ತಿವಿ ಎಂದು ವಾಣಿಜ್ಯ ಮಂಡಳಿ ಅವರ ಬಳಿ ಹೇಳುತ್ತಿದ್ದಾರೆ. ಅದನ್ನ ನಾವು ಒಪ್ಪಲ್ಲ. ಕನ್ನಡದ ಬಗ್ಗೆ ಯಾರು ಕೀಳಾಗಿ ಮಾತನಾಡಿದ್ದರೋ ಅವರೇ ಬಂದು ಕ್ಷಮಾಪಣೆ ಕೇಳ್ಬೇಕು'' - ಪ್ರವೀಣ್ ಶೆಟ್ಟಿ, ಕನ್ನಡ ರಕ್ಷಣೆ ವೇದಿಕೆ,

ರಾಜಮೌಳಿಗೆ ನಾಚಿಕೆ ಆಗ್ಬೇಕು!

''ರಾಜಮೌಳಿ ಸಂದರ್ಶನವೊಂದರಲ್ಲಿ ಹೇಳ್ತಾರೆ. ಇದು 8 ವರ್ಷಗಳ ಹಿಂದೆ ಮಾತನಾಡಿರುವ ವಿಡಿಯೋ. ಸತ್ಯರಾಜ್ ಅವರು ಸಜ್ಜನ ವ್ಯಕ್ತಿ ಎಂದು. ಅವರಿಗೆ ನಾಚಿಕೆ ಆಗ್ಬೇಕು'' - ಪ್ರವೀಣ್ ಶೆಟ್ಟಿ, ಕನ್ನಡ ರಕ್ಷಣೆ ವೇದಿಕೆ, ['ಕಟ್ಟಪ್ಪನ ವಿವಾದ'ದ ಬಗ್ಗೆ ರಾಜಮೌಳಿ ಹೇಳಿದ್ದೇನು?]

ಇದು ತೆಲುಗು ಜನರ ವಿರುದ್ಧ ಹೋರಾಟವಲ್ಲ!

''ಇದು ತೆಲುಗು ಜನಗಳ ವಿರುದ್ಧ ಹೋರಾಟವಲ್ಲ. ಆಂಧ್ರದವರ ವಿರುದ್ಧ ಹೋರಾಟ ಇದಲ್ಲ. ಕನ್ನಡಿಗರ ವಿರುದ್ಧ ಮಾತನಾಡಿದ ಹೇಡಿ ಬಗ್ಗೆ ಹೋರಾಟ ಮಾಡ್ತಿದ್ದಿವಿ. ಕನ್ನಡಿಗರನ್ನ ನಾಯಿಗಳಿಗೆ ಹೋಲಿಸಿದ ನರಹೇಡಿ ವಿರುದ್ಧ ನಮ್ಮ ಹೋರಾಟ'' - ಪ್ರವೀಣ್ ಶೆಟ್ಟಿ-ಕನ್ನಡ ರಕ್ಷಣೆ ವೇದಿಕೆ,[ಕಟ್ಟಪ್ಪನ ಮೇಲೆ ಕೋಪ: ಕನ್ನಡಿಗರಿಂದ 'ಬಾಹುಬಲಿ-1' ಮರುಪ್ರದರ್ಶನ ರದ್ದು]

'ಬಾಹುಬಲಿ' ಬಿಡುಗಡೆಗೆ ಮುಂದಾದ್ರೆ ರಾಜ್ಯ ಬಂದ್!

''ಒಂದು ವೇಳೆ ನಮ್ಮ ಹೋರಾಟವನ್ನ ದಿಕ್ಕರಿಸಿ ಚಿತ್ರಮಂದಿರದವರು ಅಥವಾ ಮಾಲ್ ಮಾಲೀಕರು 'ಬಾಹುಬಲಿ' ಚಿತ್ರವನ್ನ ಬಿಡುಗಡೆ ಮಾಡಲು ಮುಂದಾದ್ರೆ, ಆಮೇಲೆ ಆಗುವ ಅನಾಹುತಕ್ಕೆ ನೇರ ಹೊಣೆ ನೀವಾಗುತ್ತೀರಾ. ಕನ್ನಡ ಪರ ಸಂಘಟನೆಗಳು ಎಲ್ಲ ಸೇರಿ ಕರ್ನಾಟಕ ಬಂದ್ ಗೆ ಕರೆ ನೀಡಬೇಕಾಗುತ್ತೆ.''-ಪ್ರವೀಣ್ ಶೆಟ್ಟಿ-ಕನ್ನಡ ರಕ್ಷಣೆ ವೇದಿಕೆ [ಪ್ರವೀಣ್ ಶೆಟ್ಟಿ ಮಾತನಾಡಿರುವ ವಿಡಿಯೋ ಇಲ್ಲಿದೆ ನೋಡಿ]

English summary
Unless and Untill Actor Sathyaraj apologize, we won't let 'Baahubali-2' to release in Karnataka says Kannada Leader Praveen Shetty.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada