'ಬಟರ್ ಫ್ಲೈ' ಜೊತೆ ರಮೇಶ್ ಅರವಿಂದ್, ಪಾರೂಲ್ ಹಾರಾಟ
ರಮೇಶ್ ಅರವಿಂದ್ ನಿರ್ದೇಶನದ 'ಬಟರ್ ಫ್ಲೈ' ಚಿತ್ರದ ಚಿತ್ರೀಕರಣ ಶುರುವಾಗಿದೆ. ಚಿತ್ರದ ಶೂಟಿಂಗ್ ನಲ್ಲಿ ಚಿತ್ರತಂಡ ಭಾಗಿಯಾಗಿದ್ದು, ಚಿತ್ರದ ಕೆಲ ಮೇಕಿಂಗ್ ಸ್ಟಿಲ್ ಗಳು ಈಗ ಹೊರಬಂದಿದೆ.
ಪಾರೂಲ್ ಯಾದವ್ ಚಿತ್ರದ ನಾಯಕಿಯಾಗಿದ್ದು, ಚಿತ್ರೀಕರಣದಲ್ಲಿ ಅವರು ಭಾಗಿಯಾಗಿದ್ದಾರೆ. ಚಿತ್ರವನ್ನು ರಮೇಶ್ ಅರವಿಂದ್ ನಿರ್ದೇಶನ ಮಾಡುತ್ತಿದ್ದು, ಸತ್ಯ ಹೆಗಡೆ ಕ್ಯಾಮರಾ ಕೆಲಸದಲ್ಲಿ ತಲ್ಲೀನರಾಗಿದ್ದರು. ಕೈಗೆ ಮದರಂಗಿ ಹಾಕಿ ಸಿಂಪಲ್ ಹುಡುಗಿಯಾಗಿ ಪಾರೂಲ್ ಕಾಣಿಸಿಕೊಂಡಿದ್ದರು.

ಸಿನಿಮಾದ ಕಥೆಯ ಪ್ರಾರಂಭದ ಭಾಗದ ಚಿತ್ರೀಕರಣ ಇದಾಗಿದೆ. ಈ ಭಾಗದ ಚಿತ್ರೀಕರಣ ಹಳ್ಳಿಯಲ್ಲಿ ನಡೆಯಲಿದ್ದು, ಇಲ್ಲಿ ಪಾರೂಲ್ ಭಾಗದ ಚಿತ್ರೀಕರಣ ನಡೆಯುತ್ತಿದೆ. ವಿದೇಶದಲ್ಲಿ ನಡೆಯುವ ಚಿತ್ರೀಕರಣದಲ್ಲಿ ನಟಿ ಆಮಿ ಜಾಕ್ಸನ್ ಭಾಗಿಯಾಗಲಿದ್ದಾರೆ.

'ಬಟರ್ ಫ್ಲೈ' ಹಿಂದಿಯ 'ಕ್ವೀನ್' ಚಿತ್ರದ ರೀಮೇಕ್ ಆಗಿದ್ದು, ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಕನ್ನಡ ಮತ್ತು ತಮಿಳಿನಲ್ಲಿ ಚಿತ್ರವನ್ನು ರಮೇಶ್ ಅರವಿಂದ್ ನಿರ್ದೇಶನ ಮಾಡುತ್ತಿದ್ದು ತಮಿಳಿನಲ್ಲಿ ಕಾಜಲ್ ಅಗರ್ವಾಲ್ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.


Click it and Unblock the Notifications











