ಬ್ರಹ್ಮಾಚಾರಿ ಟ್ರೈಲರ್: 100 % ಮನರಂಜನೆ
ಸತೀಶ್ ನೀನಾಸಂ ಅಭಿನಯದ 'ಬ್ರಹ್ಮಾಚಾರಿ' ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಈ ಹಿಂದೆ ಟೀಸರ್ ಮೂಲಕ ಭರವಸೆ ಮೂಡಿಸಿದ್ದ ಸಿನಿಮಾ ಈಗ ಟ್ರೈಲರ್ ಬಿಡುಗಡೆ ಮಾಡಿ, ಕುತೂಹಲ ಹೆಚ್ಚಿಸಿದೆ.
ಸದ್ಯ ರಿಲೀಸ್ ಆಗಿರುವ ಟ್ರೈಲರ್ ನೋಡಿದ ಪ್ರೇಕ್ಷಕರು '100% ಮನರಂಜನೆ ತುಂಬಿದೆ' ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. 35 ಸಾವಿರಕ್ಕೂ ಅಧಿಕ ವೀಕ್ಷಣೆ ಕಂಡಿದ್ದು, ಯೂಟ್ಯೂಬ್ ನಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ.
ಅಂದ್ಹಾಗೆ ಇದು ಪಕ್ಕಾ ಸತೀಶ್ ನೀನಾಸಂ ಅವರು ಸ್ಟೈಲ್ ಸಿನಿಮಾ. ಕೌಟುಂಬಿಕ ಕಥೆ ಹೊಂದಿರುವ ಈ ಚಿತ್ರ ಹಾಸ್ಯದ ಮೂಲಕ ಪ್ರೇಕ್ಷಕರನ್ನ ರಂಜಿಸಲು ತಯಾರಾಗಿದೆ. ಸತೀಶ್ ನೀನಾಸಂಗೆ ಜೋಡಿಯಾಗಿ ಅದಿತಿ ಪ್ರಭುದೇವ ಕಾಣಿಸಿಕೊಂಡಿದ್ದು, ಇವರಿಬ್ಬರ ಕಾಂಬಿನೇಷನ್ ಕಿಕ್ ಕೊಡುತ್ತಿದೆ.

ಸತೀಶ್ ನೀನಾಸಂ ಸ್ನೇಹಿತರ ಪಾತ್ರದಲ್ಲಿ ಶಿವರಾಜ್ ಕೆಆರ್ ಪೇಟೆ ಮತ್ತು ಅಶೋಕ್ ನಟಿಸಿದ್ದು, ಜುಗಲ್ ಬಂದಿ ಸಖತ್ ಮಜವಾಗಿ ಮೂಡಿಬಂದಿದೆ. ಹಿರಿಯ ನಟ ದತ್ತಣ್ಣ ಹಾಗೂ ಅಚ್ಯುತ್ ರಾವ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವುದು ಚಿತ್ರಕ್ಕೆ ಜೋಶ್ ನೀಡಿದೆ.
ಇನ್ನುಳಿದಂತೆ ಚಂದ್ರ ಮೋಹನ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಧರ್ಮ ವಿಶ್ ಸಂಗೀತ ನೀಡಿದ್ದಾರೆ. ಉದಯ್ ಮೆಹ್ತಾ ನಿರ್ಮಿಸಿದ್ದಾರೆ.


Click it and Unblock the Notifications











