For Quick Alerts
  ALLOW NOTIFICATIONS  
  For Daily Alerts

  ಪುನೀತ್ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಕಾದಿದೆ ಬಿಗ್ ಸರ್ ಪ್ರೈಸ್

  By Suneetha
  |

  ಈ ವರ್ಷ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ತಮ್ಮ ಹುಟ್ಟುಹಬ್ಬವನ್ನು ವಿಶೇಷವಾಗಿ 'ಚಕ್ರವ್ಯೂಹ' ಚಿತ್ರತಂಡದೊಂದಿಗೆ ಆಚರಿಸಿಕೊಳ್ಳುತ್ತಿದ್ದಾರೆ. ಜೊತೆಗೆ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳಿಗೆ ವಿಶೇಷ ಉಡುಗೊರೆಯನ್ನು ಕೂಡ ನೀಡಲಿದ್ದಾರೆ.

  ಹೌದು ಮಾರ್ಚ್ 17 ರಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ತಮ್ಮ ಹಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಅದೇ ದಿನದಂದು ಭಾರಿ ಕುತೂಹಲ ಹುಟ್ಟಿಸಿರುವ 'ಚಕ್ರವ್ಯೂಹ' ಚಿತ್ರದ ಆಡಿಯೋ ಬಿಡುಗಡೆ ಮತ್ತು ಟ್ರೈಲರ್ ಬಿಡುಗಡೆ ಆಗುತ್ತಿದೆ.['ಚಕ್ರವ್ಯೂಹ' ಚಿತ್ರದ 'ಗೆಳೆಯಾ ಗೆಳೆಯಾ' ಹಾಡು ನೋಡಿದ್ರಾ?]

  ಈ ಮೊದಲು ಮಾರ್ಚ್ 12 ನೇ ತಾರೀಖಿನಂದು ಆಡಿಯೋ ಬಿಡುಗಡೆ ಸಮಾರಂಭ ಮಾಡುವುದಾಗಿ ಚಿತ್ರತಂಡ ಯೋಜನೆ ಹಾಕಿಕೊಂಡಿತ್ತು. ಆದರೆ ಕೊನೆಯ ಕ್ಷಣದಲ್ಲಿ ಆದ ಬದಲಾವಣೆಯಿಂದ ಆಡಿಯೋ ಬಿಡುಗಡೆ ಅಪ್ಪು ಅವರ ಹುಟ್ಟುಹಬ್ಬದಂದು ನೆರವೇರಲಿದೆ.[ಬಿಡುಗಡೆಗೆ ಮುನ್ನವೇ ಸದ್ದು ಮಾಡುತ್ತಿರುವ ಪವರ್ ಸ್ಟಾರ್ 'ಚಕ್ರವ್ಯೂಹ']

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಗುಳಿಕೆನ್ನೆ ಬೆಡಗಿ ರಚಿತಾ ರಾಮ್ ಕಾಣಿಸಿಕೊಂಡಿರುವ 'ಚಕ್ರವ್ಯೂಹ' ಚಿತ್ರದಲ್ಲಿ 'ಎನ್ನೈ ಅರಿಂದಾಲ್' ಖ್ಯಾತಿಯ ತಮಿಳು ನಟ ಅರುಣ್ ವಿಜಯ್ ಅವರು ಖಳ ನಟನಾಗಿ ಮಿಂಚಿದ್ದಾರೆ. ಹೆಚ್ಚಿನ ಮಾಹಿತಿ ಓದಿ ಕೆಳಗಿನ ಸ್ಲೈಡುಗಳಲ್ಲಿ....

  ಮುಖ್ಯ ಅತಿಥಿ ಅಂಬರೀಶ್

  ಮುಖ್ಯ ಅತಿಥಿ ಅಂಬರೀಶ್

  ಬೆಂಗಳೂರಿನಲ್ಲಿ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನಡೆಯಲಿದ್ದು, ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ರೆಬೆಲ್ ಸ್ಟಾರ್ ಅಂಬರೀಶ್ ಅವರು ಆಗಮಿಸಲಿದ್ದಾರೆ. (ಚಿತ್ರಕೃಪೆ: ಚಂದನ್ ಫೊಟೋಗ್ರಫಿ)[ಪವರ್ ಸ್ಟಾರ್ ಚಿತ್ರಕ್ಕೆ ಧ್ವನಿ ನೀಡಿದ ಯಂಗ್ ಟೈಗರ್ NTR]

  ನಿರ್ಮಾಪಕ ಫುಲ್ ಖುಷ್

  ನಿರ್ಮಾಪಕ ಫುಲ್ ಖುಷ್

  ನಿರ್ಮಾಪಕ ಎನ್.ಕೆ ಲೋಹಿತ್ ಅವರು ಚಿತ್ರಕ್ಕೆ ಬಂಡವಾಳ ಹೂಡಿದ್ದು, ಅಂಬರೀಶ್ ಅವರು ಕಾರ್ಯಕ್ರಮಕ್ಕೆ ಬರಲು ಒಪ್ಪಿಕೊಂಡಿದ್ದಕ್ಕೆ ಫುಲ್ ಖುಷ್ ಆಗಿದ್ದಾರೆ. 'ಚಕ್ರವ್ಯೂಹ' ಚಿತ್ರದ ಮೂಲ ಶೀರ್ಷಿಕೆ ಅಂಬರೀಶ್ ಅವರದೇ ಆಗಿರುವುದರಿಂದ ಆಡಿಯೋ ಬಿಡುಗಡೆಗೆ ಅವರೇ ಸೂಕ್ತ ಎಂದೆನಿಸಿತು. ಅಂಬಿ ಅವರ 'ಚಕ್ರವ್ಯೂಹ' ಸಿನಿಮಾ 1983 ರಲ್ಲಿ ಬಿಡುಗಡೆಯಾಗಿತ್ತು. ಎಂದು ಲೋಹಿತ್ ನುಡಿದಿದ್ದಾರೆ.[ಅಪ್ಪು 'ಚಕ್ರವ್ಯೂಹಕ್ಕೆ' ಕಾಜಲ್ ಸಖತ್ತಾಗಿ ಹಾಡಿದ್ರು]

  ಹುಟ್ಟುಹಬ್ಬಕ್ಕೆ ಆಡಿಯೋ ಉಡುಗೊರೆ

  ಹುಟ್ಟುಹಬ್ಬಕ್ಕೆ ಆಡಿಯೋ ಉಡುಗೊರೆ

  ಆಡಿಯೋ ಮತ್ತು ಟ್ರೈಲರ್ ಬಿಡುಗಡೆ ಸಮಾರಂಭದ ಜೊತೆಗೆ ಪುನೀತ್ ರಾಜ್ ಕುಮಾರ್ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಸಾರ್ವಜನಿಕರು ಹಾಗೂ ಅಭಿಮಾನಿಗಳು ಡಬಲ್ ಸಂಭ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಪ್ಪು ಅವರು ತಮ್ಮ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಚಿತ್ರದ ಟ್ರೈಲರ್ ಮತ್ತು ಹಾಡುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

  ತಮನ್ ಮ್ಯೂಸಿಕ್

  ತಮನ್ ಮ್ಯೂಸಿಕ್

  'ಎಂಗೆಯುಮ್ ಎಪ್ಪೋದುಂ' ಚಿತ್ರದ ಖ್ಯಾತಿಯ ತಮಿಳು ನಿರ್ದೇಶಕ ಎಮ್.ಸರವಣನ್ ಆಕ್ಷನ್-ಕಟ್ ಹೇಳಿರುವ 'ಚಕ್ರವ್ಯೂಹ' ಚಿತ್ರಕ್ಕೆ ಸಂಗೀತ ನಿರ್ದೇಶಕ ಎಸ್.ಎಸ್ ತಮನ್ ಅವರು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

  'ಗೆಳೆಯಾ ಗೆಳೆಯಾ' ಸೂಪರ್ ಹಿಟ್

  'ಗೆಳೆಯಾ ಗೆಳೆಯಾ' ಸೂಪರ್ ಹಿಟ್

  ಈಗಾಗಲೇ ಜ್ಯೂನಿಯರ್ ಎನ್.ಟಿ ಆರ್ ಹಾಡಿರುವ 'ಗೆಳೆಯಾ ಗೆಳೆಯಾ' ಹಾಡು ಬಿಡುಗಡೆ ಆಗಿದ್ದು, ರಿಲೀಸ್ ಆದ ಕೇವಲ 20 ಘಂಟೆಗಳಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಒಟ್ನಲ್ಲಿ 'ಗೆಳೆಯಾ' ಹಾಡು ಸೂಪರ್ ಹಿಟ್ ಆಗುವುದರ ಜೊತೆಗೆ ರೆಕಾರ್ಡ್ ಬ್ರೇಕ್ ಮಾಡಿದೆ.

  English summary
  The makers of Kannada Movie 'Chakravyuha' have finally set the audio launch date on Puneeth Rajkumar’s birthday that falls on March 17. Interestingly, the audio launch will be graced by none other than our very own star, Ambareesh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X