'ಬಕಾಸುರ' ಚಿತ್ರ ಪ್ರಚಾರಕ್ಕೆ ಹಿಂಗೂ ಪ್ಲಾನ್ ಮಾಡಿದ್ರಾ.?

By Pavithra

'ಬಕಾಸುರ'.... 'ಕರ್ವ' ಸಿನಿಮಾದ ನಂತ್ರ ಅದೇ ಚಿತ್ರತಂಡ ಒಟ್ಟಿಗೆ ಸೇರಿ ಮಾಡುತ್ತಿರುವ ಮತ್ತೊಂದು ಸಿನಿಮಾ. ಆರ್.ಜೆ.ರೋಹಿತ್ ಹಾಗೂ ಕ್ರೇಜಿ ಸ್ಟಾರ್ ರವಿಚಂದ್ರನ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಚಿತ್ರ.

ಚಿತ್ರೀಕರಣ ಮುಗಿಸಿರುವ ನಿರ್ದೇಶಕ ನವನೀತ್, 'ಬಕಾಸುರ' ಸಿನಿಮಾದ ಪ್ರಚಾರಕ್ಕಾಗಿ ಮಾಡಿರುವ ಸಾಹಸ ನೋಡಿದ್ರೆ ಆಶ್ಚರ್ಯ ಪಡ್ತೀರಾ.! ಅರೆ... ಸಿನಿಮಾದ ಪ್ರಮೋಷನ್ ಗಾಗಿ ಈ ರೀತಿಯೂ ಯೋಚನೆ ಮಾಡ್ತಾರಾ ಅಂತ..!

ಕೂಪನ್ ಪಡೆದರೆ ಕಾಲೇಜ್ ಫೀಸ್ ಫ್ರೀ

ಕೂಪನ್ ಪಡೆದರೆ ಕಾಲೇಜ್ ಫೀಸ್ ಫ್ರೀ

'ಬಕಾಸುರ' ಸಿನಿಮಾದ ಪ್ರಚಾರ ಕೆಲಸಗಳನ್ನ ಪ್ರಾರಂಭ ಮಾಡಲಾಗಿದೆ. ಸಿನಿಮಾತಂಡ ಹಾಗೂ ನಟ ಆರ್ ಜೆ ರೋಹಿತ್ ರಾಜ್ಯ ಕೆಲವು ಕಾಲೇಜುಗಳಿಗೆ ಭೇಟಿ ನೀಡುತ್ತಿದ್ದಾರೆ. ಕಾಲೇಜಿನ ಮಕ್ಕಳಿಗೆ ಚಿತ್ರದ ಕೂಪನ್ ಕೊಟ್ಟು 'ಬಕಾಸುರ' ಸಿನಿಮಾದ ಸ್ಪರ್ಧೆಯನ್ನ ನಡೆಸಲಾಗ್ತಿದೆ.

ಹೇಗಿದೆ ಹೊಸ ಸ್ಪರ್ಧೆ.?

ಹೇಗಿದೆ ಹೊಸ ಸ್ಪರ್ಧೆ.?

'ಬಕಾಸುರ' ಚಿತ್ರದ ಕೂಪನ್ ಪಡೆದ ಮಕ್ಕಳಿಗೆ ಡಿಫ್ರೆಂಟ್ ಆಗಿರುವ ಸ್ಪರ್ಧೆಯನ್ನ ನಡೆಸಲಾಗುತ್ತೆ. ಇದರಲ್ಲಿ ಗೆಲುವು ಪಡೆದವರ ಕಾಲೇಜಿನ ಶುಲ್ಕವನ್ನ ಚಿತ್ರತಂಡ ಕಟ್ಟಲು ನಿರ್ಧರಿಸಿದೆ. ಪ್ರತಿ ಕಾಲೇಜಿನಿಂದ ಒಂದು ವಿದ್ಯಾರ್ಥಿಯನ್ನ ಆಯ್ಕೆ ಮಾಡುತ್ತಿದೆ 'ಬಕಾಸುರ' ಚಿತ್ರತಂಡ.

ಪ್ರಚಾರದ ಜೊತೆ ಚಿತ್ರದ ಪ್ರಚಾರ

ಪ್ರಚಾರದ ಜೊತೆ ಚಿತ್ರದ ಪ್ರಚಾರ

ಒಬ್ಬ ವಿದ್ಯಾರ್ಥಿಯ ಇಪ್ಪತ್ತು ಸಾವಿರ ಶುಲ್ಕವನ್ನ ಸಿನಿಮಾತಂಡ ಪಾವತಿಸಲು ನಿರ್ಧಾರ ಮಾಡಿದ್ದು ಈ ರೀತಿಯಲ್ಲಿ ವಿಭಿನ್ನವಾದ ಪ್ರಚಾರ ಮಾಡಿ ಸಿನಿಮಾದತ್ತ ಪ್ರೇಕ್ಷಕರನ್ನ ಸೆಳೆಯೋದು ನಟ ಆರ್ ಜೆ ರೋಹಿತ್ ಆಲೋಚನೆ.

ಸಿನಿಮಾ ಯಾವಾಗ ತೆರೆಗೆ

ಸಿನಿಮಾ ಯಾವಾಗ ತೆರೆಗೆ

ಸದ್ಯ ರಾಜ್ಯದ ಮೂಲೆ ಮೂಲೆಯಲ್ಲಿ ವಿದ್ಯಾರ್ಥಿಗಳನ್ನ ಆಯ್ಕೆ ಮಾಡಿರುವ ತಂಡ ಡಿಸೆಂಬರ್ ಮೊದಲ ವಾರದಲ್ಲಿ ಬೆಂಗಳೂರಿನ ಕಾಲೇಜುಗಳಲ್ಲಿ ಸ್ಪರ್ಧೆ ನಡೆಸಲಿದೆ. ಇದರ ಜೊತೆಗೆ ಕೂಪನ್ ಪಡೆದ ವಿದ್ಯಾರ್ಥಿಗಳು ಉಚಿತವಾಗಿ 'ಬಕಾಸುರ' ಸಿನಿಮಾ ವೀಕ್ಷಿಸಬಹುದು. ಕಾಲೇಜುಗಳಿಂದ ಉತ್ತಮ ರೀತಿ ರೆಸ್ಪಾನ್ಸ್ ಸಿಕ್ಕಿದ್ದು ಸಿನಿಮಾ ತಂಡ ಡಿಸೆಂಬರ್ ಅಂತ್ಯಕ್ಕೆ 'ಬಕಾಸುರ' ಚಿತ್ರವನ್ನ ತೆರೆಗೆ ತರಲು ನಿರ್ಧಾರ ಮಾಡಿದೆ.

More from Filmibeat

English summary
'Bakasura', Kannada movie team plans different strategy for Promotion. ಸಿನಿಮಾ ಪ್ರಚಾರಕ್ಕಾಗಿ ವಿಭಿನ್ನ ಪ್ರಯತ್ನ ಮಾಡಿದ ಬಕಾಸುರ ಸಿನಿಮಾತಂಡ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X