»   » ಸ್ಯಾಂಡಲ್ ವುಡ್ ನ 'ಬಾದ್ ಷಾ' ಶಿವಣ್ಣ ಅವರಿಗೆ ಬಹುಪರಾಕ್

ಸ್ಯಾಂಡಲ್ ವುಡ್ ನ 'ಬಾದ್ ಷಾ' ಶಿವಣ್ಣ ಅವರಿಗೆ ಬಹುಪರಾಕ್

Posted By:
Subscribe to Filmibeat Kannada

ನಿರ್ದೇಶಕ ಆರ್.ಚಂದ್ರು ಅವರು 'ಲಕ್ಷ್ಮಣ' ಚಿತ್ರವನ್ನು ಬಹುತೇಕ ಪೂರ್ತಿಗೊಳಿಸಿದ್ದು, ಇದೀಗ ಶಿವಣ್ಣ ಅವರ ಜೊತೆ 'ಬಾದ್ ಷಾ' ಚಿತ್ರಕ್ಕೆ ಕೈ ಜೋಡಿಸಲು ತಯಾರಿ ನಡೆಸುತ್ತಿದ್ದಾರೆ.

ಅಂದಹಾಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಈ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾ ಸುಮಾರು ಎರಡು ವರ್ಷಗಳ ಹಿಂದೆ ಅನೌನ್ಸ್ ಆಗಿತ್ತು. ಆದರೆ ಕಾರಣಾಂತರಗಳಿಂದ ಈ ಸಿನಿಮಾ ಸೆಟ್ಟೇರಿರಲಿಲ್ಲ.

Kannada Movie 'Badshah' song recording from Monday

ಇದೀಗ ಎಲ್ಲದಕ್ಕೂ ಕಾಲ ಕೂಡಿಬಂದಿದ್ದು ಚಿತ್ರದ ಕಡೆ ನಿರ್ದೇಶಕ ಆರ್ ಚಂದ್ರು ಅವರು ಗಮನ ಹರಿಸಿದ್ದಾರೆ. ಆದ್ದರಿಂದ ಸದ್ಯದಲ್ಲೇ 'ಚಾರ್ ಮಿನಾರ್' ನಿರ್ದೇಶಕ ಆರ್ ಚಂದ್ರು ಮತ್ತು ಶಿವಣ್ಣ ಅವರ ಜುಗಲ್ ಬಂದಿಯಲ್ಲಿ 'ಬಾದ್ ‍ಷಾ' ಮೂಡಿಬರಲಿದ್ದು, ಚಿತ್ರ ಆದಷ್ಟು ಬೇಗನೆ ಸೆಟ್ಟೇರಲಿದೆ.

ಸಿನಿಮಾ ಲಾಂಚ್ ಮಾಡುವುದಕ್ಕೂ ಮುನ್ನ ಚಿತ್ರದ ಹಾಡಿನ ರೆಕಾರ್ಡಿಂಗ್ ಮುಗಿಸಲು ನಿರ್ದೇಶಕ ಆರ್ ಚಂದ್ರು ಅವರು ನಿರ್ಧರಿಸಿದ್ದು, ಡಿಸೆಂಬರ್ 14 ಸೋಮವಾರದಂದು ಈ ಸಿನಿಮಾದ ಹಾಡಿನ ರೆಕಾರ್ಡಿಂಗ್ ಬೆಂಗಳೂರಿನ ಗುರುಕಿರಣ್ ಸ್ಟುಡಿಯೋದಲ್ಲಿ ನಡೆಯಲಿದೆ.

Kannada Movie 'Badshah' song recording from Monday

ಅಂತೂ ಇಂತೂ 'ಬಾದ್ ಷಾ' ಸೆಟ್ಟೇರುವ ಎಲ್ಲಾ ಸೂಚನೆಗಳು ಕಂಡುಬಂದಿದ್ದು, ಸದ್ಯದಲ್ಲೇ ಹ್ಯಾಟ್ರಿಕ್ ಹೀರೋ ಶಿವಣ್ಣ ಅವರು ಸ್ಯಾಂಡಲ್ ವುಡ್ ನ 'ಬಾದ್ ಷಾ' ಆಗಿ ಹೊರಹೊಮ್ಮಲಿದ್ದಾರೆ.

English summary
R Chandru is almost thorough with his latest film 'Lakshmana'. Meanwhile he is all set to launch his new film 'Badshah' starring Shiva Rajakumar soon. Now R Chandru is planning to launch the film soon and before that the song recording of the film will start from Monday at the Gurukiran studio in Bangalore.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada