For Quick Alerts
  ALLOW NOTIFICATIONS  
  For Daily Alerts

  'ಸಿನಿಮಾ ಮೈ ಡಾರ್ಲಿಂಗ್' ಎನ್ನುತ್ತಿದ್ದಾರೆ ನಿರೂಪಕ ಗೌರೀಶ್ ಅಕ್ಕಿ

  By ಜಯಕುಮಾರ್ ದೇಸಾಯಿ, ರಾಯಚೂರು
  |

  ಖ್ಯಾತ ಕನ್ನಡ ಸುದ್ದಿ ವಾಹಿನಿಗಳಾದ ಟಿ.ವಿ9 ಕನ್ನಡ, ಸುವರ್ಣ ನ್ಯೂಸ್ ಚಾನೆಲ್ ಗಳಲ್ಲಿ ನಿರೂಪಕನಾಗಿದ್ದ ಗೌರೀಶ್ ಅಕ್ಕಿ ಅವರು ಕಥೆ-ಚಿತ್ರಕಥೆ ಬರೆದು ಇದೇ ಮೊದಲ ಬಾರಿಗೆ ನಿರ್ದೇಶನ ಮಾಡಿರುವ 'ಸಿನಿಮಾ ಮೈ ಡಾರ್ಲಿಂಗ್' ಸಿನಿಮಾ ಮುಂದಿನ ವಾರ ಇಡೀ ರಾಜ್ಯಾದ್ಯಂತ ಭರ್ಜರಿಯಾಗಿ ತೆರೆ ಕಾಣುತ್ತಿದೆ.

  ಮಾರ್ಚ್ 25 ರಂದು ತೆರೆ ಕಾಣುತ್ತಿರುವ 'ಸಿನಿಮಾ ಮೈ ಡಾರ್ಲಿಂಗ್' ಚಿತ್ರದಲ್ಲಿ ಎಲ್ಲಾ ಹೊಸಬರಿದ್ದು, ಕನ್ನಡ ಚಿತ್ರರಂಗಕ್ಕೆ ಹೊಸದಾಗಿ ಕಾಲಿಟ್ಟಿರುವ ಉತ್ತರ ಕರ್ನಾಟಕದ ಯುವ ತಂಡಕ್ಕೆ ಹರಸುವಂತೆ ಪತ್ರಕರ್ತ ಕಮ್ ಚಿತ್ರದ ನಿರ್ದೇಶಕ ಗೌರೀಶ್ ಅಕ್ಕಿ ಅವರು ತಿಳಿಸಿದ್ದಾರೆ.[ಸಿನಿಮಾ ಮೈ ಡಾರ್ಲಿಂಗ್ ಗೆ ಟ್ಯಾಲೆಂಟ್ ಹುಡುಕಾಟ]

  ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ 'ಸಿನಿಮಾ ಮೈ ಡಾರ್ಲಿಂಗ್' ಚಿತ್ರ ತಮ್ಮ ನಿರ್ದೇಶನದ ಮೊದಲ ಚಿತ್ರವಾಗಿದೆ. ಈ ಹಿಂದೆ 'ಕೆಂಗುಲಾಬಿ' ಚಿತ್ರದಲ್ಲಿ ಪಾತ್ರ ನಿರ್ವಹಿಸಿದ್ದು, ಈ ಬಾರಿ ಸಿನಿಮಾದ ನಿರ್ದೇಶನದ ಹೊಣೆ ಹೊತ್ತಿದ್ದೇನೆ. ಕನ್ನಡ ಸಿನಿ ರಸಿಕರು ಚಿತ್ರವನ್ನು ವೀಕ್ಷಿಸಿ ಹೊಸಬರನ್ನು ಪ್ರೋತ್ಸಾಹಿಸಬೇಕೆಂದು ಗೌರೀಶ್ ಅಕ್ಕಿ ಅವರು ಮನವಿ ಮಾಡಿದರು.

  'ಇದೊಂದು ಸದಭಿರುಚಿಯುಳ್ಳ ಚಿತ್ರವಾಗಿದ್ದು ಉತ್ತರ ಕರ್ನಾಟಕದ ಯುವಕರು ಚಿತ್ರರಂಗ ಪ್ರವೇಶಿಸಲು ಗಾಂಧಿನಗರಕ್ಕೆ ಕಾಲಿಡುವ ಕುರಿತಂತೆ ಚಿತ್ರದ ಕಥಾ ಹಂದರವಿದ್ದು ಚಿತ್ರ ರಂಗಕ್ಕೆ ಕಾಲಿಡುವ ನವ ಪ್ರತಿಭೆಗಳಿಗೆ ಉತ್ತಮ ಸಂದೇಶ ನೀಡುತ್ತದೆ ಎಂದರು'.

  ಚಿತ್ರದಲ್ಲಿ ರಾಯಚೂರು ಮೂಲದ ಮನೋಜವಂ ಗಲಗಲಿ, ಶಶಿ ದೇಶಪಾಂಡೆ, ಶ್ರೇಯಾ, ಸಂಜನಾ, ರಾಜು ತಾಳಿಕೋಟೆ, ಸುಚೇಂದ್ರ ಪ್ರಸಾದ್ ಮುಂತಾದ ತಾರಾ ಬಳಗವಿದ್ದು, ನಾನು ಕೂಡ ಚಿಕ್ಕ ಪಾತ್ರ ಮಾಡಿದ್ದೇನೆ ಎಂದು ಗೌರೀಶ್ ಅಕ್ಕಿ ಅವರು ತಿಳಿಸಿದರು.

  ಸುಮರು 1.65 ಕೋಟಿ ರೂಪಾಯಿ ವೆಚ್ಚದಲ್ಲಿ ಚಿತ್ರ ನಿರ್ಮಾಣವಾಗಿದ್ದು, ನಿರ್ಮಾಪಕರಾದ ಮಹಾಂತೇಶ, ಶ್ರೀನಿವಾಸ್ ಹಾಗೂ ಮುನಿರಾಜು ಎಂಬುವವರು ಚಿತ್ರಕ್ಕೆ ಬಂಡವಾಳ ಹೂಡಿದ್ದು ಹುಬ್ಬಳ್ಳಿ, ಧಾರವಾಡ, ಬೆಂಗಳೂರು ಸೇರಿದಂತೆ ಅನೇಕ ತಾಣಗಳಲ್ಲಿ ಚಿತ್ರೀಕರಣಗೊಂಡಿದ್ದು, ರಾಜ್ಯಾದ್ಯಂತ ಸುಮಾರು 75 ಚಿತ್ರಮಂದಿರಗಳಲ್ಲಿ ಏಕ ಕಾಲಕ್ಕೆ ಬಿಡುಗಡೆ ಹೊಂದಲಿದೆ.

  English summary
  Kannada Movie 'Cinema My Darling' all set to release in March 25. The movie is directed by Gaurish Akki.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X