'6ನೇ ಮೈಲಿ' ಚಿತ್ರಕ್ಕಿದೆ '6'ರ ನಂಟು: ಹೀಗೂ ಉಂಟು.!

By Harshitha

ಗಾಂಧಿನಗರದ ಮೂಲೆ ಮೂಲೆಯಲ್ಲೂ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ '6ನೇ ಮೈಲಿ' ಸಿನಿಮಾ ಜುಲೈ 6 ರಂದು ಬಿಡುಗಡೆ ಆಗಲಿದೆ. ಕಳೆದ ವಾರವಷ್ಟೇ ಬಿಡುಗಡೆ ಆದ '6ನೇ ಮೈಲಿ' ಸಿನಿಮಾದ ಟ್ರೈಲರ್ ವ್ಯೂಸ್ ಸದ್ಯ 6 ಲಕ್ಷ ಗಡಿಯನ್ನು ದಾಟಿದೆ.

ಸೂಕ್ಷ್ಮವಾಗಿ ಗಮನಿಸಿದ್ರೆ, ಎಲ್ಲೆಲ್ಲೂ ಆರೇ ಕಾಣ್ತಿದೆ ಅಲ್ವಾ.? ಇದು ಕಾಕತಾಳೀಯ ಅಂತ ನೀವು ಭಾವಿಸಬಹುದು. ಆದ್ರೆ, '6ನೇ ಮೈಲಿ' ಸಿನಿಮಾ ಸೆಟ್ಟೇರಿದಾಗಿನಿಂದಲೂ ಚಿತ್ರತಂಡಕ್ಕೆ ಆರರ ನಂಟು ಉಂಟು.!

ಏನಿದು ಆರರ ನಂಟು ಅಂತ ತಲೆಗೆ ಹುಳ ಬಿಟ್ಟುಕೊಳ್ಳುವ ಮುನ್ನ ಫೋಟೋ ಸ್ಲೈಡ್ ಗಳಲ್ಲಿ ಸಂಪೂರ್ಣ ಮಾಹಿತಿ ಇದೆ, ಓದಿರಿ...

ಮುಹೂರ್ತ ಮತ್ತು ಆರು.!

ಮುಹೂರ್ತ ಮತ್ತು ಆರು.!

ನಾಗಬ್ರಹ್ಮ ಕ್ರಿಯೇಷನ್ಸ್ ರವರ ಚೊಚ್ಚಲ ಸಿನಿಮಾ '6ನೇ ಮೈಲಿ' ಮುಹೂರ್ತ ನಡೆದದ್ದು ಫೆಬ್ರವರಿ 15 (1+5 = 6) ರ೦ದು. ಚಿತ್ರತಂಡ ಹಾಗೂ ಆರರ ನಡುವಿನ ನಂಟು ಶುರುವಾಗಿದ್ದು ಇಲ್ಲಿಂದಲೇ.!

ಆರು ಕಿಲೋಮೀಟರ್ ಅಂತರ.!

ಆರು ಕಿಲೋಮೀಟರ್ ಅಂತರ.!

'6ನೇ ಮೈಲಿ' ಸಿನಿಮಾದ ಚಿತ್ರೀಕರಣಕ್ಕೂ ಮೊದಲು ಪೂಜೆಗೆಂದು ರಾಜನಹಳ್ಳಿಯಲ್ಲಿನ ನಾಗಬ್ರಹ್ಮ ದೇಗುಲಕ್ಕೆ ಭೇಟಿ ನೀಡಲು ಚಿತ್ರತಂಡ ಪ್ಲಾನ್ ಮಾಡಿತ್ತು. ಅಸಲಿಗೆ, ನಾಗಬ್ರಹ್ಮ ದೇಗುಲ ನಿರ್ಮಿಸಿದ್ದು, '6ನೇ ಮೈಲಿ' ಸಿನಿಮಾದ ನಿರ್ಮಾಪಕ ಹಾಗೂ ನಾಗಬ್ರಹ್ಮ ಕ್ರಿಯೇಷನ್ಸ್ ನ ಮಾಲೀಕರಾದ ಡಾ. ಶೈಲೇಶ್ ಕುಮಾರ್. ಇಲ್ಲಿ ಆಶ್ಚರ್ಯ ಏನಂದ್ರೆ, ಚಿತ್ರತ೦ಡ ಉಳಿದಿದ್ದ ರಾಜನಹಳ್ಳಿಯ ಜಾಗದಿಂದ ನಾಗಬ್ರಹ್ಮ ದೇಗುಲಕ್ಕೆ ಸರಿಯಾಗಿ 6 ಕಿಲೋಮಿಟರ್ ಅ೦ತರ.!

'6ನೇ ಮೈಲಿ'ಗಲ್ಲು

'6ನೇ ಮೈಲಿ'ಗಲ್ಲು

ಮೊದಲ ದಿನದ ಚಿತ್ರೀಕರಣ ಮುಗಿಸಿ ಬೆ೦ಗಳೂರಿಗೆ ವಾಪಸ್ ಬರುವಾಗ, ನಿರ್ಮಾಪಕರು ಇದ್ದಕ್ಕಿದ್ದ೦ತೆಯೇ ಗಾಡಿ ನಿಲ್ಲಿಸಿ, ತಮ್ಮ ಜಮೀನು ತೋರಿಸುತ್ತಾ.. ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ನಿರ್ಮಾಣದ ಬಗ್ಗೆ ಮಾತನಾಡುತ್ತಿದ್ದರಂತೆ. ಆಗ ಅಲ್ಲೇ ನಿರ್ದೇಶಕ ಸೀನಿ ಕಣ್ಣಿಗೆ ಬಿದ್ದದ್ದು '6ನೇ ಮೈಲಿ'ಗಲ್ಲು.! ತಕ್ಷಣವೇ, ಕ್ಯಾಮರಾಮ್ಯಾನ್ ಗೆ ಹೇಳಿ ಫೋಟೋ ಕ್ಲಿಕ್ ಮಾಡಿಸಿಕೊಂಡು ಸಿನಿಮಾದ ಪೋಸ್ಟರ್ ನಲ್ಲಿ ಅದೇ ಮೈಲಿಗಲ್ಲನ್ನು ಬಳಸಿಕೊಂಡಿದ್ದಾರೆ ನಿರ್ದೇಶಕ ಸೀನಿ.

ತಿರುಪತಿ ಬೆಟ್ಟದಲ್ಲಿ '6ನೇ ಮೈಲಿ'ಗಲ್ಲು

ತಿರುಪತಿ ಬೆಟ್ಟದಲ್ಲಿ '6ನೇ ಮೈಲಿ'ಗಲ್ಲು

ನಿರ್ದೇಶಕ ಸೀನಿ ಸಿನಿಮಾದ ಟೀಸರ್ ಬಿಡುಗಡೆ ಮಾಡುವ ಮೊದಲು, ತಿರುಪತಿಗೆ ಹೋಗಿದ್ದರು. ತಿರುಪತಿಯಲ್ಲಿ ಬೆಟ್ಟ ಹತ್ತುವಾಗ, ಅಲ್ಲೂ ಅವರಿಗೆ '6ನೇ ಮೈಲಿ'ಗಲ್ಲು ಕಂಡುಬಂತಂತೆ.

ಆರು ಗಂಟೆಗೆ ದರ್ಶನ.!

ಆರು ಗಂಟೆಗೆ ದರ್ಶನ.!

ನಿರ್ದೇಶಕ ಸೀನಿ ಬೆಟ್ಟ ಹತ್ತಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯುವಷ್ಟರಲ್ಲಿ ಸಂಜೆ ಆರು ಗಂಟೆ ಆಗಿತ್ತಂತೆ.!

ಟೀಸರ್ ಬಿಡುಗಡೆ ಮಾಡಿದ್ದೂ ಆರು ಗಂಟೆಗೆ.!

ಟೀಸರ್ ಬಿಡುಗಡೆ ಮಾಡಿದ್ದೂ ಆರು ಗಂಟೆಗೆ.!

ಕಾಕತಾಳೀಯ ಅಂದ್ರೆ, '6ನೇ ಮೈಲಿ' ಸಿನಿಮಾದ ಮೊದಲ ಟೀಸರ್ ಬಿಡುಗಡೆ ಆಗಿದ್ದು ಮಂಗಳೂರಿನ ಮಾಲ್ ನಲ್ಲಿ ಸಂಜೆ ಆರು ಗಂಟೆಗೆ.!

ಮತ್ತೊಂದು 'ಆರು'

ಮತ್ತೊಂದು 'ಆರು'

ಅಷ್ಟಕ್ಕೂ, ನಿರ್ದೇಶಕ ಸೀನಿ ನಿರ್ಮಾಪಕ ಡಾ.ಶೈಲೇಶ್ ಕುಮಾರ್ ರವರಿಗೆ ಚಿತ್ರಕಥೆ ನಿರೂಪಣೆ ಮಾಡಿದ್ದು ಡಿಸೆ೦ಬರ್ 6 ರಂದು!

ಟ್ರೈಲರ್ ಬಿಡುಗಡೆ ಕಥೆ

ಟ್ರೈಲರ್ ಬಿಡುಗಡೆ ಕಥೆ

ಇನ್ನು ಟ್ರೈಲರ್ ಬಿಡುಗಡೆಗೆ೦ದು ಎಷ್ಟೇ ಗುದ್ದಾಡಿದರೂ, ಕೊನೆಗೆ ನೆರೆವೇರಿಸಲಿಕ್ಕಾಗಿದ್ದು ಫೆಬ್ರವರಿಯ 24 (2+4=6) ರಂದು, ಕುವೆ೦ಪು ಕಲಾಕ್ಷೇತ್ರದಲ್ಲಿ ಸ೦ಜೆ 6 ಗ೦ಟೆಗೆ. ಅಷ್ಟೇ ಅಲ್ಲ, ಚೆನ್ನೈನಲ್ಲಿ ಸೌ೦ಡ್ ಎಫೆಕ್ಟ್ ನಡೆದದ್ದು 6ನೇ ನ೦ಬರಿನ ಸ್ಟುಡಿಯೋದಲ್ಲಿ!

ಬಿಡುಗಡೆ ಆಗುತ್ತಿರುವುದು ಆರನೇ ತಾರೀಖು.!

ಬಿಡುಗಡೆ ಆಗುತ್ತಿರುವುದು ಆರನೇ ತಾರೀಖು.!

'6ನೇ ಮೈಲಿ' ಬಿಡುಗಡೆ ದಿನಾ೦ಕ ಜೂನ್ 28ಕ್ಕೆ ಎಂದು ಪ್ಲಾನ್ ಇತ್ತು. ಆದ್ರೆ, ಅನಿವಾರ್ಯ ಕಾರಣಗಳಿಂದ ಜುಲೈ 6ಕ್ಕೆ ನಿಗದಿಯಾಯ್ತು. ಇದಕ್ಕೆ ಕಾಕತಾಳೀಯ ಅಂತೀರೋ ಅಥವಾ ಚಿತ್ರತಂಡಕ್ಕೂ ಆರಕ್ಕೂ ಏನೋ ನಂಟಿದೆ ಅಂತೀರೋ.?

More from Filmibeat

English summary
Read the article to know Kannada Movie '6ne Maili' and its connection with number 6.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X