For Quick Alerts
  ALLOW NOTIFICATIONS  
  For Daily Alerts

  ಬರ್ಫಿ ಕೊಡಲು ಜೋಡಿಯಾದ ದಿಗಂತ್, ಭಾಮಾ

  |

  ದೂದ್ ಪೇಡಾ ದಿಗಂತ್ ಹಾಗೂ 'ಮೊದಲಾ ಸಲ' ಭಾಮಾ ಮೊದಲ ಸಲ ಜೋಡಿಯಾಗಲಿದ್ದಾರೆ. 'ಬರ್ಫಿ' ಹೆಸರಿನ ಚಿತ್ರಕ್ಕಾಗಿ ಈ ಜೋಡಿ ಆಯ್ಕೆಯಾಗಿದ್ದು ಈ ಚಿತ್ರವನ್ನು ಶೇಖರ್ ನಿರ್ದೇಶನ ಮಾಡಲಿದ್ದಾರೆ. ಈ ಮೊದಲು 'ಪೆರೋಲ್' ಹಾಗೂ 'ಅಮೃತವಾಣಿ' ಚಿತ್ರವನ್ನು ನಿರ್ದೇಶಿಸಿರುವ ಶೇಖರ್, ಇದೀಗ ಮತ್ತೊಂದು ಸ್ವೀಟ್, ರೊಮ್ಯಾಂಟಿಕ್ ಸ್ಟೋರಿಯೊಂದಿಗೆ ಪ್ರೇಕ್ಷಕರ ಮುಂದೆ ಬರಲಿದ್ದಾರೆ.

  'ಬರ್ಫಿ' ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ನಿರ್ದೇಶನ ಈ ಮೂರು ಜವಾಬ್ದಾರಿಯನ್ನು ಶೇಖರ್ ಅವರೇ ವಹಿಸಿಕೊಂಡಿದ್ದಾರೆ. ಈ ಚಿತ್ರವನ್ನು ನಿರ್ಮಿಸಲಿರುವವರು ಶಂಕರ್. ಅಂದುಕೊಂಡಂತೆ ಎಲ್ಲವೂ ನಡೆದರೆ ಬರುವ ತಿಂಗಳು, ಸೆಪ್ಟೆಂಬರ್ 5, 2012 ರಂದು ಮುಹೂರ್ತ ನೆರವೇರಲಿದೆ. ಮೊದಲ ಬಾರಿ ದಿಗಂತ್ ಹಾಗೂ ಭಾಮಾ ಜೋಡಿಯನ್ನು ಪ್ರೇಕ್ಷಕರು ತೆರೆಯ ಮೇಲೆ ನೋಡಿ ಆನಂದಿಸಲಿದ್ದಾರೆ.

  "ಹೆಸರಿಗೆ ತಕ್ಕಂತೆ ಇದೊಂದು ಕ್ಯೂಟ್ ಲವ್ ಸ್ಟೋರಿಯಾಗಿದ್ದು ಸಾಕಷ್ಟು ಅನಿರೀಕ್ಷಿತ ತಿರುವುಗಳು ಕಥೆಯಲ್ಲಿವೆ. ಜೊತೆಗೆ ಚಿತ್ರದಲ್ಲಿ ಸಾಕಷ್ಟು ಆಕ್ಷನ್ ಹಾಗೂ ಕಾಮಿಡಿಯೂ ಜತೆಗೂಡಲಿದೆ. ಒಂದೇ ಮಾತಿನಲ್ಲಿ ಇದನ್ನು 'ಹಂಟಿಂಗ್ ಲವ್ ಸ್ಟೋರಿ' ಎನ್ನಬಹುದು. ಸ್ವಮೇಕ್ ಚಿತ್ರವಾಗಿರುವ ಇದು ಭಾರಿ ಬಜೆಟ್ ಚಿತ್ರವಾಗಲಿದೆ. ಭಾರತದ ಅತ್ಯಂತ ಸುಂದರ ತಾಣಗಳೆಂದು ಪ್ರಸಿದ್ಧಿ ಪಡೆದ ಬಹಳಷ್ಟು ಸ್ಥಳಗಳಲ್ಲಿ ಚಿತ್ರೀಕರಣ ನಡೆಯಲಿದೆ" ಎಂದಿದೆ ಚಿತ್ರತಂಡ.

  ಅಂದಹಾಗೆ, ಈ ಮೊದಲು ಬಾಲಿವುಡ್ ನಲ್ಲಿ ಪ್ರಿಯಾಂಕಾ ಚೋಪ್ರಾ, ಇಲಿಯಾನಾ ಹಾಗೂ ರಣಬೀರ್ ಕಪೂರ್ ಸಂಗಮದಲ್ಲಿ 'ಬರ್ಫಿ' ಹೆಸರಿನ ಚಿತ್ರವೊಂದು ತೆರೆಗೆ ಬರಲು ಸಿದ್ಧವಾಗಿದೆ. ಆದರೆ ದಿಗಂತ್-ಭಾಮಾ ಕನ್ನಡದ ಈ ಚಿತ್ರಕ್ಕೂ ಬಾಲಿವುಡ್ ಆ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ ನಿರ್ದೇಶಕ ಶೇಖರ್. ಒಟ್ಟಿನಲ್ಲಿ ಸ್ಯಾಂಡಲ್ ವುಡ್ ಪ್ರೇಕ್ಷಕರಿಗೆ ದಿಗಂತ್, ಭಾಮಾರ 'ಬರ್ಫಿ' ಸವಿಯುವ ಸುಯೋಗ ಸಿಗಲಿದೆ. (ಒನ್ ಇಂಡಿಯಾ ಕನ್ನಡ)

  English summary
  Diganth and Bhama Lead Kannada movie 'Barfi' to Launch on September 05, 2012. | Amrutavani and Perol fame director Shekar to Direct this movie under Shankar Production. This is the first time combination of Diganth and Bhama in Sandalwood. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X