For Quick Alerts
  ALLOW NOTIFICATIONS  
  For Daily Alerts

  ಜಮೀರ್ ಅಹಮ್ಮದ್ ಖಾನ್ ಪುತ್ರನ ಚೊಚ್ಚಲ ಚಿತ್ರ 'ಬನಾರಸ್' ರಿಲೀಸ್‌ಗೆ ಮುಹೂರ್ತ ಫಿಕ್ಸ್!

  |

  ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಖಾನ್ ಪುತ್ರ ಝೈದ್ ಖಾನ್ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿರೋದು ಗೊತ್ತೇ ಇದೆ. ಝೈದ್ ಖಾನ್ ಅಭಿನಯದ ಚೊಚ್ಚಲ ಸಿನಿಮಾ 'ಬನಾರಸ್' ಈಗಾಗಲೇ ಸ್ಯಾಂಡಲ್‌ವುಡ್‌ನಲ್ಲಿ ಸೌಂಡ್ ಮಾಡುತ್ತಿದೆ.

  ಝೈದ್ ಖಾನ್ ನಾಯಕನಾಗಿ ಅಭಿನಯಿಸಿರುವ ಚೊಚ್ಚಲ ಚಿತ್ರದ ಹಾಡು 'ಮಾಯಗಂಗೆ' ಸಂಗೀತ ಪ್ರಿಯರ ಗಮನ ಸೆಳೆದಿದೆ. ಹಾಡು ಸೂಪರ್ ಡೂಪರ್ ಹಿಟ್ ಆಗ್ತಿದ್ದಂತೆ, ಸಿನಿಮಾ ಕೂಡ ಬೇಜಾನ್ ಸದ್ದು ಮಾಡುತ್ತೆ ಅನ್ನೋ ನಂಬಿಕೆ ಚಿತ್ರತಂಡಕ್ಕಿದೆ.

  ಹಾಡು ಹಿಟ್ ಆದರೆ, ಸಿನಿಮಾ ಹಿಟ್ ಆಗೇ ಆಗುತ್ತೆ ಅನ್ನೋ ನಂಬಿಕೆಯನ್ನು 'ಬನಾರಸ್' ಉಳಿಸಿಕೊಳ್ಳುತ್ತೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಆದರೆ, ಕಳೆದ ಕೆಲವು ದಿನಗಳಿಂದ 'ಬನಾರಸ್' ಸಿನಿಮಾ ಬಿಡುಗಡೆ ಬಗ್ಗೆನೇ ಚರ್ಚೆಯಾಗುತ್ತಿತ್ತು. ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಅನ್ನೋ ಪ್ರಶ್ನೆ ಕೆಲವು ದಿನಗಳಿಂದ ಚಿತ್ರಪ್ರೇಮಿಗಳನ್ನು ಕಾಡುತ್ತಲೇ ಇತ್ತು. ಈ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದ್ದು, ನವೆಂಬರ್ ನಾಲ್ಕರಂದು ವಿಶ್ವದಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ.

  ಅಂದ್ಹಾಗೆ ಜಯತೀರ್ಥ 'ಬನಾರಸ್' ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಕನ್ನಡ , ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಸೇರಿದಂತೆ ಒಟ್ಟು ಐದು ಭಾಷೆಗಳಲ್ಲಿ ಏಕಕಾಲದಲ್ಲಿ ತೆರೆಕಾಣಲಿದೆ.

  ಇತ್ತೀಚಿಗೆ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾಗಳು ವಿಶ್ವಮಟ್ಟದಲ್ಲಿ ಸದ್ದು ಮಾಡುತ್ತಿದೆ. ಕನ್ನಡದ ಸಿನಿಮಾಗಳು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವುದರಿಂದ 'ಬನಾರಸ್' ಕೂಡ ಕನ್ನಡ ಚಿತ್ರರಂಗದ ಘನತೆಯನ್ನು ಹಂತಕ್ಕೆ ತೆಗೆದುಕೊಂಡು ಹೋಗಲಿದೆ ಅನ್ನೋ ನಂಬಿಕೆಯಲ್ಲಿದೆ.

  Kannada Movie Banaras Will Be Releasing On November 4th

  'ಬನಾರಸ್' ಸಿನಿಮಾವನ್ನು ತಿಲಕ್ ರಾಜ್ ಬಲ್ಲಾಳ್ ಪ್ರೀತಿಯಿಂದ, ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಇದರೊಳಗಿನ ಕಥೆ ಎಷ್ಟು ಕಾಡಲಿದೆಯೋ, ಚಿತ್ರ ತನ್ನ ಅದ್ಧೂರಿತನದಿಂದ ಸಹ ಗಮನಸೆಳೆಯಲಿದೆ. 'ಬನಾರಸ್' ವಿಭಿನ್ನ ಕಥಾ ಹಂದರದ ಸಿನಿಮಾ ಎನ್ನಲಾಗುತ್ತಿದೆ. ಸದ್ಯದಲ್ಲೇ ಸಿನಿಮಾ ಪ್ರಚಾರ ಅದ್ಧೂರಿಯಾಗಿ ಆರಂಭ ಆಗಲಿದೆ.

  Recommended Video

  Kiran Yogeshwar | ಅಪ್ಪು ಸರ್ ಮೀಟ್ ಮಾಡಿದೀನಿ ನಾನು | Puneeth Rajkumar

  'ಬೆಲ್ ಬಾಟಂ' ಅಂತಹ ಹಿಟ್ ಸಿನಿಮಾಗಳನ್ನು ಕೊಟ್ಟಿರೊ ಜಯತೀರ್ಥ ಸಿನಿಮಾ ನಿರ್ದೇಶಿಸಿರೋದ್ರಿಂದ ಕುತೂಹಲ ಗರಿಗೆದರಿದೆ. ಅಲ್ಲದೆ ದೊಡ್ಡ ತಾರಾಗಣ, ನುರಿತ ತಾಂತ್ರಿಕ ವರ್ಗ ಹಾಗೂ ಪ್ರತಿಭಾವಂತ ಕಲಾವಿದರಿದ್ದಾರೆ. ಸಿನಿಮಾ ಆರಂಭ ಆದಲ್ಲಿಂದ ಹಿಡಿದು ಇಲ್ಲಿಯವರೆಗೂ ಕುತೂಹಲ ಕಾಯ್ದಿರಿಸಿಕೊಂಡು ಬಂದಿದೆ. ಅದರಲ್ಲೂ ಝೈದ್ ಖಾನ್ ಎಂಟ್ರಿ ಹೇಗಿರುತ್ತೆ ಎಂದು ನೋಡುವುದಕ್ಕೆ ಪ್ರೇಕ್ಷಕರು ಕಾದು ಕೂತಿದ್ದಾರೆ.

  English summary
  Kannada Movie Banaras Will Be Releasing On November 4th, Know More.
  Thursday, September 1, 2022, 10:42
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X