»   » ತೆರೆಗೆ ಬರಲು ಸಜ್ಜಾಗಿದೆ ಹೊಸಬರ 'ಆಯನ'

ತೆರೆಗೆ ಬರಲು ಸಜ್ಜಾಗಿದೆ ಹೊಸಬರ 'ಆಯನ'

Posted By:
Subscribe to Filmibeat Kannada

'ಅಯನ'.....ಹೊಸ ಯುವಕರ ಚಿತ್ರತಂಡವೊಂದು ತಯಾರಿಸುವ ವಿಭಿನ್ನ ಸಿನಿಮಾ. ಈಗಾಗಲೇ ಚಿತ್ರದ ಟ್ರೈಲರ್ ಮತ್ತು ಹಾಡುಗಳು ಬಿಡುಗಡೆಯಾಗಿದ್ದು, ಹೊಸಬರ ಪ್ರಯತ್ನದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.

ಅಂದ್ಹಾಗೆ, ಇದೊಂದು ಸಾಫ್ಟ್‌ ವೇರ್‌ ಕೆಲಸ ಮಾಡುವ ಯುವಕನೊಬ್ಬನ ವೈಯಕ್ತಿಕ ಹಾಗೂ ವೃತ್ತಿ ಬದುಕಿನ ಕಥೆಯನ್ನೊಳಗೊಂಡ ಸಿನಿಮಾ. ಈ ಚಿತ್ರದಲ್ಲಿ ಸ್ನೇಹಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದ್ದು, ಒಂದು ಕಮರ್ಷಿಯಲ್ ಚಿತ್ರಕ್ಕೆ ಬೇಕಾಗುವ ಎಲ್ಲ ಅಂಶಗಳು ಚಿತ್ರದಲ್ಲಿದೆ.

Kannada Movie Ayana trailer released

'ಅಯನ' ಚಿತ್ರದಲ್ಲಿ ದೀಪಕ್ ಸುಬ್ರಹ್ಮಣ್ಯ ಮತ್ತು ಅಪೂರ್ವಾ ನಾಯಕ ಹಾಗೂ ನಾಯಕಿ ಆಗಿ ಕಾಣಿಸಿಕೊಂಡಿದ್ದಾರೆ. ಗಂಗಾಧರ ಸಾಲಿಮಠ್ ಅವರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಇದಕ್ಕು ಮೊದಲು ಸಾಫ್ಟ್‌ವೇರ್‌ ಕೆಲಸ ಮಾಡುತ್ತಿದ್ದರು. ವರುಣ್ ಅವರ ಛಾಯಾಗ್ರಹಣ ಚಿತ್ರಕ್ಕಿದ್ದು, ಶ್ರೀಯಾಂಕ್ ಶ್ರೀಯಾನ್ ಅವರ ಸಂಗೀತ ನಿರ್ದೇಶನ ಒದಗಿಸಿದ್ದಾರೆ.

ಇನ್ನುಳಿದಂತೆ ರಮೇಶ್ ಭಟ್, ನಾಗಶ್ರೀ, ವೇದಾಶ್ರೀ ರಾವ್, ಹರ್ಷ ಎಚ್.ಎಸ್, ಕಾರ್ತಿಕ, ಗೌತಮ್, ಮೋಕ್ಷಾ ಕುಶಾಲ್ ಸೇರಿದಂತೆ ಹಲವು ಪ್ರತಿಭಾನ್ವಿತ ಕಲಾವಿದರು ಅಭಿನಯಿಸಿದ್ದಾರೆ. ಬೆಂಗಳೂರು, ಗೋವಾ, ಚಿಕ್ಕಮಗಳೂರು ಹಾಗೂ ಮಂಗಳೂರಿನಲ್ಲಿ ಚಿತ್ರೀಕರಣ ನಡೆದಿದ್ದು, ಆದಷ್ಟೂ ಬೇಗ ತೆರೆಗೆ ಬರುವ ಯೋಚನೆಯಲ್ಲಿದೆ.

English summary
Kannada Movie "Ayana" trailer released. the movie Written & Directed by Gangadhar Salimath and also starring Deepak Subramanya, Apoorva Soma in lead.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada