»   » 'ಚೌಕ' ಚಿತ್ರದ ನಾಲ್ವರು ಹೀರೋಯಿನ್ ಗಳು 'ಈ' ನಟಿಯರೇ.!

'ಚೌಕ' ಚಿತ್ರದ ನಾಲ್ವರು ಹೀರೋಯಿನ್ ಗಳು 'ಈ' ನಟಿಯರೇ.!

Posted By:
Subscribe to Filmibeat Kannada

ಕುಳ್ಳ ದ್ವಾರಕೀಶ್ ನಿರ್ಮಾಣದ 50ನೇ ಸಿನಿಮಾ 'ಚೌಕ' ಹಲವಾರು ವಿಶೇಷತೆಗಳಿಂದ ಸದ್ದು-ಸುದ್ದಿ ಮಾಡುತ್ತಿದೆ.

ಖಳನಟ ದಿವಂಗತ ಸುಧೀರ್ ಪುತ್ರ ತರುಣ್ ಸುಧೀರ್ ಆಕ್ಷನ್ ಕಟ್ ಹೇಳುತ್ತಿರುವ 'ಚೌಕ' ಚಿತ್ರದಲ್ಲಿ ಲವ್ಲಿ ಸ್ಟಾರ್ ಪ್ರೇಮ್, ವಿಜಯ್ ರಾಘವೇಂದ್ರ, ದಿಗಂತ್, ಪ್ರಜ್ವಲ್ ದೇವರಾಜ್ ಮುಖ್ಯ ಭೂಮಿಕೆಯಲ್ಲಿ ಇರುವುದು ನಿಮಗೆ ಗೊತ್ತಿದೆ. [ದ್ವಾರಕೀಶ್ 'ಚೌಕ'ದ ಪ್ರತಿಭೆಗಳತ್ತ ಒಂದು ಇಣುಕು ನೋಟ]


ಇವರಿಗೆಲ್ಲಾ ನಾಯಕಿಯರು ಯಾರು ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. 'ಚೌಕ' ಚಿತ್ರದ ನಾಲ್ವರು ಹೀರೋಯಿನ್ ಗಳ ಯಾರು ಎಂಬ ಕುತೂಹಲ ನಿಮಗೆ ಇದ್ದರೆ, ಕೆಳಗಿರುವ ಫೋಟೋ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ.....


ನಟಿ ಪ್ರಿಯಾಮಣಿ

'ಚೌಕ' ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿ ಪ್ರಿಯಾಮಣಿ ಅಭಿನಯಿಸಿದ್ದಾರೆ. ಈ ಹಿಂದೆ ದ್ವಾರಕೀಶ್ ನಿರ್ಮಾಣದ 'ವಿಷ್ಣುವರ್ಧನ' ಮತ್ತು 'ಚಾರುಲತಾ' ಚಿತ್ರಗಳಲ್ಲಿ ಪ್ರಿಯಾಮಣಿ ನಟಿಸಿದ್ದರು.


ದೀಪಾ ಸನ್ನಿಧಿ

ನಟ ಪ್ರಜ್ವಲ್ ದೇವರಾಜ್ ಗೆ ಜೋಡಿಯಾಗಿ 'ಚೌಕ' ಚಿತ್ರದಲ್ಲಿ ದೀಪಾ ಸನ್ನಿಧಿ ನಟಿಸುತ್ತಿದ್ದಾರೆ. ['ಚೌಕ'ದ ಮೊಹಮ್ಮದ್ ಅನ್ವರ್ ಗೆ 'ಬೇಗಂ' ಆಗ್ತಾರಾ ದೀಪಾ ಸನ್ನಿಧಿ?]


ಐಂದ್ರಿತಾ ರೇ

'ಚೌಕ' ಚಿತ್ರದಲ್ಲಿ ಲವ್ಲಿ ಸ್ಟಾರ್ ಪ್ರೇಮ್ ಗೆ ನಟಿ ಐಂದ್ರಿತಾ ರೇ ಜೊತೆ ಆಗಿದ್ದಾರೆ.


ಭಾವನಾ ಮೆನನ್

ಮಲ್ಲು ಕುಟ್ಟಿ ಭಾವನಾ ಮೆನನ್ ಕೂಡ 'ಚೌಕ' ಚಿತ್ರದ ಪ್ರಮುಖ ಪಾತ್ರಧಾರಿ.


ಬಿಡುಗಡೆ ಯಾವಾಗ?

'ಚೌಕ' ಚಿತ್ರದ ಬಿಡುಗಡೆ ದಿನಾಂಕ ಇನ್ನೂ ನಿಗದಿ ಆಗಿಲ್ಲ.


English summary
Kannada Actress Priyamani, Deepa Sannidhi, Aindritha Ray and Bhavana Menon are playing lead in Kannada Actor, Producer Dwarakish's 50th film as Producer 'Chauka'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada