For Quick Alerts
  ALLOW NOTIFICATIONS  
  For Daily Alerts

  'ಕಾಲೇಜ್ ಕುಮಾರ್'ನ ಚಿತ್ರೀಕರಣ ಮುಕ್ತಾಯ

  By Bharath Kumar
  |

  ಅಲೆಮಾರಿ ಸಂತು ನಿರ್ದೇಶನ ಮಾಡುತ್ತಿರುವ 'ಕಾಲೇಜ್ ಕುಮಾರ್' ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಮೇ 1 ರಂದು ಕಿಚ್ಚ ಸುದೀಪ್ ಚಾಲನೆ ನೀಡಿದ್ದ ಕಾಲೇಜ್ ಕುಮಾರ್ ಸತತ 50 ದಿನಗಳ ಕಾಲ ಯಶಸ್ವಿಯಾಗಿ ಶೂಟಿಂಗ್ ಮುಗಿಸಿದೆ.

  ವಿಲನ್ ರವಿಶಂಕರ್ ತುಂಬಾ ಬದಲಾಗೋದ್ರು....!ವಿಲನ್ ರವಿಶಂಕರ್ ತುಂಬಾ ಬದಲಾಗೋದ್ರು....!

  ಬೆಂಗಳೂರಿನ ಸುತ್ತಾಮುತ್ತಾ ಒಂದೇ ಶೆಡ್ಯೂಲ್ ನಲ್ಲಿ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಈಗ ಪೋಸ್ಟ್ ಪ್ರೊಡಕ್ಷನ್ ಹಂತಕ್ಕೆ ತಲುಪಿದೆ. ಸಂತು ನಿರ್ದೇಶನದ ಈ ಚಿತ್ರದಲ್ಲಿ 'ಕೆಂಡಸಂಪಿಗೆ' ಖ್ಯಾತಿಯ ವಿಕ್ಕಿ ನಾಯಕನಾಗಿದ್ದು, 'ಕಿರಿಕ್ ಪಾರ್ಟಿ' ಖ್ಯಾತಿಯ ಸಂಯುಕ್ತ ಹೆಗಡೆ ನಾಯಕಿ ಆಗಿ ಅಭಿನಯಿಸಿದ್ದಾರೆ.

  ಅಂದ್ಹಾಗೆ, 'ಕಾಲೇಜ್ ಕುಮಾರ್' ಸಿನಿಮಾ ಒಬ್ಬ ಕಾಲೇಜ್ ಹುಡುಗನ ಲೈಫ್ ಸ್ಟೋರಿಯಂತೆ. ಟೈಟಲ್ ಹೇಳುವ ಹಾಗೆ ಪಕ್ಕಾ ಯೂತ್ ಓರಿಯೆಂಟೆಡ್ ಚಿತ್ರವಾಗಿದ್ದು, ಮಿಡಲ್ ಕ್ಲಾಸ್ ಮನೆಯ ಸೆಂಟಿಮೆಂಟ್ ಸ್ಟೋರಿ ಹೊಂದಿದೆಯಂತೆ. ವಿಲನ್ ರವಿಶಂಕರ್ ಹಾಗೂ ನಟಿ ಶ್ರುತಿ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಚಿತ್ರದಲ್ಲಿ ಸಾಧುಕೋಕಿಲಾ ಕೂಡ ಹಾಸ್ಯ ಪಾತ್ರದಲ್ಲಿ ಮಿಂಚಿದ್ದಾರೆ.

  'ಕಾಲೇಜ್ ಕುಮಾರ್'ನಿಗೆ ಕ್ಲಾಪ್ ಮಾಡಿದ ಕಿಚ್ಚ ಸುದೀಪ್'ಕಾಲೇಜ್ ಕುಮಾರ್'ನಿಗೆ ಕ್ಲಾಪ್ ಮಾಡಿದ ಕಿಚ್ಚ ಸುದೀಪ್

  Kannada Movie College Kumar Shooting Complete

  ಈ ಹಿಂದೆ 'ಜಾನ್ ಜಾನಿ ಜನಾರ್ಧನ್' ಚಿತ್ರವನ್ನ ನಿರ್ಮಾಣ ಮಾಡಿದ್ದ ಎಲ್.ಪದ್ಮನಾಭ ಅವರು, ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಅರ್ಜುನ್ ಜನ್ಯ ಅವರು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

  English summary
  Director Santhu's new film 'College Kumar' which was launched on May 01st has been completed on Saturday evening in Bangalore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X