ಬಾಕ್ಸ್ ಆಫೀಸ್ ನಲ್ಲಿ 'ಅಯೋಗ್ಯ'ನ ನಾಗಾಲೋಟ: 10 ಕೋಟಿ ಕ್ಲಬ್ ಸೇರಿದ ಚಿತ್ರ

By Harshitha

Recommended Video

ಅಯೋಗ್ಯ ಸಿನಿಮಾದ ಮತ್ತೊಂದು ದಾಖಲೆ ನೋಡಿ..! | Filmibeat Kannada

ಒಂದೊಳ್ಳೆ ಸಿನಿಮಾ ಬಂದ್ರೆ ಕನ್ನಡ ಪ್ರೇಕ್ಷಕರು ಖಂಡಿತ ಕೈಬಿಡಲ್ಲ ಅನ್ನೋದಕ್ಕೆ ಲೇಟೆಸ್ಟ್ ಸಾಕ್ಷಿ 'ಅಯೋಗ್ಯ'. ಕನ್ನಡ ಸಿನಿ ಪ್ರೇಕ್ಷಕರ ನಾಡಿಮಿಡಿತವನ್ನ ಚೆನ್ನಾಗಿ ಅರಿತಿರುವ ನಿರ್ದೇಶಕ ಮಹೇಶ್, ಪ್ರೇಕ್ಷಕರಿಗೆ ಏನೇನು ಬೇಕೋ.. ಎಲ್ಲವನ್ನೂ 'ಅಯೋಗ್ಯ'ನ ಮೂಲಕ ನೀಡಿದ್ದಾರೆ.

ಲವ್, ಆಕ್ಷನ್, ಕಾಮಿಡಿ... ಎಲ್ಲವೂ ಹದವಾಗಿ ಬೆರೆತಿರುವ 'ಅಯೋಗ್ಯ' ಸಿನಿಮಾ ಪ್ರೇಕ್ಷಕರನ್ನ ರಂಜಿಸುವಲ್ಲಿ ಯಶಸ್ವಿ ಆಗಿದೆ. 'ಅಭಿನಯ ಚತುರ' ನೀನಾಸಂ ಸತೀಶ್ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಅಭಿನಯದ 'ಅಯೋಗ್ಯ' ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹೊಸ ದಾಖಲೆ ಸೃಷ್ಟಿಸುತ್ತಿದೆ.

Kannada Movie Ayogya collects 10 Crore in 9 Days

ಬಿಡುಗಡೆ ಆದ ಒಂಬತ್ತು ದಿನಗಳಲ್ಲಿ 'ಅಯೋಗ್ಯ' ಸಿನಿಮಾ 10 ಕೋಟಿ ಕಲೆಕ್ಷನ್ ಮಾಡಿದೆ. ಬಹುತೇಕ ಚಿತ್ರಮಂದಿರಗಳಲ್ಲಿ 'ಅಯೋಗ್ಯ' ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ನಿರೀಕ್ಷೆಗೂ ಮೀರಿದ ಕಲೆಕ್ಷನ್ ಮಾಡುತ್ತಿದೆ ಈ ಚಿತ್ರ.

ಹಾಗ್ನೋಡಿದ್ರೆ, 'ಅಯೋಗ್ಯ' ಮಹೇಶ್ ನಿರ್ದೇಶನದ ಚೊಚ್ಚಲ ಚಿತ್ರ. ಮೊದಲ ಚಿತ್ರವನ್ನೇ ಹತ್ತು ಕೋಟಿ ಕ್ಲಬ್ ಗೆ ಸೇರಿಸುವಲ್ಲಿ ನಿರ್ದೇಶಕ ಮಹೇಶ್ ಯಶಸ್ವಿ ಆಗಿದ್ದಾರೆ.

ಕನ್ನಡ ಚಿತ್ರಗಳಿಗೆ ಥಿಯೇಟರ್ ಸಮಸ್ಯೆ, ಯು.ಎಫ್.ಓ ಪ್ರಾಬ್ಲಂ, ಮಲ್ಟಿಪ್ಲೆಕ್ಸ್ ಕಿರಿಕಿರಿ ತಪ್ಪಿದ್ದಲ್ಲ. ಇವೆಲ್ಲ ಇದ್ದರೂ, 'ಅಯೋಗ್ಯ' ಸಿನಿಮಾ ಹತ್ತು ಕೋಟಿ ಕ್ಲಬ್ ಸೇರಿದೆ ಅಂದ್ರೆ, ಅದು ದಾಖಲೆಯೇ ಸರಿ.

More from Filmibeat

English summary
Sathish Neenasam and Rachita Ram starrer Kannada Movie Ayogya collects 10 Crore in 9 Days.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X