For Quick Alerts
  ALLOW NOTIFICATIONS  
  For Daily Alerts

  ಈ ವಾರ 'ಡೀಲ್ ರಾಜಾ'ನ ಅಸಲಿ ಆಟ ಶುರು

  By Suneetha
  |

  ಕಾಮಿಡಿ ನಟ ಕೋಮಲ್ ಹಾಗೂ ಭಾನುಶ್ರೀ ಮೆಹ್ರಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ 'ಡೀಲ್ ರಾಜಾ' ತೆರೆಗೆ ಬರಲು ಸಜ್ಜಾಗಿದೆ. ರಾಜ್ ಗೋಪಿ ಅವರು ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ 'ಡೀಲ್ ರಾಜಾ' ಇದೇ ಶುಕ್ರವಾರ, ಜುಲೈ 29 ರಂದು ಗ್ರ್ಯಾಂಡ್ ಆಗಿ ತೆರೆ ಕಾಣುತ್ತಿದೆ.

  ನಿರ್ಮಾಪಕರಾದ ಮೂರ್ತಿ, ರವೀಂದ್ರ ರೆಡ್ಡಿ, ಸುರೇಶ್ ಮತ್ತು ಶ್ರೀಕಾಂತ್ ಅವರು ಮೇಘದೂತ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿರುವ ಪಕ್ಕಾ ಕಾಮಿಡಿ ಸಿನಿಮಾ 'ಡೀಲ್ ರಾಜಾ' ಈ ವಾರ ಬೆಂಗಳೂರಿನ ಸಂತೋಷ್ ಚಿತ್ರಮಂದಿರ ಮತ್ತು ಇಡೀ ಕರ್ನಾಟಕದಾದ್ಯಂತ ತೆರೆ ಕಾಣುತ್ತಿದೆ.[ವಾವ್.! ಹೊಟ್ಟೆ ಕರಗಿಸಿ ಸ್ಲಿಮ್ ಆದ ಕೋಮಲ್ ಕುಮಾರ್]

  'ಕಥೆ-ಚಿತ್ರಕಥೆ-ನಿರ್ದೇಶನ ಪುಟ್ಟಣ್ಣ' ಚಿತ್ರದ ನಂತರ ಮತ್ತೆ ಗಾಂಧಿನಗರದತ್ತ ಮುಖ ಮಾಡಿರುವ ನಟ ಕೋಮಲ್ ಅವರಿಗೆ ಈ ಬಾರಿಯಾದ್ರೂ ಅದೃಷ್ಟ ಕುದುರುತ್ತಾ, ಅನ್ನೋದು ಇನ್ನೇನು ಕೆಲವು ದಿನಗಳಲ್ಲಿ ತಿಳಿದು ಬರಲಿದೆ.

  ಅಭಿನಯ್ ರಾಯ್ ಮ್ಯೂಸಿಕ್ ಕಂಪೋಸ್ ಮಾಡಿರುವ 'ಪದ್ಮಾವತಿ' ಹಾಡು ಈಗಾಗಲೇ ಸಾಕಷ್ಟು ರೆಸ್ಪಾನ್ಸ್ ಗಿಟ್ಟಿಸಿಕೊಂಡಿರುವ ಕಾರಣ, ಚಿತ್ರದ ಮೇಲೂ ಕೋಮಲ್ ಅಭಿಮಾನಿಗಳು ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.[ನಟ ಕೋಮಲ್ ನಂಬಿರುವ 'ಆ' ಪದ್ಮಾವತಿ ಬಗ್ಗೆ ಊರೆಲ್ಲಾ ಮಾತು.!]

  ಪಕ್ಕಾ ಕಾಮಿಡಿ ಹಾಗೂ ಕೌಟುಂಬಿಕ ಮನರಂಜನಾತ್ಮಕ 'ಡೀಲ್ ರಾಜಾ' ಚಿತ್ರದಲ್ಲಿ ಮಿತ್ರ, ಸಾಧು ಕೋಕಿಲಾ, ಸುಚೇಂದ್ರ ಪ್ರಸಾದ್ ಮತ್ತಿತ್ತರರು ಪ್ರಮುಖ ಪಾತ್ರ ವಹಿಸಿದ್ದಾರೆ.[ಆರ್.ಜೆ ಆಯ್ತು ಇದೀಗ ಸಿಂಗರ್ ಆದ ರಶ್ಮಿ]

  English summary
  Kannada Movie 'Deal Raja' all set to releasing on July 29th. Kannada Actor Komal Kumar, Actress Bhanushree Mehra inn the lead role. The movie is directed by Raj Gopi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X