For Quick Alerts
  ALLOW NOTIFICATIONS  
  For Daily Alerts

  ತೆರೆಗೆ ಬರಲು ಸಿದ್ದವಾಯ್ತು ಅಮ್ಮ ಐ ಲವ್ ಯು

  By Pavithra
  |
  ತೆರೆಗೆ ಬರೋಕೆ ರೆಡಿ ಆಯ್ತು ಅಮ್ಮ ಐ ಲವ್ ಯು ಸಿನಿಮಾ | Filmibeat Kannada

  ಅಮ್ಮ ಐ ಲವ್ ಯು, ಚಿರಂಜೀವಿ ಸರ್ಜಾ ಅಭಿನಯಿಸಿರುವ ಕೆ ಎಂ ಚೈತನ್ಯ ನಿರ್ದೇಶನ ಮಾಡಿರುವ ಸಿನಿಮಾ. ಮದುವೆ ನಂತರ ಚಿರು ಅಭಿನಯದ ಮೊದಲ ಚಿತ್ರ ಇದಾಗಿದ್ದು ಹಾಡುಗಳಿಂದ ಸದ್ದು ಮಾಡುತ್ತಿರುವ ಅಮ್ಮ ಐ ಲವ್ ಯೂ ಚಿತ್ರ ಇದೇ ತಿಂಗಳು ಬಿಡುಗಡೆ ಆಗಲು ಸಜ್ಜಾಗಿದೆ.

  ಚಿತ್ರೀಕರಣ ಕಂಪ್ಲೀಟ್ ಮಾಡಿ ಸೆನ್ಸಾರ್ ಬಾಗಿಲಲ್ಲಿದ್ದ ಅಮ್ಮ ಐ ಲವ್ ಯು ಚಿತ್ರಕ್ಕೆ ಯಾವುದೇ ಕಟ್ಸ್ ಇಲ್ಲದೆ ಯು ಎ ಸರ್ಟಿಫಿಕೇಟ್ ಸಿಕ್ಕಿದೆ. ಸಿನಿಮಾದಲ್ಲಿ ಚಿರಂಜೀವಿ ಸರ್ಜಾ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ದ್ವಾರಕೀಶ್ ಅವರ ಬ್ಯಾನರ್ ನಲ್ಲಿ ಚಿತ್ರ ನಿರ್ಮಾಣ ಆಗಿದೆ.

  ಅಮ್ಮಂದಿರಿಗಾಗಿ ಸಿನಿಮಾ ಅರ್ಪಿಸಿದ ಚಿರಂಜೀವಿ ಸರ್ಜಾ ಅಮ್ಮಂದಿರಿಗಾಗಿ ಸಿನಿಮಾ ಅರ್ಪಿಸಿದ ಚಿರಂಜೀವಿ ಸರ್ಜಾ

  ಅಮ್ಮ ಐ ಲವ್ ಯು ಈ ಚಿತ್ರದ ಮೂಲಕ ದ್ವಾರಕೀಶ್ ಹಾಗೂ ಸಂಗೀತ ನಿರ್ದೇಶಕ ಗುರುಕಿರಣ್ ಜೊತೆಯಾಗಿ ತಮ್ಮದೇ ಆದ ಆಡಿಯೋ ಸಂಸ್ಥೆಯನ್ನು ಆರಂಭಿಸಿದ್ದಾರೆ. ಸೆನ್ಸಾರ್ ಸರ್ಟಿಫಿಕೇಟ್ ಪಡೆದುಕೊಂಡಿರುವ ಅಮ್ಮ ಐ ಲವ್ ಯು ಸಿನಿಮಾ ಇದೇ ತಿಂಗಳು ಅಂದರೆ ಜೂನ್ 15 ರಂದು ರಾಜ್ಯಾದಂತ್ಯ ಬಿಡುಗಡೆ ಆಗಲಿದೆ.

  ಚಿರು ತಾಯಿ ಪಾತ್ರದಲ್ಲಿ ಸಿತಾರ ಅಭಿನಯ ಮಾಡಿದ್ದು ಇದೇ ಮೊದಲ ಬಾರಿಗೆ ಚಿರಂಜೀವಿ ಸರ್ಜಾ ಜೊತೆಯಾಗಿ ನಿಶ್ವಿಕಾ ನಾಯ್ಡು ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕಾಲಿವುಡ್ ನಲ್ಲಿ ಸಖತ್ ಸುದ್ದಿ ಮಾಡಿರುವ ಚಿತ್ರ ಕನ್ನಡದ ಪ್ರೇಕ್ಷಕರಿಗೂ ಇಷ್ಟವಾಗುವಲ್ಲಿ ಅನುಮಾನವಿಲ್ಲ.

  English summary
  Kannada movie Amma I Love You, which has been directed by KM Chaitanya and stars Chiranjeevi Sarja, has received a U/A certificate, with no cuts.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X