'ದೇವರ ನಾಡಲ್ಲಿ' ಒಂದು ರೌಂಡ್ ಹಾಕಿ ಬರಲು ನೀವು ರೆಡಿನಾ?
ಪ್ರಕೃತಿಯ ಸೊಬಗಿನ ಜೊತೆ ಸಂಘರ್ಷವೂ ಇರುವ 'ದೇವರ ನಾಡಲ್ಲಿ' ಚಿತ್ರ ಈ ವಾರ ಬಿಡುಗಡೆ ಆಗಲಿದೆ. ಒಬ್ಬ ವ್ಯಕ್ತಿಯನ್ನು ಅಪರಾಧಿ ಎಂದು ಗುರುತಿಸಲು ಸಮಾಜ ಹೇಗೆ ಧರ್ಮ ಪ್ರೇರಿತವಾಗಿದೆ ಎಂಬುದರ ಸುತ್ತ ಕಥೆ ಹೆಣೆದಿರುವ ಸಿನಿಮಾ 'ದೇವರ ನಾಡಲ್ಲಿ'.
ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಬಿ.ಸುರೇಶ್ ನಿರ್ದೇಶನದ ಚಿತ್ರ ಇದು. ಕರ್ನಾಟಕದ ಕಡಲ ತೀರದಲ್ಲಿ ನಡೆದ ನೈಜ ಘಟನೆ ಆಧರಿಸಿರುವ ಸಿನಿಮಾ ಇದು. [ಪ್ರಕಾಶ್ ರಾಜ್ ಹೊಸ ಚಿತ್ರ 'ದೇವರ ನಾಡಲ್ಲಿ' ಟ್ರೇಲರ್]

ಮುಖ್ಯ ಭೂಮಿಕೆಯಲ್ಲಿ ಪ್ರಕಾಶ್ ರೈ (ಪ್ರಕಾಶ್ ರಾಜ್) ಕಾಣಿಸಿಕೊಂಡಿದ್ದಾರೆ. ಉಳಿದಂತೆ ಮಂಡ್ಯ ರಮೇಶ್, ಸಿಹಿ ಕಹಿ ಚಂದ್ರು, ಅಚ್ಯುತ್ ಕುಮಾರ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.
ಮಂಡ್ಯ ರಮೇಶ್ ಪುತ್ರಿ ದಿಶಾ ಮತ್ತು 'ನೀನಾಸಂ' ಪ್ರತಿಭೆ ಮನು ಹೆಗ್ದೆ 'ದೇವರ ನಾಡಲ್ಲಿ' ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಡುತ್ತಿರುವುದು ವಿಶೇಷ. ಹಂಸಲೇಖ ಸಂಗೀತ ನಿರ್ದೇಶನವಿರುವ 'ದೇವರ ನಾಡಲ್ಲಿ' ಚಿತ್ರ ಈ ವಾರ ರಿಲೀಸ್ ಆಗಲಿದೆ. 'ದೇವರ ನಾಡಲ್ಲಿ' ಒಂದು ರೌಂಡ್ ಹಾಕ್ಬರೋಕೆ ನೀವು ರೆಡಿನಾ.?


Click it and Unblock the Notifications











