»   » ಕನ್ನಡದ ಸ್ಟಾರ್ ನಟರು ಈಗ ಯಶಸ್ವಿ ನಿರ್ಮಾಪಕರು

ಕನ್ನಡದ ಸ್ಟಾರ್ ನಟರು ಈಗ ಯಶಸ್ವಿ ನಿರ್ಮಾಪಕರು

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನ ಸಕ್ಸಸ್ ಫುಲ್ ಸ್ಟಾರ್ ನಟರಿಗೆ ಈಗ ನಿರ್ಮಾಣದ ಕನಸು ಹೆಚ್ಚಾಗುತ್ತಿದೆ. ಕನ್ನಡದ ನಾಯಕ ನಟರು ನಟನೆ ಮಾಡುವುದರ ಜೊತೆ ಜೊತೆಗೆ ನಿರ್ಮಾಪಕರಾಗಿಯೂ ಕೆಲಸ ಮಾಡುತ್ತಿದ್ದಾರೆ.

ಕನ್ನಡದ ನಟರಾದ ಉಪೇಂದ್ರ, ಪುನೀತ್, ದರ್ಶನ್, ಸುದೀಪ್ ಸೇರಿದಂತೆ ಸಾಕಷ್ಟು ಹೀರೋಗಳು ತಮ್ಮ ಹೋಮ್ ಬ್ಯಾನರ್ ನಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಈಗೀಗ ನಟರು ತಮ್ಮ ಸಿನಿಮಾಗೆ ತಾವೇ ಬಂಡವಾಳ ಹಾಕಿ ಯಶಸ್ವಿಯಾಗುತ್ತಿದ್ದಾರೆ. ಇನ್ನೂ ಕೆಲವು ನಟರು ತಮ್ಮ ಬ್ಯಾನರ್ ನಲ್ಲಿ ವಿಭಿನ್ನ ಸಿನಿಮಾಗಳನ್ನು ಮಾಡುವುದಕ್ಕೆ ಮುಂದಾಗಿದ್ದಾರೆ. ಮುಂದೆ ಓದಿ...

ನಿರ್ಮಾಪಕರಾದ ಪುನೀತ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇತ್ತೀಚಿಗಷ್ಟೆ ತಮ್ಮ ಸ್ವಂತ ನಿರ್ಮಾಣ ಸಂಸ್ಥೆಯನ್ನು ಶುರು ಮಾಡಿದ್ದರು. 'ಕವಲು ದಾರಿ' ಎಂಬ ಸಿನಿಮಾಕ್ಕೆ ಪುನೀತ್ ಈಗ ನಿರ್ಮಾಪಕರಾಗಿದ್ದು, 'ಗೋಧಿ ಬಣ್ಣ ಸಾಧಾರಣ ಮೈ ಕಟ್ಟು' ಖ್ಯಾತಿಯ ನಿರ್ದೇಶಕ ಹೇಮಂತ್ ರಾವ್ ಈ ಚಿತ್ರವನ್ನು ಡೈರೆಕ್ಟ್ ಮಾಡುತ್ತಿದ್ದಾರೆ.

'ಉಪೇಂದ್ರ ಪ್ರೊಡಕ್ಷನ್ಸ್'

ರಿಯಲ್ ಸ್ಟಾರ್ ಉಪೇಂದ್ರ ಸಹ ಕಳೆದ ವರ್ಷ ತಮ್ಮ'ಉಪೇಂದ್ರ ಪ್ರೊಡಕ್ಷನ್ಸ್' ಬ್ಯಾನರ್ ಶುರು ಮಾಡಿದ್ದರು. 'ಉಪ್ಪಿ 2' ಸಿನಿಮಾ 'ಉಪೇಂದ್ರ ಪ್ರೊಡಕ್ಷನ್ಸ್' ಅಡಿಯಲ್ಲಿ ಬಂದ ಮೊದಲ ಸಿನಿಮಾವಾಗಿದೆ.

'ತೂಗುದೀಪ ಪ್ರೊಡಕ್ಷನ್ಸ್'

ದರ್ಶನ್ ಈಗಾಗಲೇ ತಮ್ಮ ತೂಗುದೀಪ ನಿರ್ಮಾಣ ಸಂಸ್ಥೆಯನ್ನು ಹೊಂದಿದ್ದಾರೆ. 'ನವಗ್ರಹ', 'ಬುಲ್ ಬುಲ್' ಚಿತ್ರಗಳು ದರ್ಶನ್ ಅವರ ಬ್ಯಾನರ್ ನಲ್ಲಿ ಬಂದ ಪ್ರಮುಖ ಸಿನಿಮಾಗಳಿವೆ.

'ಕಿಚ್ಚ ಕ್ರಿಯೇಷನ್ಸ್'

ನಟ ಸುದೀಪ್ ಕೂಡ ಈ ಹಿಂದೆಯೇ ನಿರ್ಮಾಪಕರಾಗಿದ್ದಾರೆ. ಸಿನಿಮಾದ ಜೊತೆಗೆ ಕಿರುತೆರೆಯ 'ವಾರಸ್ದಾರ' ಧಾರಾವಾಹಿಯನ್ನು ಸುದೀಪ್ ನಿರ್ಮಾಣ ಮಾಡಿದ್ದಾರೆ.

'ಗೋಲ್ಡನ್ ಮೂವೀಸ್'

ನಟ ಗಣೇಶ್ 'ಗೋಲ್ಡನ್ ಮೂವೀಸ್' ಎಂಬ ತಮ್ಮ ಹೋಮ್ ಬ್ಯಾನರ್ ಹೊಂದಿದ್ದಾರೆ.

ರಕ್ಷಿತ್ ಶೆಟ್ಟಿ

'ಕಿರಿಕ್ ಪಾರ್ಟಿ' ಚಿತ್ರದ ಮೂಲಕ ನಟ ರಕ್ಷಿತ್ ಶೆಟ್ಟಿ ಕೂಡ ನಿರ್ಮಾಪಕರಾಗಿದ್ದಾರೆ.

ಅಜಯ್ ರಾವ್ ಮತ್ತು ಸತೀಶ್ ನೀನಾಸಂ

ನಟ ಅಜಯ್ ರಾವ್ ಮತ್ತು ಸತೀಶ್ ನೀನಾಸಂ ಈಗಾಗಲೇ ತಮ್ಮ ನಟನೆಯ ಕೆಲ ಚಿತ್ರಗಳಿಗೆ ತಾವೇ ನಿರ್ಮಾಪಕರಾಗಿದ್ದಾರೆ. ಅಜಯ್ 'ಕೃಷ್ಣಲೀಲಾ' ಚಿತ್ರವನ್ನು ನಿರ್ಮಾಣ ಮಾಡಿದ್ದು, ಸತೀಶ್ 'ರಾಕೆಟ್' ಚಿತ್ರವನ್ನು ಪ್ರೊಡ್ಯೂಸ್ ಮಾಡಿದ್ದಾರೆ.

English summary
8 Kannada Movie Actors Turned As Producers.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada