»   » ರಾಜ್ಯದಾದ್ಯಂತ ಮುಂದುವರಿದ 'ಬಹದ್ದೂರ್' ಅಬ್ಬರ

ರಾಜ್ಯದಾದ್ಯಂತ ಮುಂದುವರಿದ 'ಬಹದ್ದೂರ್' ಅಬ್ಬರ

Posted By:
Subscribe to Filmibeat Kannada

ಧ್ರುವ ಸರ್ಜಾ ಹಾಗೂ ರಾಧಿಕಾ ಪಂಡಿತ್ ಜೋಡಿಯ ಅದ್ದೂರಿ ಚಿತ್ರ 'ಬಹದ್ದೂರ್' ಅಬ್ಬರ ರಾಜ್ಯದಾದ್ಯಂತ ಮುಂದುವರಿದೆ. ನೂರಕ್ಕೂ ಹೆಚ್ಚು ಚಿತ್ರಮಂದಿರಗಲಲ್ಲಿ ಅರ್ಧ ಶತಕ ಪೂರೈಸಿ ಶತಕದೆಡೆಗೆ ದಾಪುಗಾಲು ಹಾಕುತ್ತಿದೆ.

ಬಹದ್ದೂರ್ ಚಿತ್ರ ಯಶಸ್ವಿ 50 ದಿನಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಚಿತ್ರದ ನಾಯಕ ಧ್ರುವ ಸರ್ಜಾ ಹಾಗೂ ನಾಯಕಿ ರಾಧಿಕಾ ಪಂಡಿತ್ ಹಲವು ಚಿತ್ರಮಂದಿರಗಳಿಗೆ ಭೇಟಿ ನೀಡಿ ಕೇಕ್ ಕತ್ತರಿಸಿ ಸಂಭ್ರಮಿಸಲಿದ್ದಾರೆ. [ಬಹದ್ದೂರ್ ಚಿತ್ರ ವಿಮರ್ಶೆ]

Bahaddur movie still

ನವೆಂಬರ್ 23ರ ಭಾನುವಾರ ಮಧ್ಯಾಹ್ನ 1.30ಕ್ಕೆ ಬೆಂಗಳೂರಿನ ನರ್ತಕಿ ಚಿತ್ರಮಂದಿರ ಹಾಗೂ ಸಂಜೆ 4.30ಕ್ಕೆ ವೀರೇಶ್ ಚಿತ್ರಮಂದಿರಕ್ಕೆ ಧ್ರುವ ಹಾಗೂ ರಾಧಿಕಾ ಆಗಮಿಸಿ ಕೇಕ್ ಕತ್ತರಿಸಿ ಅಭಿಮಾನಿಗಳ ಜೊತೆ ಸಂಭ್ರಮವನ್ನು ಹಂಚಿಕೊಳ್ಳಲಿದ್ದಾರೆ.

ಮತ್ತೊಂದು ಸ್ವಮೇಕ್ ಚಿತ್ರದ ಮೂಲಕ ಧ್ರುವ ಸರ್ಜಾ ಗೆದ್ದಿದ್ದಾರೆ. ಪರಭಾಷೆಯ ಯಾವುದೇ ಚಿತ್ರಗಳಿಗೆ ಕಮ್ಮಿ ಇಲ್ಲದಂತೆ 'ಬಹದ್ದೂರ್' ಚಿತ್ರವನ್ನು ತೆರೆಗೆ ತಂದಿರುವ ನಿರ್ಮಾಪಕ ಆರ್ ಶ್ರೀನಿವಾಸ್ ಅವರಿಗೆ ಕಂಪ್ಲೀಟ್ ಪೈಸಾ ವಸೂಲಿ ಚಿತ್ರ ಕೊಟ್ಟ ಖುಷಿ ಇದೆ.

ಅತ್ಯುತ್ತಮ ಸೌಂಡ್ ಡಿಸೈನ್ ಟೆಕ್ನಾಲಜಿಯನ್ನ ಕನ್ನಡದಲ್ಲೇ ಮೊದಲ ಬಾರಿಗೆ ಬಳಸಿಕೊಂಡಿದೆ 'ಬಹದ್ದೂರ್' ಚಿತ್ರತಂಡ. ಬಾಲಿವುಡ್ ನಲ್ಲಿ ಬಳಸಿಕೊಂಡಿರೋ ಈ ಮುಂದುವರಿದ ತಂತ್ರಜ್ಞಾನದಿಂದ ಚಿತ್ರದ ಸೌಂಡ್ ಕ್ವಾಲಿಟಿ ಪ್ರೇಕ್ಷಕರನ್ನ ಥ್ರಿಲ್ಲಾಗಿಸಿದೆ. ಭೂಮಿಯಾಗ ಬೆಳೆ ಐತೆ, ಬಂದೂಕ್ ನಾಗ ಬುಲೆಟ್ ಐತೆ, ನನ್ ಮೈಯಾಗ ಪೊಗರೈತೇ ಎಂಬ ಡೈಲಾಗ್ ಗಳು ಪ್ರೇಕ್ಷಕರನ್ನು ರಂಜಿಸುತ್ತಿವೆ. (ಫಿಲ್ಮಿಬೀಟ್ ಕನ್ನಡ)

English summary
Dhruva Sarja and Radhika Pandit pair Kannada movie Bahaddur completes 50 days in more than 100 theatres. Meanwhile the movie team is celebrating the success bash at Nartaki and Menaka theatres in Bangalore.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada