»   » ಬರಪೀಡಿತ ಜನರ ದಾಹ ನೀಗಿಸಲು ಯಶ್ ಕೈ ಹಿಡಿದ 'ಅಕಿರ' ತಂಡ

ಬರಪೀಡಿತ ಜನರ ದಾಹ ನೀಗಿಸಲು ಯಶ್ ಕೈ ಹಿಡಿದ 'ಅಕಿರ' ತಂಡ

Posted By:
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಯಶೋಮಾರ್ಗ ಫೌಂಡೇಶನ್ ನಿಂದ ಉತ್ತರ ಕರ್ನಾಟಕದ ಹಲವಾರು ಹಳ್ಳಿಗಳಿಗೆ ಕುಡಿಯುವ ನೀರನ್ನು ಒದಗಿಸುತ್ತಿರುವ ಬಗ್ಗೆ ಸ್ಯಾಂಡಲ್ ವುಡ್ ಕ್ಷೇತ್ರದಲ್ಲಿ ಪ್ರಶಂಸೆಯ ಮಾತುಗಳು ಕೇಳಿ ಬರುತ್ತಿವೆ.

ಇದೀಗ ಯಶ್ ಅವರ ಯಶೋಮಾರ್ಗ ಫೌಂಡೇಶನ್ ಜೊತೆಗೆ ಅನೀಶ್ ತೇಜೇಶ್ವರ್ ನಟನೆಯ 'ಅಕಿರ' ಚಿತ್ರತಂಡ ಕೈ ಜೋಡಿಸುತ್ತಿದೆ.[ದಾಹ ತೀರಿಸಿ ಉತ್ತರ ಕರ್ನಾಟಕ ಜನತೆಯ ಹೃದಯ ಗೆದ್ದ ಯಶ್]


Kannada Movie 'Akira' Producer donates 10 lakhs to Yash's 'Yashomarga'

ಕೆಲವು ದಿನಗಳ ಹಿಂದೆ ಪುನೀತ್ ರಾಜ್ ಕುಮಾರ್ ಅವರ 'ಚಕ್ರವ್ಯೂಹ' ಚಿತ್ರತಂಡ ಕೂಡ ಬರಪೀಡಿತ ಜನರ ಪರಿಹಾರಕ್ಕೆ ಕೈ ಜೋಡಿಸಿತ್ತು. ಇದೀಗ ಆ ಸಾಲಿಗೆ ಹೊಸ ಸೇರ್ಪಡೆ ಮೇ 6 ರಂದು ತೆರೆಕಂಡ 'ಅಕಿರ' ಚಿತ್ರತಂಡ.[ಬರಪೀಡಿತ ಜನರ ದಾಹ ತೀರಿಸಲು ಮುಂದಾದ 'ಚಕ್ರವ್ಯೂಹ' ಚಿತ್ರತಂಡ]


Kannada Movie 'Akira' Producer donates 10 lakhs to Yash's 'Yashomarga'

ಹೌದು ಶುಕ್ರವಾರ, ಮೇ 6 ರಂದು ತೆರೆಕಂಡ ಅನೀಶ್ ತೇಜೇಶ್ವರ ನಟನೆಯ 'ಅಕಿರ' ಚಿತ್ರ ಹೇಳಿಕೊಳ್ಳುವಷ್ಟು ಯಶಸ್ಸು ಕಾಣದಿದ್ದರೂ, ಚಿತ್ರಕ್ಕೆ ಎಲ್ಲೆಡೆ ಅದ್ಭುತ ಓಪನಿಂಗ್ ಸಿಕ್ಕಿತ್ತು, ಆದ್ದರಿಂದ ಬಿಡುಗಡೆಯಾದ ಒಂದು ವಾರದಲ್ಲಿ ಸುಮಾರು 3.25 ಕೋಟಿ ರೂಪಾಯಿಗಳನ್ನು ಸಿನಿಮಾ ಕಲೆಕ್ಷನ್ ಮಾಡಿತ್ತು.['ಅಕಿರ' ವಿಮರ್ಶೆ: ಪ್ರೀತಿ-ಗೀತಿ, ಸೆಂಟಿಮೆಂಟ್ ವಗೈರ ವಗೈರ]


Kannada Movie 'Akira' Producer donates 10 lakhs to Yash's 'Yashomarga'

ಇದೀಗ 'ಅಕಿರ' ಮಾಡಿದ ಕಲೆಕ್ಷನ್ ನಲ್ಲಿ ಸುಮಾರು 10 ಲಕ್ಷ ರೂಪಾಯಿಗಳನ್ನು ನಿರ್ಮಾಪಕ ಚೇತನ್ ಅವರು ಯಶೋಮಾರ್ಗ ಫೌಂಡೇಶನ್ ಗೆ ದೇಣಿಗೆಯಾಗಿ ನೀಡಿದ್ದಾರೆ. ಈ ಮೂಲಕ ಉತ್ತರ ಕರ್ನಾಟಕದ ಬರಪೀಡಿತ ಪ್ರದೇಶದ ಮಂದಿಗೆ ನೀರಿನ ಸಮಸ್ಯೆ ನಿವಾರಿಸಲು ಸಣ್ಣದೊಂದು ಸಹಾಯ ಮಾಡಿದ್ದಾರೆ.


ಅಂತೂ ಅಭಿಮಾನಿಗಳು 'ಅಕಿರ' ಚಿತ್ರಕ್ಕೆ ಕೊಟ್ಟ ಯಶಸ್ಸನ್ನು ಅವರಿಗೆ ಮರಳಿಸಿ ನೀಡುವ ಮೂಲಕ ನೀರಿನ ಸಮಸ್ಯೆಗೆ ಕೈಲಾದಷ್ಟು ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.

English summary
Kannada Actor Anish Tejeshwar starrer Kannada Movie 'Akira' Producer Chethan has donated Rs 10 lakhs to Yash's 'Yashomarga Foundation' which is doing charity by distributing drinking water to thousands of people in North Karnataka's drought hit area.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada