ಸದ್ಯದಲ್ಲೇ 'ಅಲ್ಲಮ'ನಾಗಿ ತೆರೆಗೆ ಬರಲಿದ್ದಾರೆ ಧನಂಜಯ್

By Harshitha

12ನೇ ಶತಮಾನದ ವಚನಕಾರ ಅಲ್ಲಮ ಪ್ರಭು ರವರ ಜೀವನ ಚರಿತ್ರೆ ಆಧಾರಿತ 'ಅಲ್ಲಮ' ಚಿತ್ರ ಸದ್ದಿಲ್ಲದೇ ಶೂಟಿಂಗ್ ಮುಗಿಸಿ, ಸೆನ್ಸಾರ್ ಅಂಗಳದಿಂದ ಪಾಸ್ ಆಗಿದೆ.

ಯಜಮಾನ್ ಎಂಟರ್ ಪ್ರೈಸಸ್ ಲಾಂಛನದಲ್ಲಿ ಶ್ರೀಹರಿ.ಎಲ್.ಖೋಡೆ ಅವರು ನಿರ್ಮಿಸಿರುವ 'ಅಲ್ಲಮ' ಚಿತ್ರವನ್ನು ವೀಕ್ಷಿಸಿದ ಸೆನ್ಸಾರ್ ಮಂಡಳಿ 'U' ಸರ್ಟಿಫಿಕೇಟ್ ನೀಡಿದೆ. ಸದ್ಯದಲ್ಲೇ ರಾಜ್ಯಾದ್ಯಂತ 'ಅಲ್ಲಮ' ಚಿತ್ರ ಬಿಡುಗಡೆ ಆಗಲಿದೆ.['ಅಲ್ಲಮ'ನಿಗಾಗಿ ಮದ್ದಳೆ ಕಲಿಯಲು ಧನಂಜಯ್ ಕಸರತ್ತು]

Kannada Movie 'Allama' gets 'U' Certificate

ಸದಭಿರುಚಿಯ ಚಿತ್ರಗಳ ನಿರ್ದೇಶಕ ಟಿ.ಎಸ್.ನಾಗಾಭರಣ ಅವರು ಆಕ್ಷನ್ ಕಟ್ ಹೇಳಿರುವ 'ಅಲ್ಲಮ' ಚಿತ್ರದಲ್ಲಿ ಶೀರ್ಷಿಕೆ ಪಾತ್ರ ನಿರ್ವಹಿಸಿರುವುದು ನಟ ಧನಂಜಯ್.

'ಅಲ್ಲಮ' ಪಾತ್ರಕ್ಕೋಸ್ಕರ 18 ತಿಂಗಳುಗಳ ಕಾಲ ಮೃದಂಗ ನುಡಿಸುವುದನ್ನು ಕಲಿತಿದ್ದಾರೆ. ಸಂಗೀತ ಮಾಂತ್ರಿಕ ಬಾಪು ಪದ್ಮನಾಭ ಅವರ ಬಳಿ ನಟ ಧನಂಜಯ್ ಮದ್ದಳೆ ಬಾರಿಸುವುದನ್ನೂ ಕರಗತ ಮಾಡಿಕೊಂಡಿದ್ದಾರೆ. ನೃತ್ಯ ಸಂಯೋಜಕರಾದ ಮದನ್-ಹರಿಣಿ ಕೊರಿಯೋಗ್ರಫಿಯಲ್ಲಿ ಧನಂಜಯ್ ಮದ್ದಳೆ ಹಿಡಿದು ಅದ್ಭುತವಾಗಿ ನೃತ್ಯ ಮಾಡಿದ್ದಾರೆ.[ಚಿತ್ರಗಳು: 'ಅಲ್ಲಮ'ನಿಗೆ ಪರಕಾಯ ಪ್ರವೇಶ ಮಾಡಿದ ಧನಂಜಯ್]

Kannada Movie 'Allama' gets 'U' Certificate

ನಾಯಕಿ ಪಾತ್ರದಲ್ಲಿ ನಟಿ ಮೇಘನಾ ರಾಜ್ ಕಾಣಿಸಿಕೊಂಡಿದ್ದಾರೆ. ಸುಮಾರು ನಾಲ್ಕು ವರ್ಷಗಳ ಹಿಂದೆ ಸೆಟ್ಟೇರಿದ್ದ 'ಅಲ್ಲಮ' ಚಿತ್ರ ಕೊನೆಗೂ ಬಿಡುಗಡೆ ಹಂತಕ್ಕೆ ಬಂದಿದೆ. ಥಿಯೇಟರ್ ಸಿಕ್ಕ ಕೂಡಲೆ 'ಅಲ್ಲಮ' ಚಿತ್ರ ತೆರೆಗೆ ಬರಲಿದೆ.

More from Filmibeat

English summary
Kannada Movie 'Allama' gets 'U' Certificate. 'Allama' features Dhananjay, Meghana Raj in the lead role. The movie is directed by T.S.Nagabharana.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X