»   » ಹತ್ತು ದಿನಗಳಲ್ಲಿ ರು.9 ಕೋಟಿ ಬಾಚಿದ ಬಹದ್ದೂರ್

ಹತ್ತು ದಿನಗಳಲ್ಲಿ ರು.9 ಕೋಟಿ ಬಾಚಿದ ಬಹದ್ದೂರ್

Posted By:
Subscribe to Filmibeat Kannada

ಕನ್ನಡ ಚಿತ್ರಗಳೂ ಬಾಕ್ಸ್ ಆಫೀಸಲ್ಲಿ ಕೋಟಿ ಕೋಟಿ ಲೂಟಿ ಮಾಡಿ ಹೊಸ ದಾಖಲೆಗಳಿಗೆ ಕಾರಣವಾಗುತ್ತಿವೆ. ಧ್ರುವ ಸರ್ಜಾ ಹಾಗೂ ರಾಧಿಕಾ ಪಂಡಿತ್ ಜೋಡಿಯ ಮತ್ತೊಂದು ಅದ್ದೂರಿ ಚಿತ್ರ 'ಬಹದ್ದೂರ್' ಗಲ್ಲಾಪೆಟ್ಟಿಗೆಯಲ್ಲಿ ಗಲಗಲ ಸದ್ದು ಮಾಡುತ್ತಿದೆ.

ಚಿತ್ರ ಬಿಡುಗಡೆಯಾದ ಹತ್ತೇ ದಿನಕ್ಕೆ ನಿವ್ವಳ ಒಂಬತ್ತು ಕೋಟಿ ಕಲೆಕ್ಷನ್ ಮಾಡಿದೆ. ಎರಡನೇ ವಾರಕ್ಕೆ ಚಿತ್ರ ಅನಾಯಾಸವಾಗಿ ರು.10 ಕೋಟಿ ಕ್ಲಬ್ ಸೇರುವ ಎಲ್ಲಾ ಸೂಚನೆಗಳನ್ನೂ ಕೊಟ್ಟಿದೆ. ಈ ಚಿತ್ರಕ್ಕೆ ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. [ಬಹದ್ದೂರ್ ಚಿತ್ರ ವಿಮರ್ಶೆ]

A still from movie Bahaddur

ಸಾಮಾನ್ಯವಾಗಿ ಮಾಸ್ ಚಿತ್ರ ಎಂದರೆ ಸಿಂಗಲ್ ಸ್ಕ್ರೀನ್ ತೆರೆಗಳ ಮೇಲೆ ಭರ್ಜರಿ ಸೌಂಡ್ ಮಾಡುತ್ತವೆ. ಆದರೆ 'ಬಹದ್ದೂರ್' ಚಿತ್ರ ಮಾತ್ರ ಮಲ್ಟಿಫ್ಲೆಕ್ಸ್ ಗಳಲ್ಲಿ ಸದ್ದು ಮಾಡುತ್ತಿರುವುದು ವಿಶೇಷ. ಅತ್ಯುತ್ತಮ ಸೌಂಡ್ ಕ್ವಾಲಿಟಿ ಚಿತ್ರದ ಪ್ರಮುಖ ಆಕರ್ಷಣೆಗಳಲ್ಲಿ ಒಂದು ಎನ್ನಬಹುದು.

ಅತ್ಯುತ್ತಮ 7.1 ಸೌಂಡ್ ಡಿಸೈನ್ ಟೆಕ್ನಾಲಜಿಯನ್ನ ಕನ್ನಡದಲ್ಲೇ ಮೊದಲ ಬಾರಿಗೆ ಬಳಸಿಕೊಳ್ಳಲಾಗಿದೆ. ಬಾಲಿವುಡ್ ನಲ್ಲಿ ಬಳಸಿಕೊಂಡಿರೋ ಈ ಮುಂದುವರಿದ ತಂತ್ರಜ್ಞಾನದಿಂದ ಚಿತ್ರದ ಸೌಂಡ್ ಕ್ವಾಲಿಟಿ ಪ್ರೇಕ್ಷಕರನ್ನ ಥ್ರಿಲ್ಲಾಗಿಸುತ್ತಿದೆ. ಇದರ ಜೊತೆಗೆ ಭರ್ಜರಿ ಫೈಟ್ ಗಳು, ಹಾಡುಗಳು, ಮಾಸ್ ಪ್ರೇಕ್ಷಕರ ಶಿಳ್ಳೆ ಗಿಟ್ಟಿಸುವ ಡೈಲಾಗ್ ಗಳು ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿವೆ.

ಅದ್ದೂರಿಯದು ಅಚ್ಚು ರಚ್ಚು ಕಥೆಯಾದ್ರೆ ಇದು ಅಶೋಕ್ ಅಂಜಲಿ ಕಥೆ. ಇಲ್ಲಿ ಅಶೋಕ್ ಪಾತ್ರದಲ್ಲಿ ಧ್ರು ಸರ್ಜಾ ರಾಜನಂತೆ ಕಂಗೊಳಿಸಿದ್ರೆ ರಾಧಿಕಾ ಪಂಡಿತ್ ರಾಣಿಯ ಗೆಟಪ್ ಗಳಲ್ಲಿ ಮಿಂಚ್ತಾರೆ. ಅದ್ದೂರಿ ಚಿತ್ರಕ್ಕಿಂತ ಕಂಪ್ಲೀಟ್ ಡಿಫ್ರೆಂಟ್ ಕಥೆ ಹೊಂದಿರೋ ಬಹದ್ದೂರ್ ಮೈಸೂರಿನಲ್ಲಿ ನಡೆದ ಒಂದು ನೈಜಘಟನೆ.

English summary
Dhruva Sarja and Radhika Pandit lead Bahaddur movie has made a big impact on the box office. In the first 10 days of its release the film has managed a gross collection of Rs 9 crore. The film has connected well with the young crowd.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada