»   » ಈ ವಾರ ಥಿಯೇಟರ್ ಅಂಗಳದಲ್ಲಿ ಪ್ರೇಕ್ಷಕರಿಗಾಗಿ 'ಕೋಮಾ'

ಈ ವಾರ ಥಿಯೇಟರ್ ಅಂಗಳದಲ್ಲಿ ಪ್ರೇಕ್ಷಕರಿಗಾಗಿ 'ಕೋಮಾ'

Posted By:
Subscribe to Filmibeat Kannada

''ಕೋಮಾ..ಕೋಮಾ..ಕೋಮಾ...ಪ್ರೇಮಾ...!'' ಎಂಬ ಪ್ರಖ್ಯಾತ ಹಾಡಿನ 'ಕೋಮಾ' ಪದವನ್ನೇ ಶೀರ್ಷಿಕೆಯಾಗಿಟ್ಟುಕೊಂಡು, ಐಟಿ ಹುಡುಗರ ದಂಡು, ಮಾಡಿರುವ ವಿಭಿನ್ನ ಪ್ರಯೋಗ ನಾಳೆ ಬೆಳ್ಳಿತೆರೆ ಮೇಲೆ ವಿಜೃಂಭಿಸಲಿದೆ.

ಒಂದು ವಿಭಿನ್ನವಾದ ಅನುಭವವನ್ನು ಸಿನಿರಸಿಕರಿಗೆ ಕೊಡುವ ಯೋಜನೆ ಕೋಮಾ' ತಂಡದ್ದು. ಅದಕ್ಕಾಗಿಯೇ ನಿರ್ದೇಶಕರಾದ ರವಿ-ಚೇತನ್ ಒಳಗೊಂಡ ತಂಡ, ಹತ್ತಾರು ದಿನ, ಇಡೀ ಕರ್ನಾಟಕವನ್ನು ಸುತ್ತಿ ರಮಣೀಯ ಸ್ಥಳಗಳಲ್ಲಿ ಶೂಟಿಂಗ್ ಮಾಡಿದೆ.

ಗುರುಪ್ರಸಾದ್, ಎಸ್.ಕೆ.ಭಗವಾನ್, ಸುಚೇಂದ್ರ ಪ್ರಸಾದ್, ಬಿ.ಸುರೇಶ್, ಶೃತಿ, ಕಾರ್ತಿಕ್ 'ಕೋಮಾ' ಚಿತ್ರದ ಪ್ರಮುಖ ಪಾತ್ರಧಾರಿಗಳು.

Kannada Movie 'Coma' is all set to release on May 27th

ಈಗಾಗಲೇ ಬಿಡುಗಡೆ ಆಗಿರುವ ಎರಡೂವರೇ ನಿಮಿಷದ 'ಕೋಮಾ' ಟ್ರೇಲರ್ ನಲ್ಲಿ, ನಿರ್ದೇಶಕರಾದ ಗುರುಪ್ರಸಾದ್ ಹಾಗೂ ದೊರೆ ಭಗವಾನ್ ಅವರ ಮಧ್ಯೆ ನಡೆಯುವ ಜುಗಲ್ಬಂದಿಯನ್ನ ವಿಭಿನ್ನವಾಗಿ ತೋರಿಸಲಾಗಿದೆ. ಯೂಟ್ಯೂಬ್ ನಲ್ಲಿ 'ಕೋಮಾ' ಟ್ರೈಲರ್ ಹಿಟ್ ಆಗಿದೆ.

ಕನ್ನಡದ ಕೆಲವೇ ಕೆಲವು ರ್ಯಾಪರ್ ಗಳಲ್ಲಿ ಒಬ್ಬರಾದ, ಕಾರ್ತಿಕ್ ಗುಬ್ಬಿ ಹಾಡಿರುವ ರ್ಯಾಪ್ ಹಾಡನ್ನು 'ಕೋಮಾ' ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ.

ಲಕ್ಷಾಂತರ ರೂಪಾಯಿ ಸಂಬಳ ಬರುತ್ತಿದ್ದರೂ, ಅದನ್ನೆಲ್ಲಾ ಪಕ್ಕಕ್ಕಿಟ್ಟು, ಐ.ಟಿ. ಹುಡುಗರು ಮಾಡಿರುವ ಹೊಸ ಪ್ರಯತ್ನ 'ಕೋಮಾ' ನಾಳೆ ನಿಮ್ಮ ಮುಂದೆ ಬರುತ್ತಿದೆ. ಉತ್ಸಾಹಿ ಹುಡುಗರಿಗೆ ಬೆನ್ನುತಟ್ಟುವ ಜವಾಬ್ದಾರಿ ನಿಮ್ಮದು.

ಈ ವಾರ ಥಿಯೇಟರ್ ಅಂಗಳದಲ್ಲಿ ಪ್ರೇಕ್ಷಕರಿಗಾಗಿ 'ಕೋಮಾ'

ಈ ವಾರ ಥಿಯೇಟರ್ ಅಂಗಳದಲ್ಲಿ ಪ್ರೇಕ್ಷಕರಿಗಾಗಿ 'ಕೋಮಾ'

-
-
-
-
-
-
-
-
English summary
Kannada Movie 'Coma' is all set to release on May 27th. 'Coma' features Guruprasad, S.K.Bhagwan in the prominent role. The movie is directed by Ravi and Chethan.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada