ಶೋಕಿಗಿಂತ ಪ್ರೀತಿನೇ ದೊಡ್ದು ಅಂತಿದೆ 'ಚಿಲ್ರೆ ಶೋಕಿ'

By Rajendra

'ಸಿಲ್ಕ್ ಸಖತ್ ಹಾಟ್' ಚಿತ್ರದ ಮೂಲಕ ಬೆಳ್ಳಿಪರದೆಗೆ ಅಡಿಯಿಟ್ಟಿದ್ದ ಅಕ್ಷಯ್ ನಾಯಕ ನಟನಾಗಿರುವ ಎರಡನೇ ಚಿತ್ರ 'ಚಿಲ್ರೆ ಶೋಕಿ'. ಈ ಚಿತ್ರ ಈಗ ಬಿಡುಗಡೆಗೆ ಸಿದ್ಧವಾಗಿದೆ. ಶೋಕಿಗಿಂತ ಪ್ರೀತೀನೇ ದೊಡ್ಡದು ಎನ್ನುವ ಎಳೆಯೊಂದನ್ನಿಟ್ಟುಕೊಂಡು ಯುವ ನಿರ್ದೇಶಕ ಜಾನ್‍ಪದ 'ಚಿಲ್ರೆ ಶೋಕಿ' ಎಂಬ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

ಎಸ್. ನಾರಾಯಣ್, ಶ್ರೀನಿವಾಸ್ ಕೌಶಿಕ್, ಜಿಮ, ಮೂರ್ತಿ ಸೇರಿ ಹಲವಾರು ನಿರ್ದೇಶಕರ ಬಳಿ ಕೆಲಸ ಮಾಡಿರುವ ಜಾನ್ಪದ ನಿರ್ದೇಶನದ ಮೊದಲ ಚಿತ್ರವಿದು. ಶ್ರೀ ನಿಮಿಷಾಂಬ ಕಮ್ಯುನಿಕೇಷನ್ ಸಂಸ್ಥೆಯಲ್ಲಿ ನಿರ್ಮಾಣವಾಗುತ್ತಿರುವ ಚಿಲ್ರೆ ಶೋಕಿ ಚಿತ್ರದಲ್ಲಿ ಲವ್, ಅಕ್ಷನ್, ಕಾಮಿಡಿ ಹಾಗೂ ಸೆಂಟಿಮೆಂಟ್ ಕಥಾವಸ್ತುವುಳ್ಳ ಈ ಚಿತ್ರದಲ್ಲಿ 4 ಹಾಡುಗಳಿದ್ದು ಸದ್ಯದಲ್ಲೇ ಈ ಹಾಡುಗಳ ಧ್ವನಿಸುರುಳಿ ಬಿಡುಗಡೆಯಾಗಲಿದೆ. [ಸೆನ್ಸಾರ್ ನಲ್ಲಿ ಕ್ಲೀನ್ ಸರ್ಟಿಫಿಕೇಟ್ ಪಡೆದ 'ಚಿಲ್ರೆ ಶೋಕಿ']

Kannada movie Chilre Shoki slated for release in May

ಮೇ ತಿಂಗಳ ಕೊನೆಯ ವಾರದಲ್ಲಿ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ. ಜಾನ್ಪದ ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಶ್ಯಾಂ ಸಿಂಧನೂರ್ ಛಾಯಾಗ್ರಹಣ, ಕಿರಣ್ ಡ್ಯಾನಿಯಲ್ ಸಂಗೀತ, ಮಂಜು ಬಗಾಡೆ ಕಥೆ ಚಿತ್ರಕ್ಕಿದೆ.

ಕೌರವ ವೆಂಕಟೇಶ್, ಅಲ್ಟಿಮೇಟ್ ಶಿವು ಸಾಹಸ, ಜಗದೀಶ್ ಸಂಕಲನ, ಪ್ರಸಾದ್ ನೃತ್ಯ ನಿರ್ದೇಶನ, ಜಾನಪದ ಸಾಹಿತ್ಯ ಜಿ.ಮೂರ್ತಿ ಕಲಾ ನಿರ್ದೇಶನವಿದೆ. ಈ ಚಿತ್ರದಲ್ಲಿ ಅಕ್ಷಯ್, ಸಂಜನಾ ಪ್ರಕಾಶ್, ಮದನ್, ಅವಿನಾಶ್, ಸತ್ಯಜಿತ್ ಸಂಗೀತ, ಯತಿರಾಜ್ ಎಂ.ಆರ್.ರಘುವೀರ್ ಗಣೇಶ್ ರಾವ್, ಅಶ್ವಿನ್, ರೋಹಿತ್, ಪ್ರಜ್ವಲ್ ತಾರಾಬಳಗದಲ್ಲಿದ್ದಾರೆ. (ಫಿಲ್ಮಿಬೀಟ್ ಕನ್ನಡ)

More from Filmibeat

English summary
Kannada movie Chilre Shoki cleares censor formalities and got U certificate from regional censor board. Silk Sakkat Hot fame Akshay lead movie is the mixture of love, comedy, action directed by Janpada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X