twitter
    For Quick Alerts
    ALLOW NOTIFICATIONS  
    For Daily Alerts

    ಭರವಸೆ ಮೂಡಿಸುವ 'ಅಂದವಾದ' ಟ್ರೈಲರ್: ಇದೇ 25ಕ್ಕೆ ಚಿತ್ರ ಬಿಡುಗಡೆ

    |

    ನವಿರಾದ ಪ್ರೇಮಕಥೆ ಹೊಂದಿರುವ 'ಅಂದವಾದ' ಟ್ರೈಲರ್ ಬಿಡುಗಡೆ ಆಗಿದೆ. ಬಹುತೇಕ ಹೊಸಬರೇ ಸಿದ್ಧಪಡಿಸಿರುವ 'ಅಂದವಾದ' ಚಿತ್ರದ ಟ್ರೈಲರ್ ಇದೀಗ ಯೂಟ್ಯೂಬ್ ನಲ್ಲಿ ಹೊಸ ಸಂಚಲನ ಮೂಡಿಸುತ್ತಿದೆ.

    ಗುರುಕಿರಣ್​ ಯೂಟ್ಯೂಬ್​ ಚಾನೆಲ್​ ನಲ್ಲಿ ಬಿಡುಗಡೆಗೊಂಡಿರುವ 'ಅಂದವಾದ' ಚಿತ್ರದ ಟ್ರೈಲರ್ ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. 'ಅಂದವಾದ' ಟ್ರೈಲರ್ ನೋಡಿದ್ರೆ, ಚಿತ್ರದಲ್ಲಿ ಅಂದವಾದ ಪ್ರೇಮ ಕಥೆ ಇರುವುದು ಸ್ಪಷ್ಟವಾಗುತ್ತದೆ.

    ನಾಯಕ-ನಾಯಕಿಯ ಪ್ರೇಮ ಸನ್ನಿವೇಶ, ತಾಕಲಾಟ, ಮೌನ ಸಂಭಾಷಣೆ ನೋಡುಗರನ್ನು ಸೆಳೆದಿಡುತ್ತಿದೆ. ನವಿರಾದ ಬಾಲ್ಯದ ಎಳೆಯೂ ಒಂದು ದೃಶ್ಯದಲ್ಲಿ ಕಾಣುತ್ತದೆ. ಒಟ್ಟಾರೆ ಚಿತ್ರವು ಯುವ ಮನಸ್ಸುಗಳಿಗೆ ಮುದ ನೀಡುತ್ತದೆ ಎಂಬುದನ್ನು ಟ್ರೈಲರ್​ ಬಿಚ್ಚಿಡುತ್ತದೆ.

    Kannada Movie Andavada Trailer Is Out

    Recommended Video

    ಧ್ರುವ ಸರ್ಜಾ ಕಾರು ಅಪಘಾತ | FILMIBEAT KANNADA

    ಚಿತ್ರವನ್ನು ಚಲ ಎಂಬುವವರು ನಿರ್ದೇಶನ ಮಾಡಿದ್ದಾರೆ. ಮಧುಶ್ರೀ ಗೋಲ್ಡನ್​ ಫ್ರೇಮ್ಸ್​ ಸಂಸ್ಥೆಯು ಚಿತ್ರಕ್ಕೆ ಬಂಡವಾಳ ಹೂಡಿದೆ. ವಿಕ್ರಮ್​ ವರ್ಮನ್​ ರಾಗ ಸಂಯೋಜನೆ ಮಾಡಿದ್ದಾರೆ.

    'ಅಂದವಾದ' ಚಿತ್ರದಲ್ಲಿ ಜೈ ನಾಯಕನಾಗಿದ್ದಾರೆ. ನಟಿ ಆಶಿಕಾ ರಂಗನಾಥ್​ ಅವರ ಅಕ್ಕ ಅನುಷಾ ರಂಗನಾಥ್​ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಮುನ್ನ ಅನುಷಾ ರಂಗನಾಥ್ 'ಸೋಡಾಬುಡ್ಡಿ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಕಿರುತೆರೆಯ ಧಾರಾವಾಹಿಯಲ್ಲೂ ಅಭಿನಯಿಸಿದ್ದರು. ಉಳಿದಂತೆ ಚಿತ್ರದಲ್ಲಿ ಶ್ರೀಧರ್​, ಹರೀಶ್​ ರೈ, ಅಮರ್​ ಸಲ್ವಾ ತಾರಾಗಣದಲ್ಲಿದ್ದಾರೆ. 'ಅಂದವಾದ' ಚಿತ್ರವು ಇದೇ 25 ರಂದು ತೆರೆಗೆ ಅಪ್ಪಳಿಸಲಿದೆ.

    English summary
    Kannada Actress Anusha Ranganath Kannada Actor Jai starrer Kannada Movie Andavada trailer is out.
    Wednesday, October 16, 2019, 15:00
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X