ಚಿಂದಿ ಉಡಾಯಿಸುತ್ತಿದೆ '6ನೇ ಮೈಲಿ' ಟ್ರೈಲರ್.!
ಒಳ್ಳೆಯ ಸಿನಿಮಾ ಬಂದರೆ ಪ್ರೇಕ್ಷಕ ಮಹಾ ಪ್ರಭು ಖಂಡಿತ ಕೈಬಿಡಲ್ಲ ಅಂತಾರಲ್ಲ, ಅದು '6ನೇ ಮೈಲಿ' ಚಿತ್ರದ ವಿಷಯದಲ್ಲಿ ನಿಜವಾಗಿದೆ.
ಯುವ ನಿರ್ದೇಶಕ ಸೀನಿ ಆಕ್ಷನ್ ಕಟ್ ಹೇಳಿರುವ '6ನೇ ಮೈಲಿ' ಚಿತ್ರದ ಟ್ರೈಲರ್ ಎರಡು ದಿನಗಳ ಹಿಂದೆಯಷ್ಟೇ ಬಿಡುಗಡೆ ಆಗಿತ್ತು. ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಮೃತಹಸ್ತದಿಂದ '6ನೇ ಮೈಲಿ' ಸಿನಿಮಾ ಟ್ರೈಲರ್ ಕಳೆದ ಶನಿವಾರ ಸಂಜೆ 6 ಗಂಟೆಗೆ ರಿಲೀಸ್ ಆಗಿತ್ತು.
ಎರಡು ದಿನಗಳಲ್ಲಿ ಒಂದುವರೆ ಲಕ್ಷಕ್ಕೂ ಅಧಿಕ ಮಂದಿ '6ನೇ ಮೈಲಿ' ಚಿತ್ರದ ಟ್ರೈಲರ್ ವೀಕ್ಷಿಸಿದ್ದಾರೆ. ಒಂದುವರೆ ಸಾವಿರಕ್ಕೂ ಅಧಿಕ ಮಂದಿ '6ನೇ ಮೈಲಿ' ಚಿತ್ರದ ಟ್ರೈಲರ್ ಗೆ ಥಂಬ್ಸ್ ಅಪ್ ಕೊಟ್ಟಿದ್ದಾರೆ. ಟ್ರೈಲರ್ ನೋಡಿ ಇಷ್ಟ ಪಟ್ಟಿರುವ ಜನತೆ ಸಿನಿಮಾ ಬಿಡುಗಡೆಗಾಗಿ ಎದುರು ನೋಡುತ್ತಿದ್ದಾರೆ.

ಯೂಟ್ಯೂಬ್, ಫೇಸ್ ಬುಕ್, ಟ್ವಿಟ್ಟರ್ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ '6ನೇ ಮೈಲಿ' ಅಬ್ಬರ ಜೋರಾಗಿದೆ. ಸಸ್ಪೆನ್ಸ್-ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿರುವ '6ನೇ ಮೈಲಿ' ಚಿತ್ರದ ಬಗ್ಗೆ ಎಲ್ಲ ಕಡೆ ಒಳ್ಳೆಯ ಟಾಕ್ ಕೇಳಿಬರುತ್ತಿದೆ.
ಅಂದ್ಹಾಗೆ, '6ನೇ ಮೈಲಿ' ಚಿತ್ರದಲ್ಲಿ ಸಂಚಾರಿ ವಿಜಯ್, ಆರ್.ಜೆ ನೇತ್ರ ಮುಖ್ಯಭೂಮಿಕೆಯಲ್ಲಿದ್ದಾರೆ. ರಂಗಭೂಮಿ ಕಲಾವಿದರ ದಂಡೇ ಚಿತ್ರದಲ್ಲಿದೆ. ಸಾಯಿ ಕಿರಣ್ ಸಂಗೀತ ಸಂಯೋಜಿಸಿದ್ದಾರೆ. ಡಾ.ಶೈಲೇಶ್ ಕುಮಾರ್ ಬಂಡವಾಳ ಹಾಕಿದ್ದಾರೆ.
ಕನ್ನಡಿಗರ ಎದೆಬಡಿತ ಹೆಚ್ಚು ಮಾಡಿರುವ '6ನೇ ಮೈಲಿ' ಸಿನಿಮಾ ಇದೇ ಶುಕ್ರವಾರ (ಜುಲೈ 6) ಬಿಡುಗಡೆ ಆಗಲಿದೆ.


Click it and Unblock the Notifications











