Don't Miss!
- News
ಹಾಸನ ಜಿಲ್ಲೆಯಲ್ಲಿ ಮುಂದುವರೆದ ಕಾಡಾನೆ ದಾಳಿ: ಕಾಫಿ, ಮೆಣಸು, ಭತ್ತ ಬೆಳೆ ನಾಶ
- Sports
ಟಿ20 ವಿಶ್ವಕಪ್ನ ಭಾರತ ತಂಡಕ್ಕೆ ಆಯ್ಕೆಯಾಗುವ ಮೂವರು ಕ್ರಿಕೆಟಿಗರನ್ನು ಹೆಸರಿಸಿದ ಕೈಫ್
- Technology
ಒಪ್ಪೋ ರೆನೋ 8 ಸ್ಮಾರ್ಟ್ಫೋನ್ ಬಿಡುಗಡೆ! 33W ಚಾರ್ಜಿಂಗ್ ವಿಶೇಷ!
- Lifestyle
ಆ. 17ಕ್ಕೆ ಸಿಂಹ ರಾಶಿಯಲ್ಲಿ ಸೂರ್ಯ ಸಂಚಾರ: 4 ರಾಶಿಗಳಿಗೆ ಅದೃಷ್ಟ, 3 ರಾಶಿಯವರು ಹುಷಾರು
- Automobiles
ಆಕರ್ಷಕ ವಿನ್ಯಾಸದ 2022ರ ಹ್ಯುಂಡೈ ಟ್ಯೂಸಾನ್ ಎಸ್ಯುವಿಯ ವಿಶೇಷತೆಗಳು
- Education
Distance Education Courses And Colleges : ದೂರ ಶಿಕ್ಷಣ ಮೂಲಕ ಅಧ್ಯಯನಕ್ಕೆ ಉತ್ತಮ ಕೋರ್ಸ್ ಮತ್ತು ಕಾಲೇಜುಗಳ ವಿವರ
- Finance
5 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದ ಸಗಟು ಹಣದುಬ್ಬರ: ಜುಲೈನಲ್ಲಿ ಶೇ. 13.93 ದಾಖಲು
- Travel
ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲ್ ಆನೆಗಳ ಶಿಬಿರಕ್ಕೆ ಭೇಟಿ ಕೊಡಿ
ಮಾಧ್ಯಮಗಳ ವಿರುದ್ಧ ತೊಡೆತಟ್ಟಿದ ದರ್ಶನ್ ಫ್ಯಾನ್ಸ್: ದರ್ಶನ್ ಹೇಳಿದ್ದೇನು?
ನಟ ದರ್ಶನ್ ಬಗ್ಗೆ ಹೇಳಬೇಕು ಎಂದರೆ ಅವರ ಅಭಿಮಾನಿಗಳ ಬಗ್ಗೆ ಹೇಳಲೇ ಬೇಕು. ಅಷ್ಟರಮಟ್ಟಿಗೆ ದರ್ಶನ್ ಅಭಿಮಾನಿಗಳ ಕ್ರೇಸ್ ಇದೆ. ಕ್ರೇಸ್ ಎನ್ನುವುದಕ್ಕಿಂತಲೂ ಹೆಚ್ಚಾಗಿ, ದರ್ಶನ್ ಅವ್ರನ್ನು ಅವರ ಅಭಿಮಾನಿಗಳು ದೇವರಂತೆ ಪೂಜಿಸುತ್ತಾರೆ. ಇನ್ನು ದರ್ಶನ್ ಗೆ ಕೌಟುಂಬಿಕ ವರ್ಗ, ಯುವಕರು ವರ್ಗದಲ್ಲೂ ಅಭಿಮಾನಿ ಬಳಗ ಇದೆ. ದರ್ಶನ್ ಸಿನಿಮಾಗಳನ್ನು ಎಲ್ಲಾ ವರ್ಗದ ಜನರು ನೋಡುತ್ತಾರೆ.
ಈಗ ದರ್ಶನ್ ಅಭಿಮಾನಿಗಳ ಬಗ್ಗೆ ಮಾತನಾಡಲು ಕಾರಣ ಅವರೇ. ಅಭಿಮಾನಿಗಳು ಎಂದಿಗೂ ದರ್ಶನ್ ಕೈ ಬಿಡುವುದಿಲ್ಲ ಮತ್ತು ದರ್ಶನ್ ಮೇಲೆ ಅವರು ಇಟ್ಟಿರುವ ಪ್ರೀತಿ ಎಂಥದ್ದು ಎನ್ನುವುದು ಮತ್ತೆ ಸಾಬೀತಾಗಿದೆ.
