ಟ್ರೈಲರ್: ಕ್ರೌರ್ಯದ ಪ್ರತಿರೂಪವಾಗಿ ಬರ್ತಿದೆ 'ದಂಡುಪಾಳ್ಯ-3'
'ದಂಡುಪಾಳ್ಯ' ಹಂತಕರು ಅಮಾಯಕರು, ಅಸಹಾಯಕರು, ಏನು ತಪ್ಪು ಮಾಡಿಲ್ಲ ಎಂದು ಬಿಂಬಿಸಿದ್ದ 'ದಂಡುಪಾಳ್ಯ-2' ಚಿತ್ರಕ್ಕೆ ವಿರುದ್ಧವಾಗಿ ಮೂರನೇ ಭಾಗ ಸಜ್ಜಾಗಿರುವಂತೆ ಕಾಣುತ್ತಿದೆ. ಅದಕ್ಕೆ ತಾಜಾ ಉದಾಹರಣೆ 'ದಂಡುಪಾಳ್ಯ-3' ಟ್ರೈಲರ್.
ಹೌದು, 'ದಂಡುಪಾಳ್ಯ-2' ಚಿತ್ರದ ಮುಂದುವರೆದ ಭಾಗ ಸಿದ್ದವಾಗಿದ್ದು, ಬಿಡುಗಡೆಗೆ ತಯಾರಾಗಿದೆ. ಮೊದಲ ಭಾಗದಲ್ಲಿ ತೋರಿಸಿದ್ದ ಕ್ರೌರ್ಯ, ರಕ್ತಪಾತದೊಂದಿಗೆ ಮೂರನೇ ಭಾಗ ಬರ್ತಿದೆ. ಸದ್ಯ ರಿಲೀಸ್ ಆಗಿರುವ ಟ್ರೈಲರ್ ನಲ್ಲಿ ಅದೇ ಕೊಲೆ, ಅತ್ಯಾಚಾರ, ಹಿಂಸೆಯ ದೃಶ್ಯಗಳು ಭಯ ಹುಟ್ಟಿಸುತ್ತಿದೆ.

ಮೊದಲೆರಡು ಭಾಗಗಳಲ್ಲಿ ಮನರಂಜನೆಯ ಜೊತೆ ನೈಜಕಥೆ ಹೇಳಿದ್ದ ಚಿತ್ರತಂಡ ಈಗ ಮೂರನೇ ಭಾಗದಲ್ಲಿ ಕಥೆಗೆ ಅಂತ್ಯವಾಡಲು ಮುಂದಾಗಿದೆ. ಹೀಗಾಗಿ, 'ದಂಡುಪಾಳ್ಯ' ಸರಣೆಯ ಕೊನೆ ಹೇಗಿರಲಿದೆ ಎಂಬ ಕುತೂಹಲ ಪ್ರೇಕ್ಷಕರದ್ದು.
ನಟಿ ಪೂಜಾ ಗಾಂಧಿ, ರವಿಕಾಳೆ, ಮಕರಂದ್ ದೇಶಪಾಂಡೆ, ರವಿಶಂಕರ್, ಸಂಜನಾ ಸೇರಿದಂತೆ ಹಲವರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಶ್ರೀನಿವಾಸು ರಾಜು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ವೆಂಕಟ್ ನಿರ್ಮಾಣ ಮಾಡಿದ್ದಾರೆ. ಅಂದ್ಹಾಗೆ, ಡಿಸೆಂಬರ್ ಕೊನೆ ಅಥವಾ ಜನವರಿ ತಿಂಗಳಿನಲ್ಲಿ ಈ ಸಿನಿಮಾ ತೆರೆಗೆ ಬರಲಿದೆ.
ಟ್ರೈಲರ್ ನೋಡಲು ಈ ಲಿಂಕ್ ಕ್ಲಿಕ್ ಮಾಡಿ....


Click it and Unblock the Notifications











