6 ಕೋಟಿ ದಾಟಿದ 'ಅಯೋಗ್ಯ' ಕಲೆಕ್ಷನ್: ಚಿತ್ರತಂಡ ಫುಲ್ ಖುಷ್.!

By Harshitha

Recommended Video

6 ಕೋಟಿ ಗಡಿ ದಾಟಿದ ಅಯೋಗ್ಯ ಸಿನಿಮಾದ ಕಲೆಕ್ಷನ್ | Filmibeat Kannada

'ಅಭಿನಯ ಚತುರ' ನೀನಾಸಂ ಸತೀಶ್ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಅಭಿನಯದ 'ಅಯೋಗ್ಯ' ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಲೂಟಿ ಹೊಡೆಯುತ್ತಿದೆ.

ಬಿಡುಗಡೆ ಆದ ಐದು ದಿನಗಳಲ್ಲಿ ಅಯೋಗ್ಯ ಸಿನಿಮಾದ ಕಲೆಕ್ಷನ್ ಆರು ಕೋಟಿ ಗಡಿ ದಾಟಿದೆ ಅಂದ್ರೆ ಖಂಡಿತ ಸುಮ್ನೆ ಮಾತಲ್ಲ ಬಿಡಿ. ಯಾಕಂದ್ರೆ, ಈ ವರ್ಷ ತೆರೆಕಂಡ ಎಷ್ಟೋ ಸಿನಿಮಾಗಳು ಮಕಾಡೆ ಮಲಗಿವೆ. ಸ್ಟಾರ್ ಗಳ ಸಿನಿಮಾಗಳೂ ಖಾಲಿ ಹೊಡೆದಿವೆ. 'ಟಗರು' ಬಿಟ್ಟರೆ ಮತ್ತಿನ್ಯಾವ ಚಿತ್ರವೂ ಈ ವರ್ಷ ಶತದಿನೋತ್ಸವ ಕಂಡಿಲ್ಲ.

ವಾರದಿಂದ ವಾರಕ್ಕೆ ಚಿತ್ರಗಳು ಥಿಯೇಟರ್ ಗಳಿಂದ ಥಿಯೇಟರ್ ಗಳಿಗೆ ಎತ್ತಂಗಡಿ ಆಗುತ್ತಿರುವ ಈ ಕಾಲದಲ್ಲಿ 'ಅಯೋಗ್ಯ' ಕೋಟ್ಯಾಂತರ ರೂಪಾಯಿ ಕಲೆಕ್ಷನ್ ಮಾಡ್ತಿದ್ದಾನೆ ಅಂದ್ರೆ ಗ್ರೇಟ್ ಅಲ್ವಾ.?

ಒಂದೊಳ್ಳೆ ಸಿನಿಮಾ ಬಂದರೆ ಪ್ರೇಕ್ಷಕ ಮಹಾಪ್ರಭು ಕೈಬಿಡಲ್ಲ ಅನ್ನೋದಕ್ಕೆ 'ಅಯೋಗ್ಯ' ಚಿತ್ರವೇ ಸಾಕ್ಷಿ. ಯೋಗರಾಜ್ ಭಟ್ ಶಿಷ್ಯ ಮಹೇಶ್ ನಿರ್ದೇಶನದ ಚೊಚ್ಚಲ ಸಿನಿಮಾ 'ಅಯೋಗ್ಯ' ಕಲೆಕ್ಷನ್ ರಿಪೋರ್ಟ್ ಇಲ್ಲಿದೆ, ನೋಡಿರಿ...

'ಅಯೋಗ್ಯ' ಕಲೆಕ್ಷನ್ ಎಷ್ಟು.?

'ಅಯೋಗ್ಯ' ಕಲೆಕ್ಷನ್ ಎಷ್ಟು.?

ನಿನ್ನೆಯವರೆಗೂ (ಆಗಸ್ಟ್ 21) ಅಂದ್ರೆ ಬಿಡುಗಡೆ ಆದ ಐದು ದಿನಗಳಲ್ಲಿ 'ಅಯೋಗ್ಯ' ಸಿನಿಮಾ ಒಟ್ಟಾರೆ 6 ಕೋಟಿ 72 ಲಕ್ಷ ಕಲೆಕ್ಷನ್ ಮಾಡಿದೆ. ಒಟ್ಟು 284 ಥಿಯೇಟರ್ ಹಾಗೂ 66 ಮಲ್ಟಿಪ್ಲೆಕ್ಸ್ ಗಳಲ್ಲಿ ಆಗಿರುವ ಕಲೆಕ್ಷನ್ ಇಷ್ಟು.!

ಬಹುತೇಕ ಶೋಗಳು ಹೌಸ್ ಫುಲ್

ಬಹುತೇಕ ಶೋಗಳು ಹೌಸ್ ಫುಲ್

ಮಂಡ್ಯ, ಮೈಸೂರು, ತುಮಕೂರು ಸೇರಿದಂತೆ ಹಲವು ಕಡೆಗಳಲ್ಲಿ 'ಅಯೋಗ್ಯ' ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಹೇಳಿ ಕೇಳಿ 'ಅಯೋಗ್ಯ' ಅಪ್ಪಟ ಹಳ್ಳಿ ಸೊಗಡಿನ ಚಿತ್ರ. ಹೀಗಾಗಿ, ಮಂಡ್ಯ-ಮೈಸೂರು ಭಾಗದ ಜನತೆ 'ಅಯೋಗ್ಯ'ನನ್ನ ಅಪ್ಪಿಕೊಂಡಿದ್ದಾರೆ.

ಫ್ಯಾಮಿಲಿ ಆಡಿಯನ್ಸ್ ಗೆ ಇಷ್ಟವಾದ 'ಅಯೋಗ್ಯ'

ಫ್ಯಾಮಿಲಿ ಆಡಿಯನ್ಸ್ ಗೆ ಇಷ್ಟವಾದ 'ಅಯೋಗ್ಯ'

ಲವ್, ಆಕ್ಷನ್, ಕಾಮಿಡಿ... ಎಲ್ಲವೂ ಹದವಾಗಿ ಬೆರೆತಿರುವ 'ಅಯೋಗ್ಯ' ಫ್ಯಾಮಿಲಿ ಆಡಿಯನ್ಸ್ ಗೆ ಹೇಳಿ ಮಾಡಿಸಿದ ಸಿನಿಮಾ. ಅದ್ರಲ್ಲೂ ಚಿತ್ರದ ಹಾಡುಗಳು ಹೆಂಗಳೆಯರಿಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ. ಹೀಗಾಗಿ, ಕುಟುಂಬದ ಸಮೇತ ಪ್ರೇಕ್ಷಕ ಮಹಾಪ್ರಭುಗಳು ಥಿಯೇಟರ್ ನತ್ತ ಮುಗಿಬೀಳುತ್ತಿದ್ದಾರೆ.

'ಗೀತ ಗೋವಿಂದಂ'ಗೆ ಸೆಡ್ಡು.!

'ಗೀತ ಗೋವಿಂದಂ'ಗೆ ಸೆಡ್ಡು.!

ಕರ್ನಾಟಕದಲ್ಲಿ ತೆಲುಗಿನ 'ಗೀತ ಗೋವಿಂದಂ' ಚಿತ್ರಕ್ಕೆ 'ಅಯೋಗ್ಯ' ಸೆಡ್ಡು ಹೊಡೆದಿದ್ದಾನೆ. 'ಗೀತ ಗೋವಿಂದಂ' ಬದಲು 'ಅಯೋಗ್ಯ'ನ ದರ್ಶನಕ್ಕಾಗಿ ಪ್ರೇಕ್ಷಕರು ಬರ್ತಿದ್ದಾರೆ. ಇಂದು ಬಕ್ರೀದ್ ರಜೆ ಇರುವ ಕಾರಣ, 'ಅಯೋಗ್ಯ'ನ ಕಲೆಕ್ಷನ್ ಹೆಚ್ಚಾಗುವ ಸಾಧ್ಯತೆ ಇದೆ.

More from Filmibeat

English summary
Sathish Neenasam and Rachita Ram starrer Kannada Movie Ayogya collects 6.72 Crore in 5 Days.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X