ಯೋಗರಾಜ್ ಭಟ್ ಮಾವ, ನಟ ಸತ್ಯ ಉಮ್ಮತ್ತಾಲ್ ನಿಧನ
ಜನಪ್ರಿಯ ನಿರ್ದೇಶಕ ಯೋಗರಾಜ್ ಭಟ್ಟರ ಮಾವ, ನಟ ಸತ್ಯ ಉಮ್ಮತ್ತಾಲ್ ಇಂದು ನಿಧನ ಹೊಂದಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು.
ಯೋಗರಾಜ್ ಭಟ್ಟರ ಪತ್ನಿಯ ತಂದೆ ಸತ್ಯ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದು, ಯೋಗರಾಜ್ ಭಟ್ಟರ ಜೊತೆಗೆ ಅವರ ಬೆಂಗಳೂರಿನ ನಿವಾಸದಲ್ಲಿಯೇ ವಾಸವಿದ್ದರು.
ಯೋಗರಾಜ್ ಭಟ್ಟರ ಶಿಷ್ಯರಲ್ಲಿ ಒಬ್ಬರಾದ ಪವನ್ ಕುಮಾರ್ ನಿರ್ದೇಶಿಸಿದ ಮೊದಲ ಸಿನಿಮಾ 'ಲೈಫು ಇಷ್ಟೇನೆ' ಸಿನಿಮಾ ಮೂಲಕ ನಟನೆ ಆರಂಭಿಸಿದ್ದ ಸತ್ಯ ಉಮ್ಮತ್ತಾಲ್, ಆ ನಂತರ ಹಲವಾರು ಕನ್ನಡ ಸಿನಿಮಾಗಳಲ್ಲಿ ನಟಿಸಿದರು.

ಯೋಗರಾಜ್ ಭಟ್ಟರ 'ದನ ಕಾಯೋನು' ಸೇರಿದಂತೆ ಸೂರಿಯ 'ಕಡ್ಡಿಪುಡಿ', 'ಕೆಂಡ ಸಂಪಿಗೆ', ಮಂಸೋರೆಯ 'ಆಕ್ಟ್ 1978', 'ಜಯಮ್ಮನ ಮಗ', 'ಪ್ರೀತಿ ಗೀತಿ ಇತ್ಯಾದಿ' ಇನ್ನು ಹಲವು ಕನ್ನಡ ಸಿನಿಮಾಗಳಲ್ಲಿ ಭಟ್ಟರು ಸತ್ಯ ಉಮ್ಮತ್ತಾಲ್ ನಟಿಸಿದ್ದಾರೆ.
ಸತ್ಯ ಅವರ ಅಗಲಿಕೆಗೆ ಚಿತ್ರರಂಗದ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ನಿರ್ದೇಶಕ ಮಂಸೋರೆ, ವೀರೇಂದ್ರ ಮಲ್ಲಣ್ಣ, ನಟ ಧರ್ಮಣ್ಣ ಕಡೂರು ಇನ್ನೂ ಹಲವರು ಸಾಮಾಜಿಕ ಜಾಲತಾಣದಲ್ಲಿ ಅಗಲಿದ ಜೀವನಕ್ಕೆ ಅಂದಿಮ ವಿದಾಯ ಹೇಳಿದ್ದಾರೆ. ಅವರೊಟ್ಟಿಗೆ ಕಳೆದ ಕ್ಷಣಗಳನ್ನು ನೆನಪು ಮಾಡಿಕೊಂಡಿದ್ದಾರೆ.
ಯೋಗರಾಜ್ ಭಟ್ಟರ ಮನೆಯಲ್ಲಿಯೇ ಸತ್ಯ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇಂದು ಸಂಜೆಯೇ ಬೆಂಗಳೂರಿನ ರುದ್ರಭೂಮಿಯಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ.


Click it and Unblock the Notifications