ಗಾಳಿ
ಆಂಜನೇಯ
ಸ್ವಾಮಿ
ದೇವಸ್ಥಾನದಲ್ಲಿ
ದರ್ಶನ್:
ಕಾರಣ
ಬಹಳ
ವಿಶೇಷ!
ಅಭಿಮಾನಿಗಳ ಅಗಾದ ಪ್ರೀತಿಗೆ ದರ್ಶನ್ ಮನ ಸೋತಿದ್ದಾರೆ. ಹಾಗಾಗಿ ಅವರು ತಮ್ಮ ಅಭಿಮಾನಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಧನ್ಯವಾದ ತಿಳಿದ್ದಾರೆ. ಅಷ್ಟಕ್ಕೂ ಅವರ ಅಭಿಮಾನಿಗಳು ಮಾಡಿರುವುದಾದರು ಏನೂ ಅಂತೀರಾ..? ಮುಂದೆ ಓದಿ...

ಕ್ರಾಂತಿ ಗೆಲ್ಲಿಸಲು ದಚ್ಚು ಫ್ಯಾನ್ಸ್ ಸಿದ್ದ!
ನಟ ದರ್ಶನ್ ಹೆಸರು ಆಗಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇರುತ್ತದೆ. ಟ್ವಿಟರ್ ನಲ್ಲಿ ಟ್ರೆಂಡ್ ಆಗುತ್ತಲೇ ಇರುತ್ತದೆ. ಇದಕ್ಕೆ ದರ್ಶನ್ ಫ್ಯಾನ್ಸ್ ಅಲ್ಲದೇ ಮತ್ತೇನು ಅಲ್ಲ. ಈಗ ದರ್ಶನ್ ಅಭಿಮಾನಿಗಳು ಹೊಸದೊಂದು ಕಾರ್ಯಕ್ಕೆ ಮುಂದಾಗಿದ್ದಾರೆ. ದೊಡ್ಡ ಮಟ್ಟದಲ್ಲಿ ಅಭಿಯಾನ ಶುರು ಮಾಡಿದ್ದರೆ. ಕ್ರಾಂತಿ ಚಿತ್ರವನ್ನು ಎಲ್ಲರೂ ಸೇರಿ ಗೆಲ್ಲಿಸಲೇ ಬೇಕೆಂದು ಪಣತೊಟ್ಟಿದ್ದಾರೆ. ನಟ ದರ್ಶನ್ ಸಿನಿಮಾಗಳು ಬಾಕ್ಸಾಫೀಸ್ ನಲ್ಲಿ ಸೋತಿರುವ ಉದಾಹರಣೆಗಳು ಕಡಿಮೆ. ಆದರೂ ದರ್ಶನ್ ಫ್ಯಾನ್ಸ್ ಹೀಗೊಂದು ನಿರ್ಧಾರ ಮಾಡಲು ಕಾರಣ ಕನ್ನಡ ಮಾಧ್ಯಮಗಳು.
'ಕ್ರಾಂತಿ'
ಕಥೆ
ಏನು?
'ದರ್ಶನ್'
ಪಾತ್ರ
ಏನು?
ಇಲ್ಲಿದೆ
ಉತ್ತರ!

ದರ್ಶನ್ ಬಗ್ಗೆ ಮಾಧ್ಯಮಗಳ ಅಘೋಷಿತ ಬ್ಯಾನ್!
ನಟ ದರ್ಶನ್ ವಿರುದ್ಧ ಕನ್ನಡ ಟಿವಿ ಮಾಧ್ಯಮಗಳು ಅಘೋಷಿತ ಬ್ಯಾನ್ ಮುಂದುವರೆಸಿವೆ. ದರ್ಶನ್ ಮತ್ತು ಅವರ ಸಿನಿಮಾದ ಬಗ್ಗೆ ಯಾವುದನ್ನು ಪ್ರಸಾರ ಮಾಡದೇ ಇರಲು ನಿರ್ಧರಿಸಿವೆ. ಹಾಗಾಗಿ ಹಲವು ದಿನಗಳಿಂದ ದರ್ಶನ್ ಬಗ್ಗೆ ಮಾಧ್ಯಮಗಳಲ್ಲಿ ಯಾವುದೆ ರೀತಿಯ ಸುದ್ದಿಗಳು ಪ್ರಸಾರ ಆಗಿಲ್ಲ. ಹಾಗಾಗಿ ನಟ ದರ್ಶನ್ ಅಭಿಮಾನಿಗಳು ಮಾಧ್ಯಮಗಳು ಸಹಕಾರ ಇಲ್ಲದೆ ಸಿನಿಮಾ ಗೆಲ್ಲಿಸಬೇಕು ಎಂದು ಪಣ ತೊಟ್ಟಿದ್ದಾರೆ. ಹಾಗಾಗಿ ಈ ಬಗ್ಗೆ ಸೋಷಿಯಲ್ ಮಿಡಿಯೋದಲ್ಲಿ ಅಭಿಯಾನ ಶುರು ಮಾಡಿದ್ದಾರೆ.
|
ದರ್ಶನ್ ಅಭಿಮಾನಿಗಳಿಗೆ ಚಿರರುಣಿ!
ಅಭಿಮಾನಿಗಳ ಈ ಅಭಿಮಾನ ಕಂಡು ನಟ ದರ್ಶನ್ ಹೆಮ್ಮೆ ಪಟ್ಟಿದ್ದಾರೆ. ಈ ಕುರಿತು ಟ್ವಿಟ್ ಮಾಡಿ, ಧನ್ಯವಾದ ತಿಳಿಸಿದ್ದಾರೆ. "ನಾ ನಡೆಯೋ ಹಾದಿಯಲ್ಲಿ ನನ್ನೊಂದಿಗೆ ಸದಾ ನಿಲ್ಲುವ ನನ್ನ ಪ್ರೀತಿಯ ಸೆಲೆಬ್ರಿಟಿಗಳಿಗೆ ನಾನು ಸದಾ ಚಿರಋಣಿ. ನೀವು ನನಗೆ ನೀಡುತ್ತಿರುವ ಸಾಥ್ಗೆ ನಾನು ಆಭಾರಿಯಾಗಿದ್ದೇನೆ, ನಿಮ್ಮ ಈ ಪ್ರೀತಿಯನ್ನು ವರ್ಣಿಸಲು ಬಹುಕೋಟಿ ಪದಗಳೇ ಸಾಲದು. ನಿಮ್ಮ ದಾಸ ದರ್ಶನ್" ಎಂದು ಬರೆದುಕೊಂಡಿದ್ದಾರೆ.
ಹಲವು
ದಿನಗಳ
ಬಳಿಕ
ಒಂದೆ
ಫ್ರೇಮ್ನಲ್ಲಿ
ದರ್ಶನ್,
ಸುದೀಪ್:
ಪೋಟೋ
ವೈರಲ್!

ಕ್ರಾಂತಿಗೆ ಮಾಧ್ಯಮಗಳ ಬೆಂಬಲ ಸಿಗುದಿಲ್ಲವಾ?
ಕ್ರಾಂತಿ ಸಿನಿಮಾ ದರ್ಶನ್ ಸಿನಿಮಾ ಜರ್ನಿಯಲ್ಲಿ ಬಹಳ ವಿಶೇಷವಾಗಿದೆ. ಆದರೆ ಈ ಚಿತ್ರಕ್ಕೆ ಮಾಧ್ಯಮಗಳ ಬೆಂಬಲ ಇಲ್ಲದೆ ಇರುವ ಕಾರಣಕ್ಕೆ ಸಿನಿಮಾ ಏನಾಗುತ್ತದೆ. ಅಥವಾ ಸಿನಿಮಾ ರಿಲೀಸ್ ವೇಳೆಗೆ ಎಲ್ಲಾ ಮಾಧ್ಯಗಳು ಕ್ರಾಂತಿ ಸಿನಿಮಾವನ್ನು ಪ್ರಚಾರ ಮಾಡಲು ಶುರು ಮಾಡುತ್ತವೆಯಾ? ಅಥವಾ ಒಮದು ಹಾಗೆ ಆಗದೇ ಇದ್ರೂ ಕೂಡ ದರ್ಶನ್ ಕ್ರಾಂತಿ ಗೆದ್ದು ಬೀಗುತ್ತದೆಯಾ ಎನ್ನುವುದನ್ನು ನೋಡಬೇಕಿದೆ.