Dasara Movie: ಕನ್ನಡ 'ದಸರಾ' v/s ತೆಲುಗು 'ದಸರಾ', ಏನಿದು ಟ್ವಿಸ್ಟ್?
ನಟ ನೀನಾಸಂ ಸತೀಶ್ ಮತ್ತು ಶರ್ಮಿಳಾ ಮಾಂಡ್ರೆ 'ದಸರಾ' ಎನ್ನುವ ಟೈಟಲ್ ಅಡಿಯಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಇದು ಅಪ್ಪಟ್ಟ ಕನ್ನಡ ಚಿತ್ರ. ಈ ಸಿನಿಮಾ ಸೆಟ್ಟೇರಿ ಹಲವು ತಿಂಗಳು ಕಳೆದಿದೆ. ಆದರೆ ಈಗ ಇದೇ ಟೈಟಲ್‌ನಲ್ಲಿ ಮತ್ತೊಂದು ಸಿನಿಮಾ ಸೆಟ್ಟೇರಿದೆ. ಒಂದೇ ಟೈಟಲ್‌ನಲ್ಲಿ ಎರಡು ಚಿತ್ರಗಳು ಬರುವ ಹಾಗಿಲ್ಲ. ಹಾಗೆ ಬಂದರೂ ಅದು 10 ವರ್ಷ ಹಳೇ ಟೈಟಲ್ ಮರುಬಳಕೆ ಮಾಡಲು ಅವಕಾಶ ಇದೆ.
ಈಗ ಒಂದು ಸಿನಿಮಾ ರಿಲೀಸ್‌ಗೂ ಮೊದಲೇ ಮತ್ತೊಂದು ಸಿನಿಮಾ ಅದೇ ಟೈಟಲ್‌ನಲ್ಲಿ ಪ್ರಕಟ ಆಗಿದೆ. ಒಂದೇ ಟೈಟಲ್ ಇದ್ದರೆ ಅದರಲ್ಲಿ ಒಂದು ಸಿನಿಮಾ ಮಾತ್ರ ಜನರಿಗೆ ರೀಚ್ ಆಗುವ ಸಾಧ್ಯತೆ ಇರುತ್ತದೆ. ಜೊತೆಗೆ ಜನರಿಗೆ ಗೊಂದಲ ಉಂಟಾಗುವ ಸಾಧ್ಯತೆ ಕೂಡ ಇರುತ್ತದೆ. ಹಾಗಾಗಿ ಈಗ ಈ ಚಿತ್ರಗಳಲ್ಲಿ ಯಾವುದಾದರು ಒಂದು ಸಿನಿಮಾ ಟೈಟಲ್ ಬದಲಿಸುವ ಅನಿವಾರ್ಯತೆ ಎದುರಾಗಬಹುದು.
ಈ ಬಗ್ಗೆ ನಟ ನೀನಾಸಂ ಸತೀಶ್ ಪ್ರತಿಕ್ರಿಯೆ ನೀಡಿದ್ದಾರೆ. ಸಿನಿಮಾ ಟೈಟಲ್ ಬದಲಾವಣೆ ಮಾಡಲು ಸಾಧ್ಯವೇ ಇಲ್ಲ ಎಂದಿದ್ದಾರೆ. ಟೈಟಲ್‌ಗಾಗಿ ಚಿತ್ರ ತಂಡದ ಮುಂದಿನ ನಡೆ ಏನು. ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ. ಮುಂದೆ ಓದಿ....

ಟಾಲಿವುಡ್ ನಾನಿಗೆ ಬೇಕು ಕನ್ನಡ ಟೈಟಲ್!
ಕನ್ನಡದಲ್ಲಿ 'ದಸರಾ' ಎನ್ನುವ ಟೈಟಲ್‌ನಲ್ಲಿ ಸಿನಿಮಾ ಬರುತ್ತಿದೆ. ಈ ಚಿತ್ರದಲ್ಲಿ ನಟ ನೀನಾಸಂ ಸತೀಶ್ ಮತ್ತು ಶರ್ಮಿಳಾ ಮಾಂಡ್ರೆ ಅಭಿನಯಿಸುತ್ತಿದ್ದಾರೆ. ಆದರೆ ಈಗ ತೆಲುಗಿನಲ್ಲಿ ಇದೇ ಟೈಟಲ್‌ನಲ್ಲಿ ಹೊಸದೊಂದು ಸಿನಿಮಾ ಬರ್ತಿದೆ. ನ್ಯಾಚುರಲ್ ಸ್ಟಾರ್ ನಾನಿ 'ದಸರಾ' ಎನ್ನುವ ಟೈಟಲ್ ಅಡಿಯಲ್ಲೇ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ಟೈಟಲ್ ಕನ್ನಡ ಸಿನಿಮಾದ ಟೈಟಲ್ ಒಂದೇ ಮಾದರಿಯಲ್ಲಿದೆ. ಸ್ಪೆಲಿಂಗ್‌ನಲ್ಲಿಯೂ ಯಾವುದೇ ವ್ಯತ್ಯಾಸ ಇಲ್ಲ. ಹಾಗಾಗಿ ಈಗ ಚಿತ್ರ ತಂಡದಲ್ಲಿ ಗೊಂದಲ ಸೃಷ್ಟಿ ಆಗಿದೆ.

ಚಿತ್ರೀಕರಣ ಮುಗಿಸಿರುವ ಕನ್ನಡದ 'ದಸರಾ'!
ಕನ್ನಡದ 'ದಸರಾ' ಚಿತ್ರದ ಚಿತ್ರೀಕರಣ ಈಗಾಗಲೇ ಮುಗಿದು ಬಿಟ್ಟಿದೆ. ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು. ಸದ್ಯದಲ್ಲೇ ಚಿತ್ರದ ಪ್ರಚಾರ ಕಾರ್ಯಗಳು ಕೂಡ ಆರಂಭವಾಗಲಿವೆ. ಮೊದಲು ಟೈಟಲ್ ಇಟ್ಟು ಸಿನಿಮಾ ಲಾಂಚ್ ಮಾಡಿದ್ದು ಕನ್ನಡದ 'ದಸರಾ'. ಹಾಗಾಗಿ ಯಾವುದೇ ಕಾರಣಕ್ಕೂ ಟೈಟಲ್ ಬದಲು ಮಾಡುಲು ಸಾಧ್ಯವೇ ಇಲ್ಲ ಎಂದು ಚಿತ್ರತಂಡ ಫಿಲ್ಮೀ ಬೀಟ್‌ಗೆ ಸ್ಪಷ್ಟ ಪಡಿಸಿದೆ.

ಟೈಟಲ್ ಬಿಡುವ ಮಾತೇ ಇಲ್ಲಎಂದ ಸತೀಶ್!
ಈ ಬಗ್ಗೆ ಮಾತನಾಡಿದ ನಟ ನೀನಾಸಂ ಸತೀಶ್. "ನಮ್ಮ ನಿರ್ಮಾಪಕರು ಚಿತ್ರದ ಟೈಟಲ್‌ಗಾಗಿ ಯಾವ ಹಂತಕ್ಕೆ ಬೇಕಾದರು ಹೋಗಲು ಸಿದ್ಧರಾಗಿದ್ದಾರೆ. ಏನೇ ಬಂದರು ಎದುರಿಸಲು ನಿರ್ಧರಿಸಿದ್ದಾರೆ. ಈ ಬಗ್ಗೆ ಫಿಲ್ಮ್ ಚೇಂಬರ್ ಮೆಟ್ಟಿಲೇರುತ್ತೇವೆ." ಎಂದಿದ್ದಾರೆ. ಜೊತೆಗೆ ಟ್ವೀಟ್ ಮಾಡುವ ಮೂಲಕ 'ದಸರಾ' ಚಿತ್ರದ ಟೈಟಲ್ ಬದಲಾಗುವುದಿಲ್ಲ ಎಂದು ನೀನಾಸಂ ಸತೀಶ್ ಸ್ಪಷ್ಟ ಪಡಿಸಿದ್ದಾರೆ.

ನಾನಿ ಚಿತ್ರದ ಟೈಟಲ್ ಕಥೆಯೇನು?
ನಾನಿ ಅಭಿನಯದ ತೆಲುಗು 'ದಸರಾ' ಪ್ಯಾನ್ ಇಂಡಿಯಾ ಸಿನಿಮಾ. ಹಾಗಾಗಿ ಈ ಚಿತ್ರ ಕನ್ನಡದಲ್ಲೂ ರಿಲೀಸ್ ಆಗಲಿದೆ. ಆದರೆ ಕನ್ನಡದಲ್ಲಿ ಈಗಾಗಲೇ ಒಂದು 'ದಸರಾ' ಹೆಸರಿನ ಚಿತ್ರ ಇರುವ ಕಾರಣಕ್ಕೆ ಕನ್ನಡದಲ್ಲಿ ಮಾತ್ರ ಟೈಟಲ್ ಬದಲಾಗುತ್ತಾ ಎನ್ನುವುದನ್ನು ನೋಡಬೇಕಿದೆ. ಕನ್ನಡ 'ದಸರಾ' ಚಿತ್ರದ ಶೂಟಿಂಗ್ ಮುಗಿದಿದೆ. ಆದರೆ ತೆಲುಗಿನ 'ದಸರಾ' ಫಸ್ಟ್ ಲುಕ್ ಪೋಸ್ಟರ್ ಮಾರ್ಚ್ 20ಕ್ಕೆ ಲಾಂಚ್ ಆಗಿದೆ. ಹಾಗಾಗಿ ಕನ್ನಡ ಚಿತ್ರಕ್ಕೆ ಇದು ವರದಾನ ಆಗ ಬಹುದು.


Click it and Unblock the Notifications











