»   » 'ಧೂಮ್-4' ಬಗ್ಗೆ ಮಾತಿಲ್ಲ, ಅಷ್ಟು ಬೇಗ 'ಧೂಮ್ -5' ಬಂದಿದೆ ನೋಡಿ.!

'ಧೂಮ್-4' ಬಗ್ಗೆ ಮಾತಿಲ್ಲ, ಅಷ್ಟು ಬೇಗ 'ಧೂಮ್ -5' ಬಂದಿದೆ ನೋಡಿ.!

Posted By:
Subscribe to Filmibeat Kannada

ಬಾಲಿವುಡ್ ನ ಹಿಟ್ ಸೀರೀಸ್ 'ಧೂಮ್', 'ಧೂಮ್-2', 'ಧೂಮ್-3' ಚಿತ್ರಗಳನ್ನ ನೀವು ನೋಡಿರಬಹುದು. 'ಧೂಮ್-4' ಬಗ್ಗೆ ಬಿಟೌನ್ ಅಂಗಳದಲ್ಲಿ ಇನ್ನೂ ಮಾತುಕತೆ ಹಂತದಲ್ಲಿದೆ. ಅಷ್ಟು ಬೇಗ, ಸ್ಯಾಂಡಲ್ ವುಡ್ ನಲ್ಲಿ 'ಧೂಮ್-5'ಗೆ ಚಾಲನೆ ನೀಡಲಾಗಿದೆ.

ನೀವು ನಂಬಿದ್ರೂ, ಬಿಟ್ರೂ...ಗಾಂಧಿನಗರದ ಖಾಸ್ ಖಬರ್ ಇದೇನೆ.! 'ಧೂಮ್ -5' ಚಿತ್ರದ ಮುಹೂರ್ತ ಸಮಾರಂಭ ಮೊನ್ನೆಯಷ್ಟೇ ಬೆಂಗಳೂರಿನ ಆರ್.ಟಿ.ನಗರದಲ್ಲಿರುವ ಶಿರಡಿ ಸಾಯಿ ದೇವಸ್ಥಾನದಲ್ಲಿ ನೆರವೇರಿತು.

kannada-movie-dhoom-5-shooting-starts

ಕೆ.ಎಸ್.ಪುಟ್ಟಣ್ಣಯ್ಯ, ಶಾಸಕರಾದ ಗೋಪಾಲಯ್ಯ, ಕೆ.ಎನ್.ಜಗದೀಶ್ ಸೇರಿದಂತೆ ಅನೇಕ ಗಣ್ಯರು ಆಗಮಿಸಿ 'ಧೂಮ್-5' ಚಿತ್ರತಂಡಕ್ಕೆ ಶುಭ ಕೋರಿದರು.

ಪ್ರತೀಕ್ ಗೌಡ ಹಾಗೂ ರಘು ನಿರ್ಮಾಣದ 'ಧೂಮ್-5' ಚಿತ್ರಕ್ಕೆ ಎಂ.ಎಸ್.ಪವನ್ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕಥೆ-ಚಿತ್ರಕಥೆ ಹಾಗೂ ಹಾಡುಗಳನ್ನು ಸ್ವತಃ ನಿರ್ದೇಶಕರೇ ಬರೆಯಲಿದ್ದಾರೆ. ಅರುಣ್ ಆಂಡ್ರ್ಯೂ ಸಂಗೀತ ನೀಡಲಿದ್ದಾರೆ.

ಅಂದ್ಹಾಗೆ, 'ಒರಟ' ಪ್ರಶಾಂತ್ ಸಹೋದರ ವಿಶೃತ್ ರಾಜ್, ಅನಿಲ್, ಮೋಹನ್, ಆದರ್ಶ್ ಹಾಗೂ ದಕ್ಷಿಣ್ ಎಂಬ ಐವರು 'ಧೂಮ್-5' ಚಿತ್ರದ ಪ್ರಮುಖ ಪಾತ್ರಧಾರಿಗಳು. ''ಇದೇ ಕಾರಣಕ್ಕೆ ಚಿತ್ರಕ್ಕೆ 'ಧೂಮ್-5' ಅಂತ ಟೈಟಲ್ ಇಡಲಾಗಿದೆ ಹೊರತು, ಬಾಲಿವುಡ್ ನ 'ಧೂಮ್' ಸೀರೀಸ್ ಗೂ ಈ ಚಿತ್ರಕ್ಕೂ ಸಂಬಂಧ ಇಲ್ಲ'' ಎನ್ನುತ್ತಾರೆ ನಿರ್ದೇಶಕರು.

'ಧೂಮ್-5' ಚಿತ್ರದ ಮುಹೂರ್ತ ಸಮಾರಂಭದ ಫೋಟೋಗಳು ಇಲ್ಲಿವೆ ನೋಡಿ...

-
-
-
-
-
English summary
Kannada Movie 'Dhoom-5' (Not to be confused with Bollywood 'Dhoom' series) shooting kick starts. The movie is directed by Pawan Kumar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada