For Quick Alerts
  ALLOW NOTIFICATIONS  
  For Daily Alerts

  'ಆ ಒಂದು ದಿನ'ದ ನಂತರ ದೇಶ ಬದಲಾಗಬಹುದು.?

  By Bharath Kumar
  |

  ವಿಭಿನ್ನ ಟೈಟಲ್ ಹಾಗೂ ದೇಶವನ್ನ ಬದಲಾಯಿಸುವ ಉದ್ದೇಶ ಹೊತ್ತು ಕನ್ನಡದಲ್ಲೊಂದು ಸಿನಿಮಾ ಬರ್ತಿದೆ. ಆ ಚಿತ್ರದ ಹೆಸರೇ 'ಆ ಒಂದು ದಿನ'. ಇದೇ ಫೆಬ್ರವರಿ 2 ರಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ.

  ಒಂದು ಹಳ್ಳಿ, ಆ ಹಳ್ಳಿಯಲ್ಲಿ ನಡೆಯುವ ಚುನಾವಣೆಯ ಭರಾಟೆ. ಅಲ್ಲಿನ ಗೌಡರ ನಡುವೆ ನಡೆಯುವ ಜಿದ್ದಾ ಜಿದ್ದಿ ಸ್ಪರ್ಧೆ. ಹಳ್ಳಿಯಲ್ಲಿರುವ ಎರಡು ಬಣಗಳ ನಡುವೆ ಇರುವ ಭಿನ್ನಾಭಿಪ್ರಾಯಗಳು ಏನೆಲ್ಲ ಅನಾಹುತಗಳಿಗೆ ಎಡೆಮಾಡಿಕೊಡುತ್ತದೆ ಎನ್ನುವುದೇ ಚಿತ್ರದ ತಿರುಳು. ಇವೆಲ್ಲವೂ ಚಿತ್ರದ ಕಥೆಯಲ್ಲಿ ಅಡಕವಾಗಿದೆ.

  ಕರ್ನಾಟಕ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಇಂತಹದೊಂದು ಸಿನಿಮಾ ರಿಲೀಸ್ ಆಗುತ್ತಿರುವುದು, ಜನರ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರುತ್ತೋ ಗೊತ್ತಿಲ್ಲ. ಆದ್ರೆ, ಈ ಚಿತ್ರದಿಂದ ಜನರಲ್ಲಿ ರಾಜಕೀಯದ ಬಗ್ಗೆ ಹೊಸ ಭಾವನೆ ಮೂಡಬೇಕು ಎನ್ನುವುದು ಚಿತ್ರತಂಡದ ಆಶಯ.

  ಧಾರವಾಡ ಮೂಲದ ಬಾಂಬೆಯಲ್ಲಿ ಡಾನ್ಸರ್ ಆಗಿರುವ ಸಿಮ್ರಾನ್ ಚಿತ್ರದ ನಾಯಕಿ. ದ್ರಾಕ್ಷಿ ಬೆಳೆಗಾರ ರವೀಂದ್ರಗೌಡ ಎನ್‌.ಪಾಟೀಲ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ಮಾಣವನ್ನೂ ಮಾಡಿದ್ದಾರೆ. ಇನ್ನುಳಿದಂತೆ ಚಿತ್ರದಲ್ಲಿ ಎಲ್ಲ ಹೊಸ ಕಲಾವಿದರೇ ಅಭಿನಯಿಸಿದ್ದಾರೆ.

  ನಿರ್ದೇಶಕ ಶ್ರೀಹರ್ಷ ಸಂಜಯ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರಕ್ಕೆ ಸಂಗಿತ ಕೂಡ ಇವರೇ ನೀಡಿದ್ದಾರೆ. ಸಾಮಾಜಿಕ ಅರಿವು ಮೂಡಿಸುವಂಥ ಒಂದು ಹಾಡನ್ನು ವಿಜಯ ಪ್ರಕಾಶ್‌ ಹಾಡಿದ್ದು, ಇನ್ನುಳಿದಂತೆ ಎರಡು ಐಟಂ ಹಾಡು ಚಿತ್ರದಲ್ಲಿದೆ.

  English summary
  kannada movie a ondu dina will release on february 2nd. the movie directed by sri harsha and produced by ravindra gowda s patil.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X