ಕನ್ನಡ ಚಿತ್ರರಂಗದ ಖ್ಯಾತ ವಿತರಕ ನಾಗಪ್ರಸಾದ್ ನಿಧನ
ಕನ್ನಡ ಚಿತ್ರರಂಗದ ಹೆಸರಾಂತ ವಿತರಕ ನಾಗ ಪ್ರಸಾದ್ ವಿಧಿವಶರಾಗಿದ್ದಾರೆ. ನಿನ್ನೆ ರಾತ್ರಿ ಬೆಂಗಳೂರಿನಲ್ಲಿ ಅವರು ನಿಧನ ಹೊಂದಿದ್ದಾರೆ.
ಉಪೇಂದ್ರ ನಟನೆಯ 'ಗಾಡ್ ಫಾದರ್', ದುನಿಯಾ ವಿಜಯ್ ಅವರ 'ಭೀಮ ತೀರದಲ್ಲಿ', ರೂಪ ಐಯ್ಯರ್ ನಿರ್ದೇಶನದ 'ಚಂದ್ರ', ನಟ ದರ್ಶನ್ ಅವರ 'ಚಿಂಗಾರಿ' ಸೇರಿದಂತೆ ಅನೇಕ ಸಿನಿಮಾಗಳನ್ನು ರಾಜ್ಯಾದಂತ್ಯ ವಿತರಣೆ ಮಾಡಿದವರು ನಾಗಪ್ರಸಾದ್.
ಕಿಡ್ನಿ ವೈಪಲ್ಯದಿಂದ ಬಳಲುತ್ತಿದ್ದ ನಾಗ ಪ್ರಸಾದ್ ಅವರು ನಿನ್ನೆ ಮೃತರಾಗಿದ್ದು, ಇಂದು ಅವರ ಅಂತ್ಯಕ್ರಿಯೆ ನೆಡೆಯಲಿದೆ. ವಿಜಯನಗರದ ಪ್ರಸಾದ್ ಅವರ ನಿವಾಸದಲ್ಲಿ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ.

ನಿರ್ದೇಶಕ ಜಯತೀರ್ಥ ಸೇರಿದಂತೆ ಕನ್ನಡ ಚಿತ್ರರಂಗದ ಗಣ್ಯರು ನಾಗ ಪ್ರಸಾದ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
English summary
Kannada movie distributor naga prasad passes away yesterday (January 6th).


Click it and Unblock the Notifications