'ಲವ್ ಮಾಕ್ ಟೇಲ್'ನ ಇಷ್ಟವಾದ ದೃಶ್ಯ ಹಂಚಿಕೊಂಡ ನಟ ಕೃಷ್ಣ: ಮೇಕಿಂಗ್ ವಿಡಿಯೋ ವೈರಲ್

ಸ್ಯಾಂಡಲ್ ವುಡ್ ನಲ್ಲಿ ಸದ್ಯ ಎಲ್ಲರ ಮನ ಗೆದ್ದಿರುವ ಸಿನಿಮಾ ಲವ್ ಮಾಕ್ ಟೇಲ್. ಚಿತ್ರಮಂದಿರಗಳಲ್ಲಿ ಮಾತ್ರವಲ್ಲದೆ ಈಗ ಆನ್ ಲೈನ್ ನಲ್ಲಿಯೂ ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ. ನಿಧಿಮಾ ಮತ್ತು ಆದಿ ಕಥೆ ನೋಡಿ ಕಣ್ಣಲ್ಲಿ ನೀರು ತರಿಸದವರಿಲ್ಲ. ಜೊತೆಗೆ ಸಿನಿಮಾ ಒಂದಿಷ್ಟು ಕಾಮಿಡಿ ಸನ್ನಿವೇಶಗಳು ಇಂಟ್ರಸ್ಟಿಂಗ್ ಆಗಿದ್ದು ಪ್ರೇಕ್ಷಕರನ್ನು ಕಾಡುತ್ತಿವೆ.

ಸಿನಿಮಾ ಪ್ರಾರಂಭವಾಗುತ್ತಿದಂತೆ ಶುರುವಾಗುವ ಆದಿಯ ಶಾಲೆ ಮತ್ತು ಕಾಲೇಜು ದಿನಗಳ ಪ್ರೀತಿ ಕಥೆ, ನೋಡುಗರಿಗೆ ಹಳೆಯ ದಿನಗಳನ್ನು ಮತ್ತೆ ನೆನಪಿಸುವಂತಿದೆ. ಇತ್ತೀಚಿಗೆ ನಟ ಡಾರ್ಲಿಂಗ್ ಕೃಷ್ಣ ಚಿತ್ರದ ನೆಚ್ಚಿನ ದೃಶ್ಯವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮೇಕಿಂಗ್ ವಿಡಿಯೋ ವನ್ನು ಶೇರ್ ಮಾಡಿದ್ದಾರೆ. ಮುಂದೆ ಓದಿ..

ಕೃಷ್ಣಗೆ ಇಷ್ಟವಾದ ದೃಶ್ಯವಿದು

ಕೃಷ್ಣಗೆ ಇಷ್ಟವಾದ ದೃಶ್ಯವಿದು

ಈಗಾಗಲೆ ಪ್ರೇಕ್ಷಕರ ಮನ ಗೆದ್ದಿರುವ ಲವ್ ಮಾಕ್ ಟೇಲ್ ಸಿನಿಮಾದ ಈ ಒಂದು ದೃಶ್ಯ ಡಾರ್ಲಿಂಗ್ ಕೃಷ್ಣಗೆ ತುಂಬಾ ಇಷ್ಟವಾಗಿದೆಯಂತೆ. ಚಿತ್ರದಲ್ಲಿ ಆದಿ, ಜೋ ಅನ್ನು ಭೇಟಿಯಾಗುವ ಸಮಯದ ದೃಶ್ಯವದು. ಮೊಬೈಲ್ ಮೂಲಕ ಪರಿಚಯವಾದ ಜೋ ಅನ್ನು ಭೇಟಿಯಾಗಲು ಬರುವ ಆದಿ ಹೋಟೆಲ್ ಒಂದರಲ್ಲಿ ಕುಳಿತುಕೊಳ್ಳುತ್ತಾರೆ. ಆ ಸಮಯದಲ್ಲಿ ನಡೆಯುವ ಸನ್ನಿವೇಶ ಪ್ರೇಕ್ಷಕರಿಗೂ ತುಂಬಾ ಇಷ್ಟವಾಗಿತ್ತು.

ಮೇಕಿಂಗ್ ವಿಡಿಯೋ ಹಂಚಿಕೊಂಡಿರುವ ಆದಿ

ಹೋಟೆಲ್ ನಲ್ಲಿ ಕುಳಿತಿರುವ ಆದಿಗೆ ಪಕ್ಕದಲ್ಲೆ ಇಬ್ಬರು ಹುಡುಗಿಯರು ಕೊಡುವ ಚಮಕ್ ಸಖತ್ ಇಂಟ್ರಿಸ್ಟಿಂಗ್ ಆಗಿತ್ತು. ಇಂಗ್ಲೀಷನ್ ನಲ್ಲಿ ಮಾತನಾಡುತ್ತ, ಐಶ್ವರ್ಯ ರೈ, ಕರೀನಾ ಕಪೂರ್ ಹಾಗೆ ಪೋಸ್ ಕೊಡುತ್ತಾ, ಒಬ್ಬನೆ ಕುಳಿತಿರುವ ಆದಿ ಕಡೆ ನೋಡಿ ಕಿಚಾಯಿಸುತ್ತಿರುತ್ತಾರೆ. ಈ ಸಮಯದಲ್ಲಿ ನಡೆಯುವ ಇಂಟ್ರಸ್ಟಿಂಗ್ ಮಾತು ಕಥೆ ಪ್ರೇಕ್ಷಕರಿಗೂ ತುಂಬಾ ಇಷ್ಟವಾಗಿದೆ. ಈ ದೃಶ್ಯ ಕೃಷ್ಣನಿಗೂ ಫೇವರಿಟ್ ಅಂತೆ. ಹಾಗಾಗಿ ಈ ದೃಶ್ಯದ ಮೇಕಿಂಗ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ ಡಾರ್ಲಿಂಗ್ ಕೃಷ್ಣ.

ವೈರಲ್ ಆಗಿದೆ ಐಶ್ ಗೆ ಡೌವ್ ಹೊಡೆಯುವ ವಿಡಿಯೋ

ಆದಿಯ ಶಾಲಾ ದಿನಗಳ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಇಬ್ಬರು ದೃಶ್ಯವನ್ನು ಆದಿ ಮತ್ತು ಐಶ್ ಗೆ ವಿವರಿಸಿ ಹೇಳುತ್ತಿರುವ ವಿಡಿಯೋವನ್ನು ಸಿನಿಮಾತಂಡ ರಿಲೀಸ್ ಮಾಡಿದೆ. ಸ್ನೇಹಿತನಿಗಾಗಿ ಆದಿ, ಐಶ್ ಬಳಿ ಬಂದು ಪ್ರೀತಿ ವಿಚಾರವನ್ನು ಹೇಳುತ್ತಿರುವ ದೃಶ್ಯದ ಮೇಕಿಂಗ್ ವಿಡಿಯೋ ವೈರಲ್ ಆಗಿದೆ. ಇಂಗ್ಲೀಷ್ ಬರದ ಆದಿ ಮತ್ತು ರ್ಯಾಂಕ್ ಸ್ಟೂಡೆಂಟ್ ಐಶ್ ನಡುವಿನ ಮಾತುಕತೆ ಅದ್ಭುತವಾಗಿ ಮೂಡಿಬಂದಿದೆ.

ಸೀಕ್ವೆಲ್ ಗೆ ಮುಂದಾದ ಕೃಷ್ಣ 'ಲವ್ ಮಾಕ್ ಟೇಲ್'

ಸೀಕ್ವೆಲ್ ಗೆ ಮುಂದಾದ ಕೃಷ್ಣ 'ಲವ್ ಮಾಕ್ ಟೇಲ್'

ಲವ್ ಮಾಕ್ ಟೇಲ್ ಗೆ ಸಿಕ್ಕಿರುವ ಪ್ರತಿಕ್ರಿಯೆ ಕಂಡು ಡಾರ್ಲಿಂಗ್ ಕೃಷ್ಣ, ಈ ಚಿತ್ರದ ಕಥೆಯನ್ನು ಮುಂದುವರಿಸಲು ನಿರ್ಧರಿಸಿದ್ದಾರೆ. ಆ ನಿಟ್ಟಿನಲ್ಲಿ ಕಥೆ ಹೊಸೆಯಲು ಅವರು ಸಿದ್ಧರಾಗಿದ್ದು, 'ಲವ್ ಮಾಕ್ ಟೇಲ್ 2' ಶೀರ್ಷಿಕೆಯಲ್ಲಿ ಸಿನಿಮಾ ತಯಾರುತ್ತಿದೆ. ಈ ಬಗ್ಗೆ ಕೃಷ್ಣ ಈಗಾಗಲೆ ಬಹಿರಂಗ ಪಡಿಸಿದ್ದಾರೆ.

More from Filmibeat

English summary
Kannada Love Mocktail Kannada movie making video viral.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X