»   » ಪವರ್ ಸ್ಟಾರ್ ಅಪ್ಪು ಹುಟ್ಟುಹಬ್ಬಕ್ಕೆ 'ಚಕ್ರವ್ಯೂಹ' ಉಡುಗೊರೆ

ಪವರ್ ಸ್ಟಾರ್ ಅಪ್ಪು ಹುಟ್ಟುಹಬ್ಬಕ್ಕೆ 'ಚಕ್ರವ್ಯೂಹ' ಉಡುಗೊರೆ

Posted By:
Subscribe to Filmibeat Kannada

ಪುನೀತ್ ರಾಜ್ ಕುಮಾರ್ ಮತ್ತು ರಚಿತಾ ರಾಮ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಬಿಗ್ ಬಜೆಟ್ ನ ಬಹುನಿರೀಕ್ಷಿತ ಸಿನಿಮಾ 'ಚಕ್ರವ್ಯೂಹ' ಪೊಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಮಾರ್ಚ್ 17 ರಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬದಂದು ಅದ್ಧೂರಿಯಾಗಿ ತೆರೆ ಕಾಣಲಿದೆ.

ಈ ಮೊದಲು ಸಿನಿಮಾ ಫೆಬ್ರವರಿ ತಿಂಗಳಿನಲ್ಲಿ ತೆರೆ ಕಾಣಲಿದೆ ಎಂದು ಸುದ್ದಿಯಾಗಿತ್ತು. ಆದರೆ ಇದೀಗ ಮಾರ್ಚ್ ತಿಂಗಳಿನಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಬರ್ತ್ ಡೇ ದಿನ ಮಾರ್ಚ್ 17 ರಂದು ಬಿಡುಗಡೆ ಮಾಡಿ ಅವರಿಗೆ ಹುಟ್ಟುಹಬ್ಬದ ಉಡುಗೊರೆಯಾಗಿ ನೀಡಲು ಚಿತ್ರತಂಡ ನಿರ್ಧರಿಸಿದೆ.[ಪೋರ್ಚುಗಲ್ ಗೆ ಹಾರಿದ ಪುನೀತ್-ರಚಿತಾ ರಾಮ್!]

Kannada Movie 'Chakravyuha' release gift for Puneeth birthday

ಈಗಾಗಲೇ ಪೋರ್ಚುಗೀಸ್ ನಲ್ಲಿ ಚಿತ್ರದ ಹಾಡುಗಳನ್ನು ಶೂಟ್ ಮಾಡಿರುವ ಚಿತ್ರತಂಡ ಸಿನಿಮಾದ ಪ್ರಮುಖ ಭಾಗವನ್ನು ಮುಗಿಸಿದೆ. ತಮಿಳು ನಿರ್ದೇಶಕ ಎಮ್.ಸರವಣನ್ ಆಕ್ಷನ್-ಕಟ್ ಹೇಳಿರುವ ಈ ಸಿನಿಮಾಗೆ ನಿರ್ಮಾಪಕ ಲೋಹಿತ್ ಅವರು ಬಂಡವಾಳ ಹೂಡಿದ್ದಾರೆ.[ಅಪ್ಪು 'ಚಕ್ರವ್ಯೂಹಕ್ಕೆ' ಕಾಜಲ್ ಸಖತ್ತಾಗಿ ಹಾಡಿದ್ರು]

ಬಹುತೇಕ ಎಲ್ಲಾ ಶೂಟಿಂಗ್ ಮುಗಿಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ಸ್ ಕಾರ್ಯದತ್ತ ಕಣ್ಣು ಹಾಯಿಸಿದೆ. ತಮಿಳು ನಟ ಅರುಣ್ ವಿಜಯ್ ಈ ಚಿತ್ರದಲ್ಲಿ ಖಳನಟನಾಗಿ ಮಿಂಚುತ್ತಿದ್ದು, ಎಸ್‌ ಎಸ್ ತಮನ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.[ಪವರ್ ಸ್ಟಾರ್ ಚಿತ್ರಕ್ಕೆ ಧ್ವನಿ ನೀಡಿದ ಯಂಗ್ ಟೈಗರ್ NTR]

Kannada Movie 'Chakravyuha' release gift for Puneeth birthday

ತೆಲುಗು ನಟ ಜ್ಯೂನಿಯರ್ ಎನ್.ಟಿ ಆರ್ ಮತ್ತು ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್ ಅಗರ್ ವಾಲಾ ಈ ಸಿನಿಮಾದ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಒಟ್ನಲ್ಲಿ ಹಲವಾರು ವಿಶೇಷತೆಗಳನ್ನು ಒಳಗೊಂಡಿರುವ ಪುನೀತ್ ಅವರ ಈ ಸಿನಿಮಾ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ.

English summary
Puneeth starrer 'Chakravyuha' which is in the final stages of shooting is likely to be released on during Puneeth Rajkumars Birthday in March. Earlier there was a news that movie will be released in February. Kannada Actor Puneeth Rajkumar, Kannada Actress Rachita Ram in the lead role. The movie is directed by M Saravanan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada