For Quick Alerts
  ALLOW NOTIFICATIONS  
  For Daily Alerts

  ಲಹರಿ ಪಾಲಾದ ಬನಾರಸ್ ಮೂಲಕ ದಾಖಲೆ ಮಾಡಿದ ಝಯೀದ್ ಖಾನ್!

  |

  ಕನ್ನಡದ ಹೊಸ ಲವ್‌ ಸ್ಟೋರಿ ಬನಾರಸ್ ಸದ್ದು ಮಾಡುತ್ತಿದೆ. ಬನಾರಸ್ ಟೈಟಲ್‌ನಿಂದ ಹಿಡಿದು ಪ್ರತೀ ವಿಚಾರದಲ್ಲೂ ಹೊಸತನದೊಂದಿಗೆ ಗಮನ ಸೆಳೆದಿದೆ. ಈ ಚಿತ್ರದ ಮೂಲಕ ಶಾಸಕ ಜಮೀರ್‌ ಅಹಮದ್‌ ಖಾನ್ ಪುತ್ರ ಝಯೀದ್ ಖಾನ್ ನಾಯಕ ನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಝಯೀದ್ ಖಾನ್ಗೆ ನಟಿ ಸೋನಲ್ ಜೊತೆಗೆಯಾಗಿದ್ದಾರೆ. ಈಗ ಬನಾರಸ್‌ ಆಡಿಯೋ ಮೂಲಕ ಹೊಸ ದಾಖಲೆ ಬರೆದಿದೆ.

  ಲಹರಿ -ಟಿ ಸೀರೀಸ್ ತೆಕ್ಕೆಗೆ 'ಬನಾರಸ್' ಆಡಿಯೋ ಹಕ್ಕು!

  ' ಬನಾರಸ್ ' ಚಿತ್ರದ ಆಡಿಯೋ ಮತ್ತು ವಿಡಿಯೋ ಹಕ್ಕುಗಳು ಕನ್ನಡದ ಪ್ರತಿಷ್ಠಿತ ಆಡಿಯೋ ಸಂಸ್ಥೆ ಲಹರಿ ಪಾಲಾಗಿವೆ. ಈ ಚಿತ್ರವು ಕನ್ನಡ, ತೆಲುಗು, ತಮಿಳು ಸೇರಿದಂತೆ ಐದು ಭಾಷೆಗಳಲ್ಲಿ‌ ತೆರೆಗೆ ಬರುತ್ತಿದೆ. ಆ ಎಲ್ಲಾ ಭಾಷೆಯ ಆಡಿಯೋ‌ ಮತ್ತು ವಿಡಿಯೋ ಹಕ್ಕುಗಳನ್ನು ಲಹರಿ‌ ಸಂಸ್ಥೆ ಮತ್ತು ಟಿ ಸೀರೀಸ್ ಜಂಟಿಯಾಗಿ ಖರೀದಿ ಮಾಡಿದೆ. ಸದ್ಯಕ್ಕೆ ನಿಖರವಾದ ಮೊತ್ತ ಎಷ್ಟು ಎಂಬುದನ್ನು ಚಿತ್ರತಂಡ ರಿವೀಲ್ ಮಾಡಿಲ್ಲ. ಆದರೆ, ಚೊಚ್ಚಲ ನಾಯಕ‌ ನಟರೊಬ್ಬರ ಸಿನಿಮಾಗಳ ಆಡಿಯೋ-ವೀಡಿಯೊ ಹಕ್ಕು ಇತಿಹಾಸದಲ್ಲಿಯೇ ಅತ್ಯಧಿಕ ಮೊತ್ತಕ್ಕೆ ಮಾರಾಟವಾಗಿದೆ ಎನ್ನಲಾಗುತ್ತಿದೆ.

  ಬನಾರಸ್ ಚಿತ್ರಕ್ಕೆ, ಒಲವೇ ಮಂದಾರ ಹಾಗೂ ಬೆಲ್ ಬಾಟಮ್ ಚಿತ್ರ ಖ್ಯಾತಿಯ ನಿರ್ದೇಶಕ ಜಯತೀರ್ಥ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಪುತ್ರ ಝಯೀದ್ ಖಾನ್ ಈ‌ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಡುತ್ತಿದ್ದಾರೆ. ಅಚ್ಚರಿ ಅಂದರೆ ಝಯೀದ್ ಚೊಚ್ಚಲ ಚಿತ್ರ ಹೊಸ ದಾಖಲೆ ಬರೆದಿದೆ. ದುಬಾರಿ ಮೊತ್ತಕ್ಕೆ ಆಡಿಯೋ ರೈಟ್ಸ್‌ ಮಾರಾಟ ಆಗಿದೆ. ಈ ಮೂಲಕ ಝಯೀದ್ ಖಾನ್ ಸಿನಿಮಾ ರಿಲೀಸ್‌ಗೂ ಮುನ್ನವೆ ಬೇಡಿಕೆಯ ನಟನಾಗಿದ್ದಾರೆ. ಇನ್ನೂ ಈ ಚಿತ್ರಕ್ಕೆ ನಿರ್ದೇಶಕ ಜಯತೀರ್ಥ ನಿರ್ದೇಶನ ದೊಡ್ಡ ಶಕ್ತಿ. ಈಗಾಲೇ ಯಶಸ್ವಿ ನಿರ್ದೇಶಕ ಎನಿಸಿಕೊಂಡಿರುವ ಜಯತೀರ್ಥ ಬನರಾಸ್‌ ಚಿತ್ರದ ದಾಖಲೆ ಕಾರಣ ಅಂತ ಹೇಳ ಬಹುದು.

  ಲಹರಿ ಬರೀ ದೊಡ್ಡವರ ಸಿನಿಮಾಗಳಿಗಷ್ಟೇ ಸೀಮಿತವಾಗಿಲ್ಲ, ಸ್ಟಾರ್ ನಟರುಗಳಿಗಷ್ಟೇ ಮಣೆ ಹಾಕಲ್ಲ‌. ಕಲಾವಿದರು ಯಾರೇ ಇರಲಿ, ಸಿನಿಮಾ ಯಾವುದೇ ಇರಲಿ. ಸಂಗೀತದಲ್ಲಿ ಹೊಸತನವಿದೆ, ಸಾಹಿತ್ಯ ಕೇಳುಗರನ್ನು‌ ಆಕರ್ಷಿಸುತ್ತದೆ ಅಂದರೆ ಸ್ಟಾರ್ ಡಮ್ ನೋಡುವುದಿಲ್ಲ. ಬದಲಾಗಿ ಕಲೆಗೆ ಬೆಲೆಕೊಡ್ತಾರೆ, ದಾಖಲೆ‌ ಬೆಲೆ ಕೊಟ್ಟು ಪ್ರೋತ್ಸಾಹಿಸುತ್ತಾರೆ. ಇದಕ್ಕೆ ಹಲವಾರು ನಿದರ್ಶನಗಳಿವೆ. ಸದ್ಯ, ಬನಾರಸ್ ಚಿತ್ರ ತಾಜಾ ಉದಾಹರಣೆ ಎಂದೇ ಹೇಳ ಬಹುದು.

  ಬನಾರಸ್ ಪ್ಯಾನ್ ಇಂಡಿಯಾ ಸಿನಿಮಾ!

  ಬನಾರಸ್ ಚಿತ್ರದಲ್ಲಿ ಒಂದು ಪರಿಶುದ್ಧ ಪ್ರೇಮ ಕಥೆಯನ್ನು ಕಟ್ಟಿಕೊಡಲು ನಿರ್ದೇಶಕ ಜಯತೀರ್ಥ ಮುಂದಾಗಿದ್ದಾರೆ. ಈ ಸಿನಿಮಾದ ಕಥೆ ಬೆಂಗಳೂರಿನಲ್ಲಿ ಆರಂಭವಾದರೆ ಅದು ಪೂರ್ಣವಾಗುವುದು ಕಾಶಿಯಲ್ಲಿ. ಚಿತ್ರದ ಬಗ್ಗೆ ಕುತೂಹಲ ಮೂಡಿಸಲು ಇದೂ ಒಂದು ಕಾರಣ ಎನ್ನಬಹುದು. ವಿಶೇಷ ಅಂದರೆ ಪ್ರೇಮ ಕಥೆಯ ಜೊತೆಗೆ ಬನಾರಸ್‌ನಲ್ಲಿ ಸೈಂಟಿಫಿಕ್ ವಿಕ್ಷನ್ ರೀತಿಯ ಅಂಶಗಳು ಕೂಡ ಕಥೆಗೆ ಹೊಂದಿಕೊಂಡಿವೆ. ಜಯತೀರ್ಥ ಅವರ ಈ ಹಿಂದಿನ ಚಿತ್ರಕ್ಕೆ ಸಂಗೀತ ನೀಡಿದ್ದ ಅಜನೀಶ್‌ ಲೋಕನಾಥ್ ಬನಾಸರ್‌ ಹಾಡುಗಳಿಗೆ ಜೀವ ತುಂಬಿದ್ದಾರೆ. ಅದ್ವೈತ್ ಗುರುಮೂರ್ತಿ ಛಾಯಗ್ರಹಣ ಚಿತ್ರಕ್ಕಿದೆ. ಸಂಭಾಷಣೆಯನ್ನ ರಘು ನಿಡುವಳ್ಳಿ ಬರೆದಿದ್ದು, ವಸ್ತ್ರವಿನ್ಯಾಸ ರಶ್ಮಿ ಮಾಡಿದ್ದಾರೆ. ಇನ್ನೂ ಬನಾಸರ್‌ನಲ್ಲಿ ಹಿರಿಯ ನಟ ದೇವರಾಜ್, ಅಚ್ಯುತ್ ಕುಮಾರ್, ಸುಜಯ್ ಶಾಸ್ತ್ರಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ಸಿನಿಮಾದ ಬಹುತೇಕ ಕೆಲಸಗಳು ಮುಗಿದಿದ್ದು, ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ.

  English summary
  Banaras movie set a new record!

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X