»   » ರಮ್ಯಾ-ಶಿವಣ್ಣ ಚಿತ್ರಕ್ಕೆ ಬಂಡವಾಳ ಹಾಕಿದವರು ಈಗ ಹೀರೋ.!

ರಮ್ಯಾ-ಶಿವಣ್ಣ ಚಿತ್ರಕ್ಕೆ ಬಂಡವಾಳ ಹಾಕಿದವರು ಈಗ ಹೀರೋ.!

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಆರ್ಯನ್' ಸಿನಿಮಾ ಗೊತ್ತಲ್ವಾ? ಡಿ.ರಾಜೇಂದ್ರ ಬಾಬು ನಿರ್ದೇಶನದ ಕೊನೆಯ ಚಿತ್ರ 'ಆರ್ಯನ್'ಗೆ ಬಂಡವಾಳ ಹಾಕಿದ್ದ ನಿರ್ಮಾಪಕ ನರ್ಗೀಸ್ ಬಾಬು ಪುತ್ರ ಕಮರ್ ಈಗ ಸ್ಯಾಂಡಲ್ ವುಡ್ ನ ಬ್ರ್ಯಾಂಡ್ ನ್ಯೂ ಹೀರೋ.

ಹಾಗ್ನೋಡಿದ್ರೆ, ಇಷ್ಟೊತ್ತಿಗಾಗಲೇ ಕಮರ್ ಹೀರೋ ಆಗಿ ಕನ್ನಡ ಸಿನಿ ಪ್ರಿಯರಿಗೆ ಪರಿಚಿತರಾಗಿರಬೇಕಿತ್ತು. ಅನಿವಾರ್ಯ ಕಾರಣಗಳಿಂದ ಅವರ ಚಿತ್ರ ಪೋಸ್ಟ್ ಪೋನ್ ಆಗುತ್ತಲೇ ಇತ್ತು.


Kannada Movie 'Aryan' producer Kamar turns hero

ನೋಡೋಕೆ ಸ್ಮಾರ್ಟ್ ಅಂಡ್ ಹ್ಯಾಂಡ್ಸಮ್ ಆಗಿರುವ ಕಮರ್ ಗೆ ಇದೀಗ ಅದೃಷ್ಟ ಒಲಿದು ಬಂದಿದೆ. ತಂದೆ ನರ್ಗೀಸ್ ಬಾಬು ಜೊತೆ 'ಆರ್ಯನ್' ಚಿತ್ರದ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಕಮರ್ ಈಗ ಹೀರೋ ಆಗುವುದು ಕನ್ಫರ್ಮ್ ಅಗಿದೆ. ['ಆರ್ಯನ್' ವಿಮರ್ಶೆ: ಅಭಿಮಾನಿಗಳ ಆಸೆಗೆ ತಣ್ಣೀರು]


ಕಮರ್ ಹೀರೋ ಆಗಿ ನಟಿಸುವ ಚಿತ್ರಕ್ಕೆ ತಂದೆ ನರ್ಗೀಸ್ ಬಾಬು ಬಂಡವಾಳ ಹಾಕಲಿದ್ದಾರೆ. ಎ.ಎಂ.ಕೊಟ್ರೇಶ್ ಅನ್ನುವ ಹೊಸ ಪ್ರತಿಭೆ ನಿರ್ದೇಶನ ಮಾಡಲಿದ್ದಾರೆ. ರವಿ ಶ್ರೀವತ್ಸ ಸಂಭಾಷಣೆ ಬರೆಯಲಿದ್ದಾರೆ. ಜೆಸ್ಸಿ ಗಿಫ್ಟ್ ಸ್ವರ ಸಂಯೋಜನೆ ಮಾಡಲಿದ್ದಾರೆ.


Kannada Movie 'Aryan' producer Kamar turns hero

ಇದೇ ತಿಂಗಳು ಚಿತ್ರದ ಮುಹೂರ್ತ ನೆರವೇರಲಿದ್ದು, ಹೈದರಾಬಾದ್ ಮತ್ತು ಗೋವಾದಲ್ಲಿ ಶೂಟಿಂಗ್ ನಡೆಯಲಿದೆ. ಅಂದ್ಹಾಗೆ, ಚಿತ್ರಕ್ಕಿನ್ನೂ ಟೈಟಲ್ ಫಿಕ್ಸ್ ಆಗಿಲ್ಲ.

English summary
Kannada Actor Shivarajkumar starrer 'Aryan' movie producer Kamar is making his debut as hero in a film directed by A.M.Kotresh, produced by his father Nargis Babu.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada