ಯೂಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿದೆ '6ನೇ ಮೈಲಿ' ಟ್ರೈಲರ್

By Harshitha

ಹೊಸಬರ ಹೊಸ ಪ್ರಯತ್ನವಾಗಿರುವ '6ನೇ ಮೈಲಿ' ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗುತ್ತಿದೆ. ಅದಕ್ಕೆ ಸಾಕ್ಷಿ '6ನೇ ಮೈಲಿ' ಚಿತ್ರದ ಟ್ರೈಲರ್ ಗೆ ಯೂಟ್ಯೂಬ್ ನಲ್ಲಿ ಸಿಕ್ಕಿರುವ ವ್ಯೂಸ್.

ಯೂಟ್ಯೂಬ್ ನಲ್ಲಿ '6ನೇ ಮೈಲಿ' ಚಿತ್ರದ ಟ್ರೈಲರ್ ಧೂಳೆಬ್ಬಿಸಿದೆ. ಬಿಡುಗಡೆ ಆದ ನಾಲ್ಕು ದಿನಗಳಲ್ಲಿ '6ನೇ ಮೈಲಿ' ಚಿತ್ರದ ಟ್ರೈಲರ್ ಗೆ ಯೂಟ್ಯೂಬ್ ನಲ್ಲಿ ಹತ್ತತ್ರ ಏಳು ಲಕ್ಷ ವ್ಯೂಸ್ ಗಿಟ್ಟಿಸಿದೆ.

ಯುವ ಪ್ರತಿಭೆ ಸೀನಿ ಆಕ್ಷನ್ ಕಟ್ ಹೇಳಿರುವ '6ನೇ ಮೈಲಿ' ಚಿತ್ರದಲ್ಲಿ ಸಂಚಾರಿ ವಿಜಯ್ ಹಾಗೂ ಆರ್.ಜೆ ನೇತ್ರ ಮುಖ್ಯಭೂಮಿಕೆಯಲ್ಲಿದ್ದಾರೆ. ಆರ್.ಜೆ ಸುಧೇಶ್ ಭಟ್ ಸೇರಿದಂತೆ ರಂಗಭೂಮಿ ಕಲಾವಿದರ ದಂಡೇ ಚಿತ್ರದಲ್ಲಿದೆ.

Kannada Movie 6ne Maili gets more than 6 Lakh views in Youtube

ಮೇಲ್ನೋಟಕ್ಕೆ ಸಸ್ಪೆನ್ಸ್-ಥ್ರಿಲ್ಲರ್ ಚಿತ್ರದಂತೆ ಕಾಣುವ '6ನೇ ಮೈಲಿ' ಸಿನಿಮಾದ ಟ್ರೈಲರ್ ಗೆ ಪ್ರೇಕ್ಷಕರಂತೂ ಕ್ಲೀನ್ ಬೌಲ್ಡ್ ಆಗಿದ್ದಾರೆ. ಸಿನಿಮಾ ಯಾವಾಗ ರಿಲೀಸ್ ಆಗುತ್ತೋ ಅಂತ ಕಾತರದಿಂದ ಕಾಯುತ್ತಿದ್ದಾರೆ.

ಅಂದ್ಹಾಗೆ, '6ನೇ ಮೈಲಿ' ಚಿತ್ರಕ್ಕೆ ಬಂಡವಾಳ ಹಾಕಿರುವವರು ಡಾ.ಶೈಲೇಶ್ ಕುಮಾರ್. ಇನ್ನೂ ಸಂಗೀತ ನೀಡಿರುವವರು ಸಾಯಿ ಕಿರಣ್. ಕನ್ನಡಿಗರ ಕುತೂಹಲ ಕೆರಳಿಸಿರುವ '6ನೇ ಮೈಲಿ' ಸಿನಿಮಾ ಜುಲೈ 6 ರಂದು ಬಿಡುಗಡೆ ಆಗಲಿದೆ.

More from Filmibeat

English summary
Kannada Actor Sanchari Vijay and RJ Netra starrer Kannada Movie '6ne Maili' gets more than 6 Lakh views in Youtube.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X