»   » ಲೇಟ್ ಆದರೂ ಎಂಟ್ರಿ 'ಭರ್ಜರಿ'ಯಾಗಿದೆ: ಪರಭಾಷಾ ಚಿತ್ರಗಳು ಸೈಡಿಗ್ಹೋಗ್ಬೇಕ್ ಅಷ್ಟೆ.!

ಲೇಟ್ ಆದರೂ ಎಂಟ್ರಿ 'ಭರ್ಜರಿ'ಯಾಗಿದೆ: ಪರಭಾಷಾ ಚಿತ್ರಗಳು ಸೈಡಿಗ್ಹೋಗ್ಬೇಕ್ ಅಷ್ಟೆ.!

Posted By:
Subscribe to Filmibeat Kannada
Bharjari, Kannada Movie to release in Bengaluru on September 15th | Filmibeat Kannad

ಎಲ್ಲೂ ಪ್ಲಾನ್ ಪ್ರಕಾರ ನಡೆದಿದ್ದರೆ, ಧ್ರುವ ಸರ್ಜಾ ಹಾಗೂ ರಚಿತಾ ರಾಮ್ ಅಭಿನಯದ 'ಭರ್ಜರಿ' ಸಿನಿಮಾ ಇಷ್ಟೊತ್ತಿಗಾಗಲೇ ಬಿಡುಗಡೆ ಆಗ್ಬೇಕಿತ್ತು. ಆದ್ರೆ, ಎಲ್ಲದಕ್ಕೂ ಕಾಲ ಕೂಡಿ ಬರಬೇಕು ಅಂತಾರಲ್ಲ, ಹಾಗೆ... 'ಭರ್ಜರಿ' ಚಿತ್ರಕ್ಕೆ ಇದೀಗ ಬಿಡುಗಡೆ ಭಾಗ್ಯ ಲಭಿಸಿದೆ.

ಸೆಪ್ಟೆಂಬರ್ 15 ರಂದು 'ಭರ್ಜರಿ' ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಲೇಟ್ ಆದರೂ ಚಿತ್ರದ ಎಂಟ್ರಿ ಲೇಟೆಸ್ಟ್ ಆಗಿ 'ಭರ್ಜರಿ'ಯಾಗಿದೆ ಅನ್ನೋದು ಸದ್ಯದ ಟ್ರೆಂಡಿಂಗ್ ಟಾಪಿಕ್.

ಪರಭಾಷೆಯ ಚಿತ್ರಗಳ ಹಾವಳಿಯಿಂದ ಕನ್ನಡ ಚಿತ್ರಗಳಿಗೆ ಥಿಯೇಟರ್ ಗಳ ಕೊರತೆ ಕಾಡುವುದು ಸಾಮಾನ್ಯ. ಆದ್ರೀಗ, 'ಭರ್ಜರಿ' ಅಬ್ಬರದಿಂದ ಪರಭಾಷೆಯ ಚಿತ್ರಗಳೇ ಸೈಡಿಗೆ ಹೋಗುವ ಹಾಗಾಗಿದೆ. ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ..

ರೆಕ್ಸ್ ಥಿಯೇಟರ್ ನಲ್ಲಿ 'ಭರ್ಜರಿ' ಹವಾ

ವರ್ಷಗಳಿಂದಲೂ ಪರಭಾಷೆಯ ಚಿತ್ರಗಳೇ ಪ್ರದರ್ಶನ ಕಾಣುತ್ತಿದ್ದ ಬೆಂಗಳೂರಿನ ಎಂ.ಜಿ.ರೋಡ್ ನಲ್ಲಿರುವ ರೆಕ್ಸ್ ಥಿಯೇಟರ್ ನಲ್ಲಿ 'ಭರ್ಜರಿ' ಸಿನಿಮಾ ಈ ವಾರ ಬಿಡುಗಡೆ ಆಗಲಿದೆ. ದಶಕಗಳ ನಂತರ ರೆಕ್ಸ್ ಚಿತ್ರಮಂದಿರದಲ್ಲಿ ಕನ್ನಡ ಕಲರವ ಕೇಳಿಬರುವುದು 'ಭರ್ಜರಿ' ಮೂಲಕ ಅನ್ನೋದು ಖುಷಿಯ ವಿಚಾರ.

ಕಾವೇರಿ ಥಿಯೇಟರ್ ನಲ್ಲೂ 'ಭರ್ಜರಿ' ಸೌಂಡು

ಪರಭಾಷೆಯ ಚಿತ್ರಗಳಿಗೆ ಫೇಮಸ್ ಆಗಿರುವ ಕಾವೇರಿ ಚಿತ್ರಮಂದಿರದಲ್ಲಿಯೂ ಈ ವಾರದಿಂದ 'ಭರ್ಜರಿ' ಸೌಂಡು ಕೇಳಿ ಬರಲಿದೆ.

'ಊರ್ವಶಿ'ಯಲ್ಲೂ 'ಭರ್ಜರಿ'

ರೆಕ್ಸ್ ಹಾಗೂ ಕಾವೇರಿ ಜೊತೆಗೆ ಊರ್ವಶಿ ಚಿತ್ರಮಂದಿರದಲ್ಲಿಯೂ 'ಭರ್ಜರಿ' ಬಿಡುಗಡೆ ಆಗಲಿದೆ ಎನ್ನಲಾಗಿದೆ.

ಇದಪ್ಪಾ, ಕನ್ನಡ ಚಿತ್ರಗಳ ಹವಾ ಅಂದ್ರೆ...

ಪರಭಾಷೆಯ ಸಿನಿಮಾಗಳು ಬಿಡುಗಡೆ ಆಗುತ್ತವೆ ಅಂದ್ರೆ, ಸಣ್ಣ ಪುಟ್ಟ ಥಿಯೇಟರ್ ಗಳಲ್ಲಿ ಇದ್ದ ಕನ್ನಡ ಚಿತ್ರಗಳಿಗೂ ಗೇಟ್ ಪಾಸ್ ನೀಡಲಾಗುತ್ತಿತ್ತು. ಆದ್ರೀಗ, ಬೆಂಗಳೂರಿನ ಪ್ರತಿಷ್ಟಿತ ಸಿಂಗಲ್ ಸ್ಕ್ರೀನ್ ಥಿಯೇಟರ್ ಗಳಲ್ಲಿ ಪರಭಾಷೆಯ ಚಿತ್ರಗಳನ್ನ ಬಿಟ್ಟು ಕನ್ನಡ ಚಿತ್ರಕ್ಕೆ ಜಾಗ ಮಾಡಿಕೊಡ್ತಿದ್ದಾರೆ ಅಂದ್ರೆ 'ಭರ್ಜರಿ' ಹವಾ ಹೇಗಿರ್ಬಹುದು ಅಂತ ನೀವೇ ಊಹಿಸಿ...

'ಭರ್ಜರಿ' ಕುರಿತು....

ಧ್ರುವ ಸರ್ಜಾ, ರಚಿತಾ ರಾಮ್, ಹರಿಪ್ರಿಯಾ, ವೈಶಾಲಿ ದೀಪಕ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ 'ಭರ್ಜರಿ' ಚಿತ್ರಕ್ಕೆ ಚೇತನ್ ಆಕ್ಷನ್ ಕಟ್ ಹೇಳಿದ್ದಾರೆ. 'ಭರ್ಜರಿ' ಇದೇ ಶುಕ್ರವಾರ ನಿಮ್ಮ ಮುಂದೆ ಬರಲಿದೆ. ನೋಡಲು ನೀವು ರೆಡಿನಾ.?

English summary
Kannada Movie 'Bharjari' to release in Rex Theater, Bengaluru this Friday, September 15.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada