1 ಚಿತ್ರಕ್ಕೆ ರಶ್ಮಿಕಾ, ಆಶಿಕಾ, ರಚಿತಾ, ಅದಿತಿ ಸಂಭಾವನೆ ಎಷ್ಟು?

ಸಂಭಾವನೆ ತಾರತಮ್ಯದ ಬಗ್ಗೆ ಬಾಲಿವುಡ್ ನಲ್ಲಿ ಇತ್ತೀಚಿಗಷ್ಟೆ ಕೂಗು ಕೇಳಿಸಿದೆ. ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ನಟಿಯರಿಗೆ ಸಹ ಸಿನಿಮಾದ ಲಾಭಾಂಶದಲ್ಲಿ ಭಾಗ ನೀಡಲು ಮುಂದೆ ಬಂದಿದ್ದಾರೆ. ಮತ್ತೊಂದು ಕಡೆ ನಟಿ ತಾಪ್ಸಿ ಪನ್ನು ನಟಿಯರಿಗಿಂತ ನಟರಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದಿದ್ದಾರೆ.

ಸಂಭಾವನೆ ತಾರತಮ್ಯದ ಬಗ್ಗೆ ಮಾತುಗಳು ಕೇಳಿ ಬರುವಾಗ ಕನ್ನಡದ ನಟಿಯರ ಸಂಭಾವನೆ ಎಷ್ಟಿದೆ ಎನ್ನುವ ಪ್ರಶ್ನೆ ಮೂಡುತ್ತದೆ. ದುಡ್ಡು ಕೊಟ್ಟು ಸಿನಿಮಾಗೆ ಹೋಗುವ ಪ್ರೇಕ್ಷಕ ಆ ಸಿನಿಮಾದ ಕಲಾವಿದರು ಪಡೆಯುವ ಹಣದ ಬಗ್ಗೆ ಕುತೂಹಲ ಹೊಂದಿರುತ್ತಾನೆ. ಹೀಗಿರುವಾಗ, ಗಾಂಧಿನಗರದ ಮೂಲಗಳಿಂದ ನಟಿಯರ ಸಂಭಾವನೆಯ ಲೆಕ್ಕಾಚಾರ ಸಿಕ್ಕಿದೆ.

ಸ್ಯಾಂಡಲ್ ವುಡ್ ನಲ್ಲಿ ಸದ್ಯ ಹೆಚ್ಚು ಬೇಡಿಕೆ ಹೊಂದಿರುವ ರಚಿತಾ ರಾಮ್, ಶಾನ್ವಿ ಶ್ರೀವಾಸ್ತವ್, ರಶ್ಮಿಕಾ ಮಂದಣ್ಣ, ಅದಿತಿ ಪ್ರಭುದೇವ, ಮಾನ್ವಿತಾ ಕಾಮತ್, ಶ್ರದ್ಧಾ ಶ್ರೀನಾಥ್, ರಾಗಿಣಿ ದ್ವಿವೇದಿ, ಆಶಿಕಾ ರಂಗನಾಥ್ ಸಂಭಾವನೆ ಪಟ್ಟಿ ಹೀಗಿದೆ.

60 ರಿಂದ 65 ಲಕ್ಷ ಪಡೆಯುವ ರಶ್ಮಿಕಾ

60 ರಿಂದ 65 ಲಕ್ಷ ಪಡೆಯುವ ರಶ್ಮಿಕಾ

ಸದ್ಯ, ಸಂಭಾವನೆ ವಿಚಾರದಲ್ಲಿ ನಟಿ ರಶ್ಮಿಕಾ ಮಂದಣ್ಣ ನಂಬರ್ ಒನ್ ಹೀರೋಯಿನ್ ಆಗಿದ್ದಾರೆ. ತೆಲುಗು, ತಮಿಳು ಚಿತ್ರರಂಗಕ್ಕೆ ಕಾಲಿಟ್ಟ ರಶ್ಮಿಕಾ ತಮ್ಮ ಸಂಭಾವನೆಯನ್ನು ಹೆಚ್ಚಿಕೊಂಡಿದ್ದಾರೆ. ಒಬ್ಬ ನಿರ್ಮಾಪಕ ರಶ್ಮಿಕಾ ಜೊತೆಗೆ ಸಿನಿಮಾ ಮಾಡಬೇಕು ಎಂದರೆ, 60 ರಿಂದ 65 ಲಕ್ಷ ಸಂಭಾವನೆ ನೀಡಬೇಕಾಗಿದೆ. ಮಹೇಶ್ ಬಾಬು, ಅಲ್ಲು ಅರ್ಜುನ್ ಚಿತ್ರಗಳಲ್ಲಿ ರಶ್ಮಿಕಾ ನಟಿಸುತ್ತಿದ್ದು, ಈ ಚಿತ್ರಗಳ ಬಳಿಕ ಅವರ ಸಂಭಾವನೆ ಮತ್ತೆ ಹೆಚ್ಚಾಗಬಹುದು.

35 ರಿಂದ 40 ಲಕ್ಷ ಪಡೆಯುವ ರಚಿತಾ ರಾಮ್

35 ರಿಂದ 40 ಲಕ್ಷ ಪಡೆಯುವ ರಚಿತಾ ರಾಮ್

ಎಲ್ಲ ಸ್ಟಾರ್ ನಟರ ಜೊತೆಗೆ ತೆರೆ ಹಂಚಿಕೊಂಡ ರಚಿತಾ ರಾಮ್ ಈಗ ಸ್ಯಾಂಡಲ್ ವುಡ್ ನ ಟಾಪ್ ನಟಿಯರ ಪೈಕಿ ಒಬ್ಬರು. ರಚಿತಾ ರಾಮ್ ಸದ್ಯ ಒಂದು ಸಿನಿಮಾ 35 ರಿಂದ 40 ಲಕ್ಷ ಸಂಭಾವನೆಯನ್ನು ಫಿಕ್ಸ್ ಮಾಡಿದ್ದಾರೆ. ತೆಲುಗು ಇಂಡಸ್ಟ್ರಿಗೆ ಕಾಲಿಟ್ಟಿರುವ ಡಿಂಪಲ್ ಕ್ವೀನ್ ಅಲ್ಲಿನ ಸಿನಿಮಾದ ಎಷ್ಟು ಹಣ ತೆಗೆದುಕೊಂಡಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಇಲ್ಲ.

ಸ್ಯಾಂಡಲ್ ವುಡ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಯಾರು?

ಶಾನ್ವಿ ಶ್ರೀವಾಸ್ತವ್ ಸಂಭಾವನೆ 20 ರಿಂದ 25 ಲಕ್ಷ

ಶಾನ್ವಿ ಶ್ರೀವಾಸ್ತವ್ ಸಂಭಾವನೆ 20 ರಿಂದ 25 ಲಕ್ಷ

ದಿನದಿಂದ ದಿನಕ್ಕೆ ಶಾನ್ವಿ ಶ್ರೀವಾಸ್ತವ್ ಬೇಡಿಕೆ ಕನ್ನಡದಲ್ಲಿ ಹೆಚ್ಚಾಗುತ್ತಿದೆ. ಒಂದು ಸಿನಿಮಾಗೆ ಶಾನ್ವಿ ಶ್ರೀವಾಸ್ತವ್ 20 ರಿಂದ 25 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಶಾನ್ವಿ ಶ್ರೀವಾಸ್ತವ್ 'ಅವನೇ ಶ್ರೀಮನ್ನಾರಾಯಣ' ಚಿತ್ರದಲ್ಲಿ ನಾಯಕಿಯಾಗಿದ್ದಾರೆ. ಇದೊಂದು ದೊಡ್ಡ ಸಿನಿಮಾ ಆಗಿದ್ದು, ಈ ಸಿನಿಮಾ ಹಿಟ್ ಆದ್ರೆ, ಶಾನ್ವಿ ಸಂಭಾವನೆ ಏರಿಕೆ ಆಗಬಹುದು.

ಶ್ರದ್ಧಾ ಶ್ರೀನಾಥ್ ಸಂಭಾವನೆ 20 ಲಕ್ಷ

ಶ್ರದ್ಧಾ ಶ್ರೀನಾಥ್ ಸಂಭಾವನೆ 20 ಲಕ್ಷ

'ಯೂ ಟರ್ನ್' ಸಿನಿಮಾದ ಮೂಲಕ ಚಂದನವನಕ್ಕೆ ಬಂದ ಶ್ರದ್ಧಾ ಶ್ರೀನಾಥ್ ಈಗ ಬೇರೆ ಬೇರೆ ಭಾಷೆಗಳಲ್ಲಿ ನಟಿಸುತ್ತಿದ್ದಾರೆ. ಕನ್ನಡದ ಸಿನಿಮಾಗೆ ಶ್ರದ್ಧಾ ಶ್ರೀನಾಥ್ 20 ಲಕ್ಷ ರೂಪಾಯಿ ಪಡೆಯುತ್ತಾರೆ. ಬೇರೆ ಭಾಷೆಯ ಸಿನಿಮಾಗೆ ಅವರು ಪಡೆಯುವ ಸಂಭಾವನೆ ಏನು ಎನ್ನುವುದು ನಿಗೂಢವಾಗಿದೆ. ಹಿಂದಿ, ತಮಿಳು, ತೆಲುಗಿನಲ್ಲಿ ಶ್ರದ್ಧಾ ನಟಿಸಿದ್ದಾರೆ.

15 ರಿಂದ 20 ಲಕ್ಷ ಪಡೆಯುತ್ತಾರೆ ರಾಗಿಣಿ

15 ರಿಂದ 20 ಲಕ್ಷ ಪಡೆಯುತ್ತಾರೆ ರಾಗಿಣಿ

ನಟಿ ರಾಗಿಣಿ ದ್ವಿವೇದಿ ಗ್ಲಾಮರ್ ಪಾತ್ರಕ್ಕೆ ಜೈ, ಆಕ್ಷನ್ ಪಾತ್ರಕ್ಕೆ ಸೈ ಎನ್ನುವ ನಾಯಕಿ. ಸದ್ಯ ರಾಗಿಣಿ ಕೈ ನಲ್ಲಿ ಹೆಚ್ಚು ಸಿನಿಮಾಗಳ ಅವಕಾಗಳು ಇಲ್ಲ. ರಾಗಿಣಿ ಸಂಭಾವನೆ ಈಗ 15 ರಿಂದ 20 ಲಕ್ಷಕ್ಕೆ ಬಂದಿದೆ. ಇತ್ತೀಚಿಗಷ್ಟೆ 'ಅಧ್ಯಕ್ಷ ಇನ್ ಅಮೇರಿಕಾ' ಸಿನಿಮಾದಲ್ಲಿ ರಾಗಿಣಿ ದ್ವಿವೇದಿ ನಟಿಸಿದ್ದರು.

ಆಶಿಕಾ ರಂಗನಾಥ್ ಸಂಭಾವನೆ 15 ಲಕ್ಷ

ಆಶಿಕಾ ರಂಗನಾಥ್ ಸಂಭಾವನೆ 15 ಲಕ್ಷ

ಆಶಿಕಾ ರಂಗನಾಥ್ ಕೈನಲ್ಲಿ ಮೂರ್ನಾಲ್ಕು ಅವಕಾಶಗಳು ಇವೆ. ಒಂದು ಸಿನಿಮಾಗೆ ಆಶಿಕಾ ರಂಗನಾಥ್ 15 ಲಕ್ಷ ಚಾರ್ಚ್ ಮಾಡುತ್ತಿದ್ದಾರೆ. ಹೊಸಬರು ಹಾಗೂ ಸ್ಟಾರ್ ಗಳ ಜೊತೆಗೆ ಆಶಿಕಾ ನಟಿಸುತ್ತಿದ್ದಾರೆ. ಸದ್ಯ ಪವನ್ ಒಡೆಯರ್ ನಿರ್ದೇಶನದ ಇಶಾನ್ ನಟನೆಯ 'ರೆಮೋ' ಸಿನಿಮಾದಲ್ಲಿ ಆಶಿಕಾ ನಾಯಕಿ ಆಗಿದ್ದಾರೆ. ಶರಣ್ ಜೊತೆಗೆ 'ಅವತಾರ್ ಪುರುಷ'ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

8 ರಿಂದ 10 ಲಕ್ಷ ಪಡೆಯುವ ಅದಿತಿ ಪ್ರಭುದೇವ

8 ರಿಂದ 10 ಲಕ್ಷ ಪಡೆಯುವ ಅದಿತಿ ಪ್ರಭುದೇವ

ಇಂಡಸ್ಟ್ರಿಯಲ್ಲಿ ನಟಿ ಅದಿತಿ ಪ್ರಭುದೇವ ಟ್ರೆಂಡ್ ಜೋರಾಗಿ ನಡೆಯುತ್ತದೆ. ಕಮರ್ಷಿಯಲ್ ಸಿನಿಮಾ ಹಾಗೂ ಪ್ರಯೋಗ ಎರಡನ್ನು ಮಾಡಲು ಸಿದ್ಧವಿರುವ ಅದಿತಿಗೆ ಹೆಚ್ಚು ಅವಕಾಶಗಳು ಸಿಗುತ್ತಿವೆ. ಒಂದು ಸಿನಿಮಾಗೆ ಅದಿತಿ 8 ರಿಂದ 10 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಸದ್ಯ, 'ಬ್ರಹ್ಮಚಾರಿ', 'ತೋತಾಪುರಿ' 'ದಿಲ್ಮಾರ್' ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

ಮಾನ್ವಿತಾ ಕಾಮತ್ ಸಂಭಾವನೆ 6 ಲಕ್ಷ

ಮಾನ್ವಿತಾ ಕಾಮತ್ ಸಂಭಾವನೆ 6 ಲಕ್ಷ

ನಟಿ ಮಾನ್ವಿತಾ ಕಾಮತ್ ಒಂದು ಸಿನಿಮಾಗೆ 6 ಲಕ್ಷ ಸಂಭಾವನೆ ಫಿಕ್ಸ್ ಮಾಡಿದ್ದಾರೆ. ಸಿನಿಮಾಗಳ ಮೇಲೆ ಅದು ನಿರ್ಧಾರ ಆಗುತ್ತದೆ. ಇತ್ತೀಚಿಗಷ್ಟೆ 'ರಿಲ್ಯಾಕ್ಸ್ ಸತ್ಯ' ಚಿತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು. 'ಶಿವ 143', 'ಇಂಡಿಯಾ ವರ್ಸಸ್ ಇಂಗ್ಲೆಂಡ್', 'ರಾಜಸ್ತಾನ್ ಡೈರೀಸ್', 'ರೈನ್ ಬೋ' ಅಂತಹ ಚಿತ್ರಗಳ ಅವಕಾಶ ಹೊಂದಿದ್ದಾರೆ.

More from Filmibeat

English summary
Kannada Movie Actress Remuneration List.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X