For Quick Alerts
  ALLOW NOTIFICATIONS  
  For Daily Alerts

  'ಭೂಮಿಪುತ್ರ' ಚಿತ್ರದ ಫಸ್ಟ್ ಲುಕ್ ರಿಲೀಸ್: ಮೇ 8ಕ್ಕೆ ಚಾಲನೆ

  By Bharath Kumar
  |

  ನಿರ್ದೇಶಕ ಎಸ್‌.ನಾರಾಯಣ್‌ ಅವರು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ 20 ತಿಂಗಳ ಆಡಳಿತಾವಧಿಯನ್ನ ಸಿನಿಮಾ ಮಾಡ್ತಿದ್ದಾರೆ ಎಂದು ಈ ಹಿಂದನೆ ಹೇಳಿದ್ವಿ. ಈ ಚಿತ್ರದ ಮುಹೂರ್ತ ನಾಳೆ (ಮೇ 8) ನೆರವೇರಲಿದೆ.[ಬೆಳ್ಳಿತೆರೆಯಲ್ಲಿ ಮೂಡಲಿದೆ ಜೆಡಿಎಸ್ 'ದಳಪತಿ'ಯ T20 ಆಡಳಿತ]

  ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಂಜೆ 6 ಗಂಟೆಗೆ ಚಿತ್ರದ ಮುಹೂರ್ತ ನಡೆಯಲಿದೆ. ಮಾಜಿ ಪ್ರಧಾನಿ ದೇವೇಗೌಡರು ಚಿತ್ರಕ್ಕೆ ಚಾಲನೆ ನೀಡಲಿದ್ದು, ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಲಿದ್ದಾರೆ.

  ಇನ್ನು ಅದೇ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಲಿದೆ ಚಿತ್ರತಂಡ. ಈಗಾಗಲೇ 'ಭೂಮಿಪುತ್ರ' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾಗಿದ್ದು, ಗಮನ ಸೆಳೆಯುತ್ತಿದೆ.['ಭೂಮಿಪುತ್ರ' ಸಿನಿಮಾ ಹಿಂದಿದ್ಯಾ ಎಚ್.ಡಿ.ಕೆ ಚುನಾವಣಾ ರಣತಂತ್ರ.?]

  ಅಂದ್ಹಾಗೆ, 'ಭೂಮಿಪುತ್ರ' ಚಿತ್ರದಲ್ಲಿ ನಟ ಅರ್ಜುನ್ ಸರ್ಜಾ ಹೆಚ್.ಡಿ.ಕುಮಾರಸ್ವಾಮಿ ಅವರ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ. ಪ್ರಭುಕುಮಾರ್ ಈ ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಸುಮಾರು 30 ಸಾವಿರ ಜನರು ಸೇರುವ ನಿರೀಕ್ಷೆ ಇದ್ದು, ದೇವೇಗೌಡ ದಂಪತಿ, ಕುಮಾರಸ್ವಾಮಿ ದಂಪತಿ, ನಟ ಅರ್ಜುನ್‌ ಸರ್ಜಾ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಬಾಗವಹಿಸಿಲಿದ್ದಾರೆ.

  English summary
  Kannada Famous Director S Narayan will Directing Movie on Karnataka Ex Chief Minister HD Kumaraswamy. Action King Arjun Sarja has Doing Lead Role in The Movie. Kannada Movie BhoomiPutra Lunching On May 8th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X