For Quick Alerts
  ALLOW NOTIFICATIONS  
  For Daily Alerts

  ಬಿಡುಗಡೆಗೆ ಸಿದ್ಧವಾಯ್ತು '6ನೇ ಮೈಲಿ', ಹೊಸದಾಗಿ ಸೆಟ್ಟೇರಿತು 'ಚದುರಂಗ'

  By Bharath Kumar
  |

  ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅಭಿನಯದ '6ನೇ ಮೈಲಿ ಚಿತ್ರದ ಪ್ರಥಮ ಪ್ರತಿ ಸಿದ್ದವಾಗಿದ್ದು, ಚಿತ್ರ ಜೂನ್‍ ನಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

  ಸೀನಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಸಾಯಿಕಿರಣ್ ಸಂಗೀತ ನೀಡಿದ್ದಾರೆ. ಡಾ. ಬಿಎಸ್.ಶೈಲೇಶ್ ಕುಮಾರ್ ಈ ಚಿತ್ರವನ್ನ ನಿರ್ಮಾಣ ಮಾಡಿದ್ದು, ಈಗಾಗಲೇ ಹಾಡುಗಳು ಬಿಡುಗಡೆಯಾಗಿದೆ.

  ಇನ್ನುಳಿದಂತೆ ಸಂಚಾರಿ ವಿಜಯ್ ಜೊತೆಯಲ್ಲಿ, ಆರ್.ಜೆ.ನೇತ್ರ, ರಘು ಪಾಂಡೇಶ್ವರ್, ಕೃಷ್ಣ ಹೆಬ್ಬಾಳೆ, ಡಾ. ಜಾಹ್ನವಿ, ಆರ್.ಜೆ.ಸುದ್ದೇಶ್, ಹೇಮಂತ್ ಸುಶೀಲ್, ಮೈತ್ರಿ ಜಗ್ಗಿ ಮುಂತಾದವರಿದ್ದಾರೆ.

  ಸೆಟ್ಟೇರಿತು ಹೊಸ ''ಚದುರಂಗ''

  ವಿಷ್ಣುವರ್ಧನ್ ನಿರ್ಮಿಸುತ್ತಿರುವ ''ಚದುರಂಗ'' ಚಿತ್ರಕ್ಕೆ ಕಳೆದ ವಾರ ಕಂಠೀರವ ಸ್ಟುಡಿಯೋದಲ್ಲಿ ನಾಯಕ ಸುಮನ್ ಶರ್ಮ ಹಾಗೂ ನಾಯಕಿ ಸಂಭ್ರಮ ಅಭಿನಯದ ಮೊದಲ ದೃಶ್ಯಕ್ಕೆ ನಿರ್ಮಾಪಕ ಶ್ರೀನಿವಾಸ್ ಕ್ಯಾಮರಾ ಚಾಲನೆ ಮಾಡಿದರೆ, ನಟ ಜೈಜಗದೀಶ್ ಕ್ಲಾಪ್ ಮಾಡಿದರು.

  ಈ ಹಿಂದೆ 'ಇಷ್ಟಾರ್ಥ', 'ಗಾಯಿತ್ರಿ', 'ಚತುರ' ಚಿತ್ರಗಳನ್ನು ನಿರ್ದೇಶಿಸಿದ್ದ ಸತ್ಯ ಸಾಮ್ರಾಟ್ ಅವರ ನಿರ್ದೇಶನದಲ್ಲಿ ''ಚದುರಂಗ'' ಚಿತ್ರವನ್ನು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಹಾಗೂ ಲವ್ ಕಥಾಹಂದರ ಹೊಂದಿರುವ ಈ ಚಿತ್ರವು ಕನ್ನಡ ಹಾಗೂ ತೆಲುಗು ಸೇರಿ ಎರಡು ಭಾಷೆಗಳಲ್ಲಿ ತಯಾರಾಗಲಿದೆ.

  ಹಿಂದಿಗೆ ಪ್ರಭುತ್ವ'

  ಚೇತನ್ ಚಂದ್ರ ನಾಯಕರಾಗಿ ನಟಿಸಿರುವ ಪ್ರಭುತ್ವ' ಚಿತ್ರ ಹಿಂದಿ ಭಾಷೆಗೆ ಹೆಚ್ಚಿನ ಮೊತ್ತಕ್ಕೆ ಮಾರಾಟವಾಗಿರುವ ಸಂತಸದ ಸುದ್ದಿ ಚಿತ್ರತಂಡದಿಂದ ಬಂದಿದೆ. ಆರ್.ರಂಗಾನಾಥ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಪ್ರಭುತ್ವ' ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಮೇಘರಾಜ್ ಮೂವೀಸ್ ಲಾಂಛನದಲ್ಲಿ ಎಸ್.ರವಿರಾಜ್ ಹಾಗೂ ಎಸ್ ಕುಮಾರ್ ಈ ಚಿತ್ರವನ್ನ ನಿರ್ಮಿಸಿದ್ದಾರೆ.

  ಚೇತನ್ ಚಂದ್ರ ಜೊತೆಗೆ ಪಾವನ. ನಾಜರ್, ಮುನಿ, ಪೆಟ್ರೋಲ್ ಪ್ರಸನ್ನ, ಶರತ್ ಲೋಹಿತಾಶ್ವ, ಆದಿಲೋಕೇಶ್, ಗಿರಿ, ಹರೀಶ್ ರೈ, ಪೂಜಾಲೋಕೇಶ್, ಅವಿನಾಶ್, ವೀಣಾಸುಂದರ್, ವಿಜಯ್ ಚೆಂಡೂರ್, ಅಮಿತಾ ಕುಲಾಳ್, ಅನಿತಾ ಭಟ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

  English summary
  Kannada movie 6ne maili will releasing on june. sathya sai directional new movie chaduranga starts shooting.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X