Don't Miss!
- News
Bengaluru Airport: ವಿಮಾನ ನಿಲ್ದಾಣ ಸ್ಪೋಟಿಸುವುದಾಗಿ ಯುವತಿಯಿಂದ ಬೆದರಿಕೆ
- Technology
ಟೆಲಿಗ್ರಾಮ್ನಲ್ಲಿ ವಾಟ್ಸಾಪ್ ಅನ್ನೇ ಮೀರಿಸುವ ಫೀಚರ್ಸ್!; ಬಳಕೆದಾರರಿಗೆ ಸಾಕಷ್ಟು ಅನುಕೂಲ
- Finance
ಅದಾನಿ ಡಾಲರ್ ಬಾಂಡ್ ವಿರುದ್ಧ ಸಾಲ ನೀಡಲು ಸ್ಟಾಡರ್ಡ್ ಚಾರ್ಟೆಡ್ ನಕಾರ: ವರದಿ
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ಭಾರತವನ್ನು ಮಣಿಸಲು ಆಸಿಸ್ ತಂಡಕ್ಕೆ ಮಿಚೆಲ್ ಜಾನ್ಸನ್ ಸಲಹೆ
- Automobiles
ಸೆಲ್ಟೋಸ್ನ ಗೇರ್ಬಾಕ್ಸ್ನಲ್ಲಿ ದೋಷ ಕಂಡು ಬಂದಾಗ ಉಚಿತವಾಗಿ ಬದಲಾಯಿಸಿ ಕೊಟ್ಟ ಕಿಯಾ
- Lifestyle
ಮಕ್ಕಳನ್ನು 'ಅಮ್ಮ' ದಡಾರದಿಂದ ರಕ್ಷಿಸಲು ಇದೇ ತಿಂಗಳು ತಪ್ಪದೆ ಕೊಡಿಸಿ MR ಲಸಿಕೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನಿರ್ಮಾಪಕ ರಾಮು ನಿಧನ: ಸಿನಿಗಣ್ಯರು ನೆನಪಿಸಿಕೊಂಡಿದ್ದು ಹೀಗೆ
ಕನ್ನಡ ಸಿನಿಮಾ ರಂಗಕ್ಕೆ ಇಂದು ಬರಸಿಡಿಲೊಂದು ಅಪ್ಪಳಿಸಿದೆ. ಕನ್ನಡದ ಖ್ಯಾತ ನಿರ್ಮಾಪಕ ರಾಮು ಅವರು ಇಂದು ಕೋವಿಡ್‌ನಿಂದ ನಿಧನ ಹೊಂದಿದ್ದಾರೆ.
ಮೊದಲ ಬಾರಿಗೆ ಸಿನಿಮಾಕ್ಕೆ ಕೋಟಿ ರೂಪಾಯಿ ಬಂಡವಾಳ ಹೂಡಿದ್ದ ರಾಮು ಕನ್ನಡ ಸಿನಿಮಾರಂಗ ಬಹುಕಾಲ ನೆನಪುಳಿವ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.
ರಾಮು ಅವರ ಹಠಾತ್ ಅಗಲಿಕೆಗೆ ಕನ್ನಡದ ಹಲವು ಸಿನಿಗಣ್ಯರು ಸಾಮಾಜಿಕ ಜಾಲತಾಣದ ಮೂಲಕ ಸಂತಾಪ ಸೂಚಿಸಿದ್ದಾರೆ.
ರಾಮು ಅಗಲಿಕೆ ಕುರಿತು ಟ್ವೀಟ್ ಮಾಡಿರುವ ಪುನೀತ್ ರಾಜ್‌ಕುಮಾರ್, 'ಒಬ್ಬ ಸಿನಿಮಾ ಪ್ರೀತಿಯ ನಿರ್ಮಾಪಕನನ್ನು ಕನ್ನಡ ಚಿತ್ರರಂಗ ಕಳೆದುಕೊಂಡಿದೆ. ರಾಮು ಸರ್ ಇನ್ನಿಲ್ಲ, ಅವರ ಆತ್ಮಕ್ಕೆ ಶಾಂತಿ ಸಿಗಲಿ' ಎಂದಿದ್ದಾರೆ.

ಕನ್ನಡ ಚಿತ್ರರಂಗದ ಹೆಮ್ಮೆಯ ನಿರ್ಮಾಪಕ ರಾಮು: ದರ್ಶನ್
''ಕನ್ನಡ ಚಿತ್ರರಂಗದ ಹೆಮ್ಮೆಯ ನಿರ್ಮಾಪಕರಲ್ಲೊಬರು - ಕೋಟಿ ರಾಮು ರವರು ಇಂದು ನಮ್ಮನ್ನು ಅಗಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ನೋವನ್ನು ತಡೆದುಕೊಳ್ಳುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ. ದಯಮಾಡಿ ಮನೆಯಲ್ಲಿರಿ. ಎಲ್ಲಾ ಸುರಕ್ಷತೆಯ ಕ್ರಮಗಳನ್ನು ಪಾಲಿಸಿ''

ಹೇಳಲಾಗದಷ್ಟು ಸಂಕಟವಾಗುತ್ತಿದೆ: ಜಗ್ಗೇಶ್
''ಅಯ್ಯೋ ದೇವರೆ ಘನಘೋರ, 'ರೌಡಿ ಎಂಎಲ್‌ಎ' ಸಿನಿಮಾ ಮೂಲಕ ಪರಿಚಯ, 'ತರ್ಲೆ ನನ್ಮಗ' ಸಿನಿಮಾ ಆಗಲು ಕಾರಣ ನನ್ನ ಆತ್ಮೀಯ. ತಮ್ಮನ ರೀತಿಯಲ್ಲಿ ನನ್ನ ಜೊತೆ ಬೆಳೆದು ಬಂದವ. ನಮ್ಮ ಊರಿನ ಪಕ್ಕದ ಊರಾದ ಅಮೃರೂರಿನ ಮಗ. ನನ್ನ ಕಲಾಬಂಧು ಮಾಲಾಶ್ರಿಗೆ ದುಃಖ ತಡೆದುಕೊಳ್ಳುವ ಶಕ್ತಿ ರಾಯರು ನೀಡಲಿ. ಹೇಳಲಾಗದಷ್ಟು ಸಂಕಟವಾಗುತ್ತಿದೆ. ಏನಾಗುತ್ತಿದೆ ಈ ಜಗಕ್ಕೆ'' ಎಂದು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ ನಟ ಜಗ್ಗೇಶ್.

ನಿಮ್ಮ ಸಿನಿಮಾಗಳಲ್ಲಿ ನಟಿಸಿದ್ದು ನನ್ನ ಭಾಗ್ಯ: ದುನಿಯಾ ವಿಜಯ್
''ಮಾತುಗಳೇ ಬರುತ್ತಿಲ್ಲ ನಿಮ್ಮಂತಹ ನಿರ್ಮಾಪಕರು ಅದಕ್ಕೂ ಮಿಗಿಲಾಗಿ ಸಹೃದಯಿ ವ್ಯಕ್ತಿ ಇಲ್ಲ ಎಂಬುದನ್ನೇ ಅರಗಿಸಿಕೊಳ್ಳಲಾಗುತ್ತಿಲ್ಲ. ಹೇ ಕ್ರೂರಿ ಕೊರೋನಾ ಧಿಕ್ಕಾರವಿರಲಿ ನಿನ್ನ ರಕ್ಕಸತನಕ್ಕೆ. ನಿಮ್ಮ ಸಂಸ್ಥೆ ನಿರ್ಮಿಸಿದ ರಾಕ್ಷಸ , ಶಿವಾಜಿನಗರ , ಕಂಠೀರವ ಅಂತಹ ಸಿನಿಮಾಗಳಲ್ಲಿ ನಾನು ಅಭಿನಯಿಸಿದ್ದು ನನ್ನ ಭಾಗ್ಯ.
ನಿಮ್ಮ ಆತ್ಮಕ್ಕೆ ಶಾಂತಿ ದೊರಕಲಿ. ಕುಟುಂಬಕ್ಕೆ ಭಗವಂತ ಧೈರ್ಯ ಕರುಣಿಸಲಿ ಎಂದಿದ್ದಾರೆ ದುನಿಯಾ ವಿಜಯ್.

ನನ್ನ ಜೀವನದ ದೊಡ್ಡ ಹಿಟ್ ಕೊಟ್ಟಿದ್ದು ನೀವು: ರಕ್ಷಿತಾ
'ರಾಮು ಅವರಿಲ್ಲ ಎಂಬ ಸುದ್ದಿ ಕೇಳಿ ತೀವ್ರ ಬೇಸರವಾಗಿದೆ. ನೀವು ನನ್ನ ಜೀವಮಾನದ ದೊಡ್ಡ ಹಿಟ್ ಸಿನಿಮಾ ನೀಡಿದಿರಿ. ಕನ್ನಡ ಚಿತ್ರರಂಗಕ್ಕೆ ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದೀರಿ. ಸದಾ ನಗುಮುಖದ ಅತ್ಯುತ್ತಮ ವ್ಯಕ್ತಿಯಾಗಿ ನಾನು ರಾಮು ಅವರನ್ನು ನೆನಪಿಸಿಕೊಳ್ಳುತ್ತೇನೆ. ಅವರ ತಲೆಯಲ್ಲಿ ಸದಾ ಹೊಸ ಯೋಚನೆಗಳು ಮೊಳೆಯುತ್ತಿದ್ದವು. ಆ ಕಾಲದಲ್ಲಿಯೇ ದೊಡ್ಡ ಬಜೆಟ್ ಸಿನಿಮಾಗಳನ್ನು ಮಾಡುವ ಸಾಹಸಕ್ಕೆ ನೀವು ಕೈಹಾಕಿದ್ದಿರಿ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. ಮಾಲಾಶ್ರೀ ಅವರು ಹಾಗೂ ಕುಟುಂಬ ವರ್ಗಕ್ಕೆ ನನ್ನ ಸಂತಾಪಗಳು'' ಎಂದಿದ್ದಾರೆ ನಟಿ ರಕ್ಷಿತಾ ಪ್ರೇಮ್. ರಾಮು ನಿರ್ಮಿಸಿದ್ದ ಸೂಪರ್ ಹಿಟ್ ಸಿನಿಮಾ 'ಕಲಾಸಿಪಾಳ್ಯ'ದಲ್ಲಿ ರಕ್ಷಿತಾ ನಟಿಸಿದ್ದರು.

ಮಾಲಕ್ಕ ಅನುಭವಿಸುತ್ತಿರುವ ನೋವು ಊಹಿಸಲಸಾಧ್ಯ: ಮುರಳಿ
''ನನ್ನ ನಟನಾವೃತ್ತಿಯ ಆರಂಭದ ದಿನಗಳಲ್ಲಿ ನನ್ನ ನಿರ್ಮಾಪಕರಾಗಿದ್ದವರು ಹಾಗೂ ಅತ್ಯುತ್ತಮ ನೆರೆ-ಹೊರೆಯವರೂ ಆಗಿದ್ದರು ರಾಮು. ಒಳ್ಳೆಯ ನಿರ್ಮಾಪಕನನ್ನು ಕನ್ನಡ ಚಿತ್ರರಂಗ ಕಳೆದುಕೊಂಡಿದೆ. ರಾಮು ಒಬ್ಬ ಅದ್ಭುತ ವ್ಯಕ್ತಿಯಾಗಿದ್ದರು. ಮಾಲಕ್ಕ (ಮಾಲಾಶ್ರಿ) ಹಾಗೂ ಮಕ್ಕಳು ಎಷ್ಟು ದುಃಖದಲ್ಲಿರಬಹುದು ಎಂಬುದನ್ನು ಊಹಿಸಲು ಸಹ ನನಗೆ ಸಾಧ್ಯವಾಗುತ್ತಿಲ್ಲ'' ಎಂದಿದ್ದಾರೆ ಶ್ರೀಮುರಳಿ.

ನಟಿ, ಸಂಸದೆ ಸುಮಲತಾ ಅಂಬರೀಶ್ ಟ್ವೀಟ್
ನಟಿ, ಮಂಡ್ಯ ಸಂಸದೆ ಸುಮಲತಾ ಸಹ ರಾಮು ಅಗಲಿಕೆಗೆ ಸಂತಾಪ ಸೂಚಿಸಿದ್ದು, ''ಕನ್ನಡದ ಹೆಸರಾಂತ ನಿರ್ಮಾಪಕ ರಾಮು ಅವರು ಕೋವಿಡ್ ಗೆ ತುತ್ತಾಗಿರುವ ಸುದ್ದಿ ಹೇಳಲಾಗದಷ್ಟು ಸಂಕಟ ತಂದಿದೆ. ಮಾಲಾಶ್ರೀ, ಅವರ ಮಕ್ಕಳು ಮತ್ತು ಕುಟುಂಬದವರ ದುಃಖದಲ್ಲಿ ಅವರ ಜೊತೆಗಿದ್ದೇನೆ. ಇನ್ಯಾರು ಕೊರೊನಾಗೆ ಬಲಿಯಾಗುವುದು ಬೇಡ. ದಯವಿಟ್ಟು ಜಾಗರೂಕರಾಗಿರಿ'' ಎಂದಿದ್ದಾರೆ.
Recommended Video

ಚಿತ್ರರಂಗಕ್ಕೆ ತುಂಬಲಾರದ ನಷ್ಟ: ನಿಖಿಲ್
ನಿಖಿಲ್ ಕುಮಾರಸ್ವಾಮಿ ಟ್ವೀಟ್ ಮಾಡಿದ್ದು, 'ಖ್ಯಾತ ನಿರ್ಮಾಪಕ ರಾಮು ಅವರು ಕೊರೋನಾ ಸೋಂಕಿನಿಂದಾಗಿ ಸಾವನ್ನಪ್ಪಿರುವ ಸುದ್ಧಿ ಕೇಳಿ ಮನಸ್ಸಿಗೆ ಬಹಳ ಅಘಾತವಾಯಿತು. ಕನ್ನಡ ಚಿತ್ರರಂಗಕ್ಕೆ ರಾಮು ಅವರ ಕೊಡುಗೆ ಅಪಾರ ಅವರ ನಿಧನದಿಂದ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ದೇವರು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ. ಕೊರೋನಾ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಎಲ್ಲರೂ ದಯವಿಟ್ಟು ಎಚ್ಚರಿಕೆ ವಹಿಸಿ, ಆರೋಗ್ಯ ಕಾಪಾಡಿಕೊಳ್ಳಿ' ಎಂದಿದ್ದಾರೆ.