ಶಿವಶಂಕರ್ ಫಿಲಂ ಫ್ಯಾಕ್ಟರಿ ಕಾರ್ಯಾರಂಭ
Next »
« Previous
Lucky Shankar
ಅದಾದ ನಂತರ, 12 ತಾಸುಗಳಲ್ಲಿ ಶೂಟ್ ಮಾಡಿ ದಾಖಲೆ ನಿರ್ಮಿಸಿದ 'ಪೊಲೀಸ್ ಸ್ಟೋರಿ-3' ಚಿತ್ರದ ನಿರ್ದೇಶಕರಲ್ಲೊಬ್ಬನಾಗಿ ಕೆಲಸ ಮಾಡಿದ್ದೇನೆ. ನಂತರ 'ಅನಾಥರು' ಹಾಗೂ 'ರಕ್ತಕಣ್ಣೀರು' ಚಿತ್ರದಲ್ಲಿಯೂ ಕೆಲಸ ಮಾಡಿದ್ದೇನೆ. ಸದ್ಯ ನಾನು ನಿರ್ದೇಶಿಸಿರುವ 'ದೇವ್ರಾಣೆ' ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ.
*ನಿಮ್ಮ 'ದೇವ್ರಾಣೆ' ಚಿತ್ರದ ಬಗ್ಗೆ ಹೇಳಿ...
'ದೇವ್ರಾಣೆ' ಚಿತ್ರದ ಚಿತ್ರೀಕರಣ ಇತ್ತೀಚಿಗಷ್ಟೇ ಮುಗಿದಿದೆ. ಚಿತ್ರದಲ್ಲಿ ಕಥೆಯೇ ಹೀರೋ. ಈ ಚಿತ್ರದಲ್ಲಿ ಒಟ್ಟೂ 20 ಪ್ರಮುಖ ಪಾತ್ರಗಳಿವೆ. ರವಿಶಂಕರ್ ಗೌಡ, ಸಾಧುಕೋಕಿಲ, ಬುಲೆಟ್ ಪ್ರಕಾಶ್, ತಬಲಾ ನಾಣಿ ಹಾಗೂ ರಾಜು ತಾಳಿಕೋಟೆ ಸೇರಿದಂತೆ 20 ಮಂದಿ ಪ್ರಮುಖ ಕಲಾವಿದರಾಗಿ ನಟಿಸಿದ್ದಾರೆ. ಸಾಧುಕೋಕಿಲ ಸಹೋದರ 'ಲಯಕೋಕಿಲ' ಸಂಗೀತ ಚಿತ್ರಕ್ಕಿದೆ. ಎಮ್ ಆರ್ ಸೀನು ಕ್ಯಾಮರಾ ಹಾಗೂ ಆರ್ ಡಿ ರವಿ ಸಂಕಲನವಿದೆ. ಚಿತ್ರಕ್ಕೆ ತಬ್ಲಾ ನಾಣಿ ಸಂಭಾಷಣೆ ಬರೆದಿದ್ದಾರೆ.
*ನಿಮ್ಮ 'ದೇವ್ರಾಣೆ' ಚಿತ್ರದಲ್ಲಿ ಋಷಿ ಕುಮಾರ ಸ್ವಾಮಿಜಿ 'ಐಟಂ' ಹಾಡಿನಲ್ಲಿ ಕುಣಿದಿದ್ದಾರಂತೆ!
ಖಂಡಿತ ಇಲ್ಲ, ನಮ್ಮ 'ದೇವ್ರಾಣೆ' ಚಿತ್ರದಲ್ಲಿ ಋಷಿ ಕುಮಾರ ಸ್ವಾಮಿಜಿ ಐಟಂ ಹಾಡಿನಲ್ಲಿ ದೇವ್ರಾಣೆಗೂ ಕುಣಿದಿಲ್ಲ. ಅವರು ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಚಿತ್ರೀಕರಣಕ್ಕೆಂದು ಅಂದು ಅವರು ಸ್ಟುಡಿಯೋಗೆ ಬಂದ ಸಮಯದಲ್ಲಿ ಅಲ್ಲೇ ಪಕ್ಕದಲ್ಲಿ ಹಾಕಲಾಗಿದ್ದ ಸೆಟ್ ಒಂದರಲ್ಲಿ 'ಐಟಂ ಸಾಂಗ್' ಚಿತ್ರೀಕರಣ ನಡೆಯುತ್ತಿತ್ತು. ಅದಾದ ಮೇಲೆ ಅವರ ಪಾತ್ರದ ಶೂಟಿಂಗ್ ಇತ್ತಾದ್ದರಿಂದ ಅವರು ಅಲ್ಲೇ ಪಕ್ಕದಲ್ಲಿ ಕುಳಿತಿದ್ದರು. ಅದರಿಂದ ಹಾಗೆ ಸುದ್ದಿಯಾಗಿರಬಹುದು ಅಷ್ಟೇ!.
*'ದೇವ್ರಾಣೆ' ಚಿತ್ರದ ಬಿಡುಗಡೆ ಯಾವಾಗ?
'ದೇವ್ರಾಣೆ' ಚಿತ್ರೀಕರಣ ಮುಗಿದಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ಅಂತಿಮ ಹಂತದಲ್ಲಿದೆ. ಇನ್ನೇನು ಸದ್ಯದಲ್ಲೇ ಆಡಿಯೋ ಬಿಡುಗಡೆ ನಡೆಯಲಿದ್ದು ಶೀಘ್ರವೇ ಚಿತ್ರ ಸೆನ್ಸಾರ್ ಆಗಲಿದೆ. ದಸರಾಗೆ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆಯಿದೆ. ಅಂದುಕೊಂಡಂತೆ ನಡೆದರೆ 'ದೇವ್ರಾಣೆ' ಚಿತ್ರವನ್ನು ದಸರಾ ಹಬ್ಬದ ವೇಳೆ ಪ್ರೇಕ್ಷಕರ ಮುಂದೆ ತರಲಿದ್ದೇವೆ.
*ಸದ್ಯಕ್ಕೆ ನಿಮ್ಮ ಮುಂದಿರುವ ಪ್ರಾಜೆಕ್ಟ್ ಗಳು?
ಸಾಧುಕೋಕಿಲ ನಿರ್ದೇಶನ ಹಾಗೂ ಶ್ರೀನಗರ ಕಿಟ್ಟಿ ಅಭಿನಯದ 'ಅನಾರ್ಕಲಿ' ಚಿತ್ರಕ್ಕೆ ಸಹನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದೇನೆ. ಈ ಚಿತ್ರಕ್ಕೆ ನಾನೇ ಕಥೆ ಬರೆದಿದ್ದೇನೆ. ಈ ಚಿತ್ರವನ್ನು ನಿರ್ಮಾಪಕ ಹಾಗೂ ವಿತರಕ ಸಮರ್ಥ್ ವೆಂಚರ್ಸ್ ನ ಪ್ರಸಾದ್ ಅವರು ನಿರ್ಮಿಸುತ್ತಿದ್ದಾರೆ. ನನ್ನ ನಿರ್ದೇಶನದಲ್ಲಿ ಮೂಡಿಬರಲಿರುವ ಇನ್ನೊಂದು ಚಿತ್ರದ ಸ್ಕ್ರಿಪ್ಟ್ ವರ್ಕ್ ನಡೆಯುತ್ತಿದೆ. ಮುಂದಿನ ಪುಟ ನೋಡಿ...
Next »
« Previous
More from Filmibeat
English summary
Notifications
Settings
Clear Notifications
Notifications
Use the toggle to switch on notifications
• Block for 8 hours
• Block for 12 hours
• Block for 24 hours
• Don't block
Gender
Select your Gender
• Male
• Female
• Others
Age
Select your Age Range
• Under 18
• 18 to 25
• 26 to 35
• 36 to 45
• 45 to 55
• 55+
X